AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದಂಕಿ ಗಳಿಕೆ ಮಾಡಿದ 300 ಕೋಟಿ ರೂ. ಬಜೆಟ್​ನ ‘ಕಣ್ಣಪ್ಪ’ ಚಿತ್ರ

Kannappa Movie Collection: ವಿಷ್ಣು ಮಂಚು ನಿರ್ಮಿಸಿ ನಟಿಸಿರುವ ‘ಕಣ್ಣಪ್ಪ’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆಗಿಂತ ಕಡಿಮೆ ಗಳಿಕೆ ಮಾಡಿದೆ. 300 ಕೋಟಿಗೂ ಅಧಿಕ ಬಜೆಟ್ ಹೊಂದಿರುವ ಈ ಚಿತ್ರ ಕೇವಲ 9 ಒಂದಂಕಿ ಕಲೆಕ್ಷನ್ ಮಾಡಿದೆ. ರೊಮ್ಯಾಂಟಿಕ್ ಅಂಶಗಳಿಗೆ ಹೆಚ್ಚು ಒತ್ತು ನೀಡಿದ್ದು ಮತ್ತು ಅಸಮರ್ಪಕ ದೃಶ್ಯಗಳು ಚಿತ್ರಕ್ಕೆ ಹಿನ್ನಡೆಯಾಗಿವೆ.

ಒಂದಂಕಿ ಗಳಿಕೆ ಮಾಡಿದ 300 ಕೋಟಿ ರೂ. ಬಜೆಟ್​ನ ‘ಕಣ್ಣಪ್ಪ’ ಚಿತ್ರ
ಕಣ್ಣಪ್ಪ
ರಾಜೇಶ್ ದುಗ್ಗುಮನೆ
|

Updated on: Jun 28, 2025 | 7:34 AM

Share

ವಿಷ್ಣು ಮಂಚು (Vishnu Manchu) ನಟಿಸಿ ನಿರ್ಮಿಸಿರೋ ‘ಕಣ್ಣಪ್ಪ’ ಸಿಇಮಾ ಜೂನ್ 27ರಂದು ರಿಲೀಸ್ ಆಯಿತು. ಈ ಸಿನಿಮಾದ ಮೊದಲ ದಿನದ ಕಲೆಕ್ಷನ್ ಲೆಕ್ಕ ಸಿಕ್ಕಿದೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಕೇವಲ 9 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಪ್ಯಾನ್ ಇಂಡಿಯಾ ಚಿತ್ರ. ಜೊತೆಗೆ ಈ ಸಿನಿಮಾದ ಬಜೆಟ್ 300 ಕೋಟಿ ರೂಪಾಯಿಗೂ ಅಧಿಕವಾಗಿದೆ. ಸದ್ಯ ಈ ವಿಚಾರ ಫ್ಯಾನ್ಸ್ ಬೇಸರಕ್ಕೆ ಕಾರಣ ಆಗಿದೆ.

ಈ ಮೊದಲು ‘ರಾಮಾಯಣ’ದ ಕಥೆ ಇಟ್ಟುಕೊಂಡು ‘ಆದಿಪುರಷ್’ ಸಿನಿಮಾ ಮಾಡಲಾಗಿತ್ತು. ಈ ಚಿತ್ರದಲ್ಲಿ ಕಥೆಯನ್ನು ತಿರುಚಲಾಗಿದೆ ಎಂಬ ಆರೋಪ ಕೇಳಿ ಬಂತು. ಈ ಕಾರಣದಿಂದಲೇ ಸಿನಿಮಾ ಟ್ರೋಲ್ ಆಯಿತು ಮತ್ತು ಕಳಪೆ ವಿಮರ್ಶೆ ಪಡೆಯಿತು. ಈ ಘಟನೆ ಬಳಿಕವೂ ಯಾರೂ ಎಚ್ಚೆತ್ತುಕೊಂಡಂತೆ ಕಂಡು ಬರುತ್ತಿಲ್ಲ. ‘ಕಣ್ಣಪ್ಪ’ ಚಿತ್ರ ಕೂಡ ಇದೇ ಹಾದಿ ಹಿಡಿದಿದೆ.

‘ಕಣ್ಣಪ್ಪ’ ಸಿನಿಮಾ ಪೌರಾಣಿಕ ವಿಚಾರವನ್ನು ಹೇಳಲಾಗಿದೆ. ಆದರೆ, ಇದರಲ್ಲಿ ರೊಮ್ಯಾಂಟಿಕ್ ಟ್ರ್ಯಾಕ್​ ಮೇಲೆ ಹೆಚ್ಚು ಗಮನ ಹರಿಸಲಾಗಿದೆ. ಭಾವನಾತ್ಮಕ ವಿಚಾರಗಳನ್ನು ಸರಿಯಾಗಿ ಹೇಳಲು ನಿರ್ದೇಶಕರು ವಿಫಲವಾಗಿದ್ದಾರೆ. ಬೇಕಾಬಿಟ್ಟಿ ಆ್ಯಕ್ಷನ್ ದೃಶ್ಯಗಳನ್ನು ಇಡಲಾಗಿದ್ದು, ಫೈಟ್​ಗೂ ಸಿನಿಮಾಗೂ ಯಾವುದೇ ಸಂಬಂಧವೇ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದು ಸಿನಿಮಾಗೆ ದೊಡ್ಡ ಹಿನ್ನಡೆಯನ್ನು ಉಂಟು ಮಾಡಿದೆ.

ಇದನ್ನೂ ಓದಿ
Image
‘ಪಂಕಜಾ..’ ಹಾಡಿಗೆ ಕುಣಿದಿದ್ದ ಶೆಫಾಲಿ ಜರಿವಾಲ ಹೃದಯಘಾತದಿಂದ ಸಾವು  
Image
‘ಸಿತಾರೆ ಜಮೀನ್ ಪರ್​​’: ಆಮಿರ್ ಖಾನ್ ರಿಮೇಕ್ ಮಾಡಿದ್ದೇಕೆ? ಉತ್ತರಿಸಿದ ನಟ
Image
ಪಿಯುಸಿಯಲ್ಲಿ ಟಾಪರ್, ಐಎಎಸ್ ಓದಬೇಕಿದ್ದ ಯುವತಿ ನಟಿಯಾದ ಕಥೆ
Image
ವಿಚ್ಛೇದನ ಹಂತದಲ್ಲಿದ್ದ ನಟಿ ಈಗ ಪ್ರೆಗ್ನೆಂಟ್; ಆದರೆ, ಪತಿಗೇ ಗೊತ್ತೇ ಇಲ್ಲ

‘ಕಣ್ಣಪ್ಪ’ ಸಿನಿಮಾ ತೆಲುಗು ಜೊತೆ ತಮಿಳು, ಕನ್ನಡ ಮೊದಲಾದ ಭಾಷೆಗಳಲ್ಲಿ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ವಿಷ್ಣು ಮಂಚು ಜೊತೆ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್​ಲಾಲ್ ಮೊದಲಾದವರು ನಟಿಸಿದ್ದಾರೆ. ಆದಾಗ್ಯೂ ಸಿನಿಮಾ ಉತ್ತಮ ಗಳಿಕೆ ಮಾಡಲು ವಿಫಲವಾಗಿದೆ. ಭಾರತದ ಬಾಕ್ಸ್ ಆಫೀಸ್​ನಲ್ಲಿ ಚಿತ್ರದ ಗಳಿಕೆ ಕೇವಲ 9 ಕೋಟಿ ರೂಪಾಯಿ.

ಇದನ್ನೂ ಓದಿ: ‘ಕಣ್ಣಪ್ಪ’ ಸಿನಿಮಾ ನೋಡಿ ಕೇಸ್ ಹಾಕಲು ನಿರ್ಧರಿಸಿದ ಪ್ರಭಾಸ್ ಅಭಿಮಾನಿ

‘ಕಣ್ಣಪ್ಪ’ ಸಿನಿಮಾ ಬುಕ್ ಮೈ ಶೋನಲ್ಲೂ ಅಂಥ ಉತ್ತಮ ರೇಟಿಂಗ್ ಏನೂ ಪಡೆದಿಲ್ಲ. ಚಿತ್ರಕ್ಕೆ ಸದ್ಯ 7.5 ರೇಟಿಂಗ್ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ಏರಿಕೆ ಕಂಡರೆ ನಿರ್ಮಾಪಕರ ಮೊಗದಲ್ಲಿ ನಗು ಮೂಡಲಿದೆ. ಇಲ್ಲವಾದಲ್ಲಿ ನಿರ್ಮಾಪಕರಿಗೆ ಭಾರೀ ನಷ್ಟ ಉಂಟಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.