‘ಎಲ್ಲರೂ ಫಾರ್ಮ್ಹೌಸ್ಗೆ ಕರೀತಾರೆ, ಟಚ್ ಮಾಡಿದ್ದಕ್ಕೆ 25 ಲಕ್ಷ ಕೊಡ್ತಾರೆ’; ಒರಿ
ಇತ್ತೀಚೆಗೆ ಒರಿ ಅವರು ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ್ದರು. ಕೆಲಸ ಮಾಡದೆ ಇರಲು ಕಾರಣ ಏನು ಎಂಬುದನ್ನು ಅವರು ರಿವೀಲ್ ಮಾಡಿದ್ದಾರೆ. ‘ಸಿನಿಮಾ ಅಥವಾ ಶೋಗಳನ್ನು ಮಾಡಲು ನನಗೆ ಇಷ್ಟ ಇಲ್ಲ. ಕಷ್ಟಪಟ್ಟು ಕೆಲಸ ಮಾಡುವ ಬಗ್ಗೆ ಯಾರು ಯೋಚಿಸುತ್ತಾರೆ ಹೇಳಿ’ ಎಂದಿದ್ದಾರೆ ಅವರು.
ಒರ್ಹಾನ್ ಅವತ್ರಮಣಿ (Orhan Awatramani) ಅವರು ಒರಿ ಎಂದೇ ಫೇಮಸ್. ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಖ್ಯಾತಿ ಪಡೆದಿದ್ದಾರೆ. ಸಾರ್ವಜನಿವಾಗಿ, ಕೆಲವು ಖಾಸಗಿ ಕಾರ್ಯಕ್ರಮಗಳಿಗೆ ಭಾಗಿ ಆದರೆ ಲಕ್ಷಗಟ್ಟಲೆ ಹಣ ಸಿಗಲಿದೆ ಎಂದು ಅವರು ಈ ಮೊದಲು ಹೇಳಿಕೊಂಡಿದ್ದರು. ಅವರು ಯಾವುದೇ ಕೆಲಸ ಮಾಡುತ್ತಿಲ್ಲ. ಈಗ ಅವರಿಗೆ ಇರೋ ಬೇಡಿಕೆ ಹೆಚ್ಚಿದೆಯಂತೆ. ಕರಣ್ ಜೋಹರ್ ಅವರ ಧರ್ಮ ಕೋರ್ಸ್ಟೋನ್ ಏಜೆನ್ಸಿ ಈಗ ಇವರ ಈವೆಂಟ್ಗಳನ್ನು ಮ್ಯಾನೇಜ್ ಮಾಡುತ್ತಿದ್ದಾರಂತೆ.
ಇತ್ತೀಚೆಗೆ ಒರಿ ಅವರು ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ್ದರು. ಕೆಲಸ ಮಾಡದೆ ಇರಲು ಕಾರಣ ಏನು ಎಂಬುದನ್ನು ಅವರು ರಿವೀಲ್ ಮಾಡಿದ್ದಾರೆ. ‘ಸಿನಿಮಾ ಅಥವಾ ಶೋಗಳನ್ನು ಮಾಡಲು ನನಗೆ ಇಷ್ಟ ಇಲ್ಲ. ಕಷ್ಟಪಟ್ಟು ಕೆಲಸ ಮಾಡುವ ಬಗ್ಗೆ ಯಾರು ಯೋಚಿಸುತ್ತಾರೆ ಹೇಳಿ. ಯಾರೂ ಯೋಚಿಸುವುದಿಲ್ಲ. ನನಗೆ ಕೆಲಸ ಅಂದರೆ ಬೇಸರ. ಟಿವಿ, ಸಿನಿಮಾಗಳಲ್ಲಿ ತುಂಬಾನೇ ಕೆಲಸ ಇರುತ್ತದೆ. ಈ ಕ್ಷೇತ್ರದಲ್ಲಿ ಕೆಲಸ ಅನ್ನೋದು ಮುಗಿಯೋದೆ ಇಲ್ಲ. ಮನೆಗೂ ನೀವು ಕೆಲಸವನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ನಮ್ಮ ಜೀವನ ಕೆಲಸದ ಜೊತೆಯೇ ಸಾಗುತ್ತದೆ. ಇದು ಸುಲಭ ಎಂದು ಜನರಿಗೆ ಅನಿಸುತ್ತದೆ. ಆದರೆ, ಸುಲಭ ಇಲ್ಲ’ ಎಂದಿದ್ದಾರೆ ಅವರು.
‘ನಾನು ಚೀಪ್ ತರ ಕಾಣ್ತೀನಾ? ನೀವೇ ಒಂದು ಫೋಟೋ ಕೇಳಿದರೆ 25 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತೇನೆ. ನಾನಾಗೇ ಬಂದು ಫೋಟೋ ಕ್ಲಿಕ್ಕಿಸಿಕೊಂಡರೆ ಹಣ ಇಲ್ಲ. ಯಾರಾದರೂ ಬಂದು ಟಚ್ ಮಾಡುವಂತೆ ಕೇಳಿದರೆ 20 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತೇನೆ’ ಎಂದು ಒರಿ ಹೇಳಿದ್ದಾರೆ. ಇದನ್ನು ಕೇಳಿ ಎಲ್ಲರಿಗೂ ಶಾಕ್ ಆಗಿದೆ. ಒರಿ ಅವರು ತಮ್ಮದೇ ಆದ ತಂಡ ಹೊಂದಿದ್ದಾರೆ. ‘ಎಲ್ಲರೂ ಫಾರ್ಮ್ಹೌಸ್ಗೆ ಕರೆಯುತ್ತಾರೆ. ಅಲ್ಲಿ ನನ್ನನ್ನು ಟಚ್ ಮಾಡುತ್ತಾರೆ. ದಿನಕ್ಕೆ 25 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಒರಿ ಭೇಟಿ ಆಗಬೇಕಾ? 2500 ರೂಪಾಯಿ ಇದ್ದರೆ ಸಾಕು; ಇಲ್ಲಿದೆ ನೋಡಿ ವಿವರ
ಒರಿ ಅವರು ಸೆಲೆಬ್ರಿಟಿಗಳ ಫೇವರಿಟ್ ವ್ಯಕ್ತಿ ಎನಿಸಿಕೊಂಡಿದ್ದಾರೆ. ಯಾವುದೇ ಪಾರ್ಟಿ ನಡೆದರೂ ಒರಿ ಅವರು ಕಾಣಿಸುತ್ತಾರೆ. ಇತ್ತೀಚೆಗೆ ಒರಿ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಈಗ ಒರಿ ಅವರು ಹೆಚ್ಚು ಚರ್ಚೆಯಲ್ಲಿದ್ದಾರೆ. ‘ಕಾಫಿ ವಿತ್ ಕರಣ್ ಶೋ’ನಲ್ಲಿ ಅವರು ಅತಿಥಿಯಾಗಿ ಆಗಮಿಸಿದ್ದರು. ಆ ಬಳಿಕ ಅವರ ಖ್ಯಾತಿ ಸಾಕಷ್ಟು ಹೆಚ್ಚಿತು. ಒರಿ ಅವರು ‘ಹಿಂದಿ ಬಿಗ್ ಬಾಸ್ ಹಿಂದೀ ಸೀಸನ್ 17’ರಲ್ಲಿ ಅತಿಥಿಯಾಗಿ ಆಗಮಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:09 am, Sun, 12 May 24