AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕರಿಂಕಾಳಿ ಅಲ್ಲೇ..’ ಹಾಡು ನೀವಂದುಕೊಂಡಂತಿಲ್ಲ; ಇದರ ಮೂಲದ ಬಗ್ಗೆ ಇಲ್ಲಿದೆ ಮಾಹಿತಿ

‘ಆವೇಶಂ’ ಸಿನಿಮಾದಲ್ಲಿ ಬರೋ ‘ರಂಗಾ ರೀಲ್’ ಸಖತ್ ವೈರಲ್ ಆಗಿದೆ. ರಂಗಾ ರೌಡಿ (ಫಹಾದ್ ಫಾಸಿಲ್) ಈ ಹಾಡನ್ನು ಬಳಕೆ ಮಾಡಿಕೊಂಡು ರೀಲ್ಸ್ ಮಾಡಿರುತ್ತಾರೆ. ಆ ಬಳಿಕ ಅನೇಕ ಸೆಲೆಬ್ರಿಟಿಗಳು ಇದಕ್ಕೆ ರೀಲ್ಸ್ ಮಾಡಿದ್ದಾರೆ. ಸ

‘ಕರಿಂಕಾಳಿ ಅಲ್ಲೇ..’ ಹಾಡು ನೀವಂದುಕೊಂಡಂತಿಲ್ಲ; ಇದರ ಮೂಲದ ಬಗ್ಗೆ ಇಲ್ಲಿದೆ ಮಾಹಿತಿ
ಫಹಾದ್
 ಶ್ರೀಲಕ್ಷ್ಮೀ ಎಚ್
| Edited By: |

Updated on:May 12, 2024 | 8:47 AM

Share

ಇತ್ತೀಚೆಗೆ ರಿಲೀಸ್ ಆಗಿರೋ ಮಲಯಾಳಂನ ‘ಆವೇಶಂ’ ಸಿನಿಮಾ (Avesham Movie) ಸೂಪರ್ ಹಿಟ್ ಆಗಿದೆ. ಈ ಚಿತ್ರ ದೊಡ್ಡ ಮಟ್ಟದ ಗಳಿಕೆ ಮಾಡಿದೆ. ಒಟಿಟಿಯಲ್ಲಿ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಚಿತ್ರದಲ್ಲಿ ಕಥಾ ನಾಯಕ ಫಹಾದ್ ಫಾಸಿಲ್ ಅವರು ‘ಕರಿಂಕಾಳಿ ಅಲ್ಲೇ ಕೊಡುಂಗಲ್ಲೂರ್ ವಾಳಣ ಪೆಣ್ಣಾಲು..’ ಹಾಡಿಗೆ ರೀಲ್ಸ್ ಮಾಡುತ್ತಾರೆ. ಈ ಹಾಡು ಸಖತ್ ಹಿಟ್ ಆಗಿದೆ. ಆ ಬಳಿಕ ಈ ಹಾಡಿನ ವೀವ್ಸ್ ಕೂಡ ಹೆಚ್ಚಿದೆ. ಅಸಲಿಗೆ ಇದು ಯಾವ ಸಾಂಗ್? ಈ ಹಾಡಿನ ವಿಶೇಷತೆ ಏನು ಎನ್ನುವ ಬಗ್ಗೆ ಇಲ್ಲಿದೆ ವಿವರ.

‘ಆವೇಶಂ’ ಸಿನಿಮಾದಲ್ಲಿ ಬರೋ ‘ರಂಗಾ ರೀಲ್’ ಸಖತ್ ವೈರಲ್ ಆಗಿದೆ. ರಂಗಾ ರೌಡಿ (ಫಹಾದ್ ಫಾಸಿಲ್) ಈ ಹಾಡನ್ನು ಬಳಕೆ ಮಾಡಿಕೊಂಡು ರೀಲ್ಸ್ ಮಾಡಿರುತ್ತಾರೆ. ಆ ಬಳಿಕ ಅನೇಕ ಸೆಲೆಬ್ರಿಟಿಗಳು ಇದಕ್ಕೆ ರೀಲ್ಸ್ ಮಾಡಿದ್ದಾರೆ. ಸದ್ಯ ಐಪಿಲ್ ಹವಾ ಜೋರಾಗಿದೆ. ಸುನಿಲ್ ನರೈನ್ ರೀತಿಯ ವಿದೇಶಿ ಆಟಗಾರರು ಕೂಡ ಈ ಹಾಡಿಗೆ ರಿಲ್ಸ್ ಮಾಡಿದ್ದಾರೆ. ಮುಂಬೈ ಪೊಲೀಸರು ಕೂಡ ಇದನ್ನು ಜಾಗೃತಿ ಕಾರ್ಯಕ್ರಮಕ್ಕೆ ಬಳಕೆ ಮಾಡಿದ್ದರು ಅನ್ನೋದು ವಿಶೇಷ. ಇದು ಹಾಡಿನ ಕ್ರೇಜ್​ಗೆ ಇರೋ ಸಾಕ್ಷಿ. ಅಂದಹಾಗೆ, ಇದು ಸಿನಿಮಾಗಾಗಿ ಮಾಡಿದ ಸಾಂಗ್ ಅಲ್ಲ. ಇದು ಆಲ್ಬಂ ಸಾಂಗ್.

ಮ್ಯೂಸಿಕ್ ಡೈರೆಕ್ಟರ್ ಶೈಜು ಆವರಣ್ ಹಾಗೂ ಗೀತ ಸಾಹಿತಿ ಕಣ್ಣನ್ ಮಂಗಲತಾ ಅವರು ಈ ಸಾಂಗ್​ನ 2022ರಲ್ಲಿ ಹೊರತಂದರು. ಇದೇ ತಂಡ ಈ ಮೊದಲು ‘ಎಲ್ಲೋಲಂ ತರಿ ಪೊನ್ನೆಂಟಿನಾ’ ಟ್ರ್ಯಾಕ್​ನ ತಂದಿದ್ದರು. ಆ ಬಳಿಕ ಈ ಹಾಡನ್ನು ‘ಜೋ ಜೋ’ ಚಿತ್ರದಲ್ಲಿ ಬಳಕೆ ಮಾಡಲಾಗಿತ್ತು. ‘ಕರಿಂಕಾಳಿ’ ಹಾಡು ಕಾಳಿ ಮಾತೆಗಾಗಿ ಬರೆದಿರೋ ಹಾಡು. ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಿಟ್ ಆಗಿದೆ. ಕನ್ನಡ, ಹಿಂದಿ ಮಂದಿಯೂ ಇದನ್ನು ಕೇಳುತ್ತಿದ್ದಾರೆ. ರೀಲ್ಸ್ ಮಾಡುತ್ತಿದ್ದಾರೆ.

‘ಪ್ರೇಕ್ಷಕರ ಬೆಂಬಲ ಮತ್ತು ದೇವಿಯ ಆಶೀರ್ವಾದದಿಂದಾಗಿ ಈ ಹಾಡು ಮಲಯಾಳಂ ಭಕ್ತಿ ಸಂಗೀತ ಕ್ಷೇತ್ರದ ಇತಿಹಾಸದಲ್ಲಿ ಅತಿದೊಡ್ಡ ಹಿಟ್ ಎನಿಸಿಕೊಂಡಿದೆ’ ಎಂದು ಶೈಜು ಹೇಳಿದ್ದಾರೆ. ‘ನಾವು ಒಂದೆಡೆ ಸೇರಿದಾಗ ಇದನ್ನು ಹಾಡುತ್ತೇವೆ. ನಂತರ ಇದನ್ನು ವಿಡಿಯೋ ಸಾಂಗ್ ಆಗಿ ಬದಲಾಯಿಸಿದೆವು’ ಎಂದಿದ್ದಾರೆ’ ಅವರು.

‘ಸಿನಿಮಾ ರಿಲೀಸ್ ಆಗುವುದಕ್ಕೂ 3 ತಿಂಗಳು ಮೊದಲು ಆವೇಶಂ ತಂಡದವರು ಕರೆ ಮಾಡಿ ಈ ಹಾಡಿನ ಹಕ್ಕು ಬೇಕು ಎಂದರು. ನಾವು ಥ್ರಿಲ್ ಆದೆವು. ನಾವು ಮೂರು ಬಾರಿ ಸಿನಿಮಾ ನೋಡಿದ್ದೇವೆ. ಸಿನಿಮಾದ ಸಾಂಗ್​ ನೀಡಿದ ಗೆಲುವು ನಮಗೆ ಖುಷಿ ನೀಡಿದೆ. ಭಕ್ತಿಗೀತೆಗಳನ್ನು ಗೌರವದಿಂದ ಪರಿಗಣಿಸಬೇಕು. ನಮ್ಮ ಕಲೆ ಹೆಚ್ಚು ಜನರನ್ನು ತಲುಪಿದೆ ಎಂಬುದಕ್ಕೆ ಖುಷಿ ಇದೆ. ಎಲ್ಲಿಯವರೆಗೆ ಹಾಡಿಗೆ ಅಗೌರವ ಆಗುವುದಿಲ್ಲವೋ ಅಲ್ಲಿಯವರೆಗೆ ನಮಗೆ ಯಾವುದೇ ತೊಂದರೆ ಇಲ್ಲ’ ಎಂದಿದ್ದಾರೆ ಶೈಜು.

ಇದನ್ನೂ ಓದಿ: ಫಹಾದ್ ಫಾಸಿಲ್ ಹಿಂದಿ ಸಿನಿಮಾಗಳಿಂದ ದೂರ ಇರೋದೇಕೆ? ಕಾರಣ ಕೊಟ್ಟ ನಟ

ಆವೇಶಂ ಸಿನಿಮಾ ಬಗ್ಗೆ

‘ಆವೇಶಂ’ ಸಿನಿಮಾದಲ್ಲಿ ಫಹಾದ್ ಫಾಸಿಲ್ ಹೀರೋ ಆಗಿ ನಟಿಸಿದ್ದಾರೆ. ಇದು ಬೆಂಗಳೂರಲ್ಲಿ ನಡೆಯೋ ಕಥೆ. ರಂಗಾ ಬೆಂಗಳೂರಲ್ಲಿ ದೊಡ್ಡ ರೌಡಿ. ಆತ ಮಲಯಾಳಿ. ಆತನಿಗೆ ಬೆಂಗಳೂರಲ್ಲಿ ಮೂರು ಮಲಯಾಳಿ ಬಾಯ್ಸ್ ಪರಿಚಯ ಆಗುತ್ತದೆ. ಅಲ್ಲಿಂದ ಕಥೆ ಶುರುವಾಗುತ್ತದೆ. ಮುಂದೇನಾಗುತ್ತದೆ ಅನ್ನೋದೇ ಕಥೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:45 am, Sun, 12 May 24