
ಶುಕ್ರವಾರ ಬಂದರೆ ಸಿನಿಪ್ರಿಯರಿಗೆ ಹಬ್ಬ. ಹೊಸ ಸಿನಿಮಾ (New Film) ನೋಡಿ ಕಣ್ತುಂಬಿಕೊಳ್ಳುವ ಉತ್ಸಾಹ. ಸಿಕ್ಕಾಪಟ್ಟೆ ಪೈಪೋಟಿ ಇರುವ ಈ ಕಾಲದಲ್ಲಿ ಒಂದೇ ದಿನ ಹಲವು ಸಿನಿಮಾಗಳು ಬಿಡುಗಡೆ ಆಗುತ್ತವೆ. ಆ ಪೈಕಿ ಯಾವುದನ್ನು ನೋಡಬೇಕು ಎಂಬ ಗೊಂದಲ ಸಹಜ. ಈ ವಾರ (ಜೂನ್ 27) ಕೂಡ ಹಲವು ಸಿನಿಮಾಗಳು ತೆರೆ ಕಾಣುತ್ತಿವೆ. ಆ ಪೈಕಿ ‘ಕಣ್ಣಪ್ಪ’ ಸಿನಿಮಾ (Kannappa) ಪ್ರಮುಖವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದೆ. ಸ್ಟಾರ್ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಕಣ್ಣಪ್ಪ’ ಸಿನಿಮಾಗೆ ಪೈಪೋಟಿ ನೀಡಲು ಇನ್ನೂ ಹಲವು ಸಿನಿಮಾಗಳು ತೆರೆಗೆ ಬರುತ್ತಿವೆ.
‘ಕಣ್ಣಪ್ಪ’ ಸಿನಿಮಾದಲ್ಲಿ ವಿಷ್ಣು ಮಂಚು ಹಾಗೂ ಮೋಹನ್ ಬಾಬು ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಅಕ್ಷಯ್ ಕುಮಾರ್, ಪ್ರಭಾಸ್, ಮೋಹನ್ಲಾಲ್ ಮುಂತಾದವರು ಈ ಚಿತ್ರದಲ್ಲಿ ಅತಿಥಿ ಪಾತ್ರಗಳನ್ನು ಮಾಡಿದ್ದಾರೆ. ಆ ಕಾರಣದಿಂದ ಹೈಪ್ ಜಾಸ್ತಿ ಆಗಿದೆ. ಶರತ್ ಕುಮಾರ್, ಕಾಜಲ್ ಅಗರ್ವಾಲ್ ಮುಂತಾದ ಕಲಾವಿದರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ತೆಲುಗು, ಕನ್ನಡ, ಹಿಂದಿ ಮುಂತಾದ ಭಾಷೆಗಳಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ.
ಹಿಂದಿಯಲ್ಲಿ ‘ಮಾ’ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಕಾಜೋಲ್ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಇದು ಹಾರರ್ ಸಿನಿಮಾ ಎಂಬುದು ವಿಶೇಷ. ಹಾಗಿದ್ದರೂ ಕೂಡ ಸೆನ್ಸಾರ್ ಮಂಡಳಿಯಿಂದ ‘ಯು/ಎ’ ಪ್ರಮಾಣ ಪತ್ರ ಪಡೆದಿದೆ. ಅಜಯ್ ದೇವಗನ್ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಟ್ರೇಲರ್ ಮೂಲಕ ‘ಮಾ’ ಸಿನಿಮಾ ಗಮನ ಸೆಳೆದಿದೆ.
ಕನ್ನಡದಲ್ಲಿ ‘ಅಥಣಿ’, ‘ಅವನಿರಬೇಕಿತ್ತು’, ‘ಬ್ಲಡಿ ಬಾಬು’, ‘ರಾಜರತ್ನಾಕರ’, ‘ತಿಮ್ಮನ ಮೊಟ್ಟೆಗಳು’, ‘ಎಕ್ಸ್ ಆ್ಯಂಡ್ ವೈ’ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಈಗಾಗಲೇ ಬಿಡುಗಡೆ ಆಗಿರುವ ‘ಮಾದೇವ’, ‘ಎಡಗೈಯೇ ಅಪಘಾತಕ್ಕೆ ಕಾರಣ’, ‘ಸಂಜು ವೆಡ್ಸ್ ಗೀತಾ 2’ ಸಿನಿಮಾಗಳು ಕೂಡ ಪ್ರದರ್ಶನ ಆಗುತ್ತಿವೆ. ಬಾಕ್ಸ್ ಆಫೀಸ್ನಲ್ಲಿ ಈ ಎಲ್ಲ ಸಿನಿಮಾಗಳ ನಡುವೆ ಪೈಪೋಟಿ ಇದೆ.
ಇದನ್ನೂ ಓದಿ: ‘ಕಣ್ಣಪ್ಪ’ ಸಿನಿಮಾಕ್ಕೆ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ಲಾಲ್ ಪಡೆದ ಸಂಭಾವನೆ ಎಷ್ಟು?
ಹಾಲಿವುಡ್ನಲ್ಲಿ ಬ್ರಾಡ್ ಪಿಟ್ ನಟನೆಯ ‘ಎಫ್ 1: ದಿ ಮೂವೀ’ ಕೂಡ ಇದೇ ವಾರ ತೆರೆಕಾಣುತ್ತಿದೆ. ಕಳೆದ ವಾರ ಬಿಡುಗಡೆ ಆಗಿ ಗಮನ ಸೆಳೆದಿರುವ ಹಿಂದಿಯ ‘ಸಿತಾರೆ ಜಮೀನ್ ಪರ್’, ತಮಿಳಿನ ‘ಕುಬೇರ’ ಸಿನಿಮಾಗಳು ಕೂಡ ಈ ವೀಕೆಂಡ್ನಲ್ಲಿ ಉತ್ತಮ ಪ್ರದರ್ಶನ ಕಾಣಲಿವೆ. ಹೊಸ ಸಿನಿಮಾಗಳಿಗೆ ಈ ಚಿತ್ರಗಳು ಪೈಪೋಟಿ ನೀಡುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.