‘ಕಾಂತಾರ’ ಖಳನಟನಿಗೆ ತೆರೆಯಿತು ಅದೃಷ್ಟದ ಬಾಗಿಲು: ಸಮಂತಾ ಜೊತೆ ಹೊಸ ಸಿನಿಮಾ
ಇಷ್ಟು ವರ್ಷ ಬಾಲಿವುಡ್ನಲ್ಲಿ ಬ್ಯುಸಿ ಆಗಿದ್ದ ಗುಲ್ಶನ್ ದೇವಯ್ಯ ಅವರು ಈಗ ದಕ್ಷಿಣದಲ್ಲಿ ಮಿಂಚಲು ಆರಂಭಿಸಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿರುವ ಅವರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತಿವೆ. ಸಮಂತಾ ರುತ್ ಪ್ರಭು ಜೊತೆ ‘ಮಾ ಇಂಟಿ ಬಂಗಾರಂ’ ಸಿನಿಮಾದಲ್ಲಿ ಗುಲ್ಶನ್ ದೇವಯ್ಯ ಅವರು ನಟಿಸುತ್ತಿದ್ದಾರೆ.

ಸೂಪರ್ ಹಿಟ್ ಆಗಿರುವ ‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾದಿಂದ ಹಲವರ ಬದುಕು ಬದಲಾಗಿದೆ. ಈ ಸಿನಿಮಾದಲ್ಲಿ ಕೆಲಸ ಮಾಡಿದ ಅನೇಕರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತಿವೆ. ನಟ ರಿಷಬ್ ಶೆಟ್ಟಿ ಅವರು ಈಗಾಗಲೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ನಟಿ ರುಕ್ಮಿಣಿ ವಸಂತ್ ಅವರಿಗೆ ಕೂಡ ಬಹುಭಾಷೆಯಿಂದ ಅವಕಾಶಗಳು ಹರಿದುಬರುತ್ತಿವೆ. ಈ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಂಡ ಗುಲ್ಶನ್ ದೇವಯ್ಯ (Gulshan Devaiah) ಅವರು ಸಹ ಈಗ ಬಹುಬೇಡಿಕೆಯ ನಟ ಆಗಿದ್ದಾರೆ. ಈವರೆಗೂ ಬಾಲಿವುಡ್ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಅವರು ಈಗ ದಕ್ಷಿಣ ಭಾರತದಲ್ಲಿ ಕೂಡ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ.
ದಕ್ಷಿಣದ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಕಾಣಿಸಿಕೊಂಡ ಬಳಿಕ ಚಾರ್ಮ್ ಹೆಚ್ಚಿಸಿಕೊಂಡ ಬಾಲಿವುಡ್ ಸ್ಟಾರ್ಗಳು ಹಲವರಿದ್ದಾರೆ. ಅಂಥವರ ಸಾಲಿಗೆ ಗುಲ್ಶನ್ ದೇವಯ್ಯ ಕೂಡ ಸೇರ್ಪಡೆ ಆಗಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಹಿಟ್ ಆಗುತ್ತಿದ್ದಂತೆಯೇ ಸಮಂತಾ ರುತ್ ಪ್ರಭು ಜೊತೆ ಹೊಸ ಸಿನಿಮಾದಲ್ಲಿ ನಟಿಸುವ ಅವಕಾಶ ಗುಲ್ಶನ್ ದೇವಯ್ಯ ಅವರಿಗೆ ಸಿಕ್ಕಿದೆ.
ಗುಲ್ಶನ್ ದೇವಯ್ಯ ಅವರು ನಟಿಸಿದ ಮೊದಲ ಕನ್ನಡ ಸಿನಿಮಾ ‘ಕಾಂತಾರ: ಚಾಪ್ಟರ್ 1’. ಈಗ ಅವರಿಗೆ ತೆಲುಗಿನಿಂದ ಮೊದಲ ಸಿನಿಮಾದ ಆಫರ್ ಸಿಕ್ಕಿದೆ. ಸಮಂತಾ ಅವರು ‘ಮಾ ಇಂಟಿ ಬಂಗಾರಂ’ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಈ ಸಿನಿಮಾದ ಪೋಸ್ಟರ್ ಅನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ಗುಲ್ಶನ್ ದೇವಯ್ಯ ಅವರು ‘ನಾನು ಕೂಡ ಇದ್ದೇನೆ’ ಎಂದು ಪೋಸ್ಟ್ ಮಾಡಿದ್ದಾರೆ.
ಸಮಂತಾ ರುತ್ ಪ್ರಭು ಅವರು ನಿರ್ಮಾಪಕಿ ಆಗಿಯೂ ಬ್ಯುಸಿ ಆಗಿದ್ದಾರೆ. ಅವರ ಪ್ರೊಡಕ್ಷನ್ ಹೌಸ್ ಮೂಲಕ ‘ಮಾ ಇಂಟಿ ಬಂಗಾರಂ’ ಸಿನಿಮಾ ಸೆಟ್ಟೇರಿದೆ. ‘ಓಹ್ ಬೇಬಿ’ ಖ್ಯಾತಿಯ ನಿರ್ದೇಶಕಿ ನಂದಿನಿ ರೆಡ್ಡಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಮುಹೂರ್ತ ಸಮಾರಂಭದ ವಿಡಿಯೋವನ್ನು ಸಮಂತಾ ಅವರು ಹಂಚಿಕೊಂಡು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಇದನ್ನೂ ಓದಿ: ‘ಕಾಂತಾರ’ ಗೆಲುವಿನ ಬಳಿಕ ಅದ್ದೂರಿಯಾಗಿ ದೀಪಾವಳಿ ಆಚರಿಸಿದ ರಿಷಬ್ ಶೆಟ್ಟಿ ಫ್ಯಾಮಿಲಿ
‘ಕಾಂತಾರ: ಚಾಪ್ಟರ್ 1’ ಸಿನಿಮಾದ ಮೂಲಕ ಗುಲ್ಶನ್ ದೇವಯ್ಯ ಅವರು ಕನ್ನಡದ ಸಿನಿಮಾ ಪ್ರೇಕ್ಷಕರಿಗೆ ಪರಿಚಯಗೊಂಡಿದ್ದಾರೆ. ತೆಲುಗು ಮಂದಿ ಕೂಡ ಈ ಸಿನಿಮಾದಲ್ಲಿ ಅವರ ನಟನೆಯನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಕುಲಶೇಖರ ಎಂಬ ರಾಜನ ಪಾತ್ರದಲ್ಲಿ ಗುಲ್ಶನ್ ದೇವಯ್ಯ ಅವರು ಮಿಂಚಿದ್ದಾರೆ. ಈಗ ಅವರು ಸಮಂತಾ ಜೊತೆ ‘ಮಾ ಇಂಟಿ ಬಂಗಾರಂ’ ಸಿನಿಮಾದ ಶೂಟಿಂಗ್ ಆರಂಭಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




