ನಟಿಯ ಬಗ್ಗೆ ದ್ವಂದ್ವಾರ್ಥದ ಮಾತು; ವಿವಾದಕ್ಕೆ ಸಿಲುಕಿದ ನಟ ಕಾರ್ತಿ

ತಮಿಳು ನಟ ಕಾರ್ತಿ 'ಸರ್ದಾರ್ 2' ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ನಟಿ ಮಾಳವಿಕಾ ಮೋಹನನ್ ಅವರ ಗ್ಲಾಮರ್ ಕುರಿತು ಆಡಿದ ಮಾತುಗಳು ತೀವ್ರ ವಿವಾದಕ್ಕೆ ಕಾರಣವಾಗಿವೆ. ನೆಟ್ಟಿಗರು ಹಾಗೂ ಮಹಿಳಾಪರ ಸಂಘಟನೆಗಳು ಕಾರ್ತಿ ಅವರ ದ್ವಂದ್ವ ಅರ್ಥದ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಖಂಡಿಸುತ್ತಿದ್ದು, ಈ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

ನಟಿಯ ಬಗ್ಗೆ ದ್ವಂದ್ವಾರ್ಥದ ಮಾತು; ವಿವಾದಕ್ಕೆ ಸಿಲುಕಿದ ನಟ ಕಾರ್ತಿ
ಕಾರ್ತಿ-ಮಾಳವಿಕಾ ಮೋಹನ್
Image Credit source: Karthi
Edited By:

Updated on: Sep 05, 2026 | 7:51 AM

ಮುಖ್ಯಾಂಶಗಳು

  • ನಟಿ ಮಾಳವಿಕಾ ಗ್ಲಾಮರ್ ಬಗ್ಗೆ ಕಾರ್ತಿ ಹೇಳಿಕೆಗೆ 
  • ದ್ವಂದ್ವ ಅರ್ಥದ ಮಾತು
  • ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಆಕ್ರೋಶ

ತಮಿಳು ನಟ ಕಾರ್ತಿ ಅಭಿನಯದ ‘ಸರ್ದಾರ್ 2’ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ಅದ್ಧೂರಿಯಾಗಿ ನಡೆದಿದೆ. ಈ ಸಮಾರಂಭದಲ್ಲಿ ನಟ ಕಾರ್ತಿ ಅವರು ನೀಡಿದ ಹೇಳಿಕೆಯೊಂದು ಭಾರಿ ಚರ್ಚೆಗೆ ಗ್ರಾಸವಾಗಿದೆ. ನಾಯಕಿ ಮಾಳವಿಕಾ ಮೋಹನನ್ ಕುರಿತು ಕಾರ್ತಿ ಆಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅನೇಕ ನೆಟ್ಟಿಗರು ಕಾರ್ತಿ ಅವರ ಮಾತುಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ತಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಮಾಳವಿಕಾ ಮೋಹನನ್ ನಾಯಕಿಯಾಗಿ ಆಯ್ಕೆಯಾದಾಗ ತಾವು ತಂಡವನ್ನು ಒಂದು ಪ್ರಶ್ನೆ ಕೇಳಿದ್ದಾಗಿ ಹೇಳಿದರು. ಮಾಳವಿಕಾ ಅವರು ಹಾಲಿವುಡ್ ನಟಿ ಮೋನಿಕಾ ಬೆಲ್ಲುಚಿ ರೀತಿಯಲ್ಲಿ ಗ್ಲಾಮರಸ್ ಉಡುಪು ಧರಿಸುತ್ತಾರೆಯೇ ಎಂದು ವಿಚಾರಿಸಿದ್ದಾಗಿ ತಿಳಿಸಿದರು. ತಾವು ವೈಯಕ್ತಿಕ ಖುಷಿಗಾಗಿ ಈ ಪ್ರಶ್ನೆ ಕೇಳಲಿಲ್ಲ ಎಂದು ಸ್ಪಷ್ಟನೆ ನೀಡಿದರು. ಪ್ರೇಕ್ಷಕರ ಮನರಂಜನೆಗಾಗಿ ಮಾತ್ರ ಹೀಗೆ ಕೇಳಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಕಾರ್ತಿ ಈ ಮಾತುಗಳನ್ನು ಹಾಸ್ಯದ ಧಾಟಿಯಲ್ಲಿ ಹೇಳಿದ್ದರೂ ಸಹ ಯಾರಿಗೂ ಇಷ್ಟವಾಗಿಲ್ಲ. ಹಲವು ನೆಟ್ಟಿಗರು ಮತ್ತು ಮಹಿಳಾಪರ ಹೋರಾಟಗಾರರು ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಕಾರ್ತಿ ಅವರ ದ್ವಂದ್ವ ಅರ್ಥದ ಮಾತುಗಳು ನಟಿಯ ಗೌರವಕ್ಕೆ ಧಕ್ಕೆ ತಂದಿವೆ ಎಂದು ಟೀಕಿಸಿದ್ದಾರೆ. ನಟಿಯ ಅಭಿನಯಕ್ಕೆ ಪ್ರಾಮುಖ್ಯತೆ ನೀಡುವ ಬದಲು ಅವರ ಗ್ಲಾಮರ್ ಬಗ್ಗೆ ಮಾತನಾಡಿರುವುದು ತಪ್ಪು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ನಟಿಯ ದೇಹ ಹಾಗೂ ಸೌಂದರ್ಯವನ್ನು ವಸ್ತುವಿನಂತೆ ಬಿಂಬಿಸಲಾಗಿದೆ ಎಂದು ಅನೇಕರು ಆಕ್ರೋಶ ಹೊರಹಾಕಿದ್ದಾರೆ.

ಇದೇ ವೇದಿಕೆಯಲ್ಲಿ ಕಾರ್ತಿ ತಾವು ‘ಸರ್ದಾರ್ 2’ ಸಿನಿಮಾ ಆಯ್ಕೆ ಮಾಡಿಕೊಂಡ ಕಾರಣವನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಅಭಿಮಾನಿಗಳಿಗೆ ಸಾಹಸ ಪ್ರಧಾನ ಸಿನಿಮಾಗಳು ಎಂದರೆ ತುಂಬಾ ಇಷ್ಟ. ಅಭಿಮಾನಿಗಳನ್ನು ರಂಜಿಸಲು ಮಾತ್ರ ತಾವು ಈ ಭಾಗದ ಕಥೆಗೆ ಒಪ್ಪಿಗೆ ನೀಡಿದ್ದಾಗಿ ಹೇಳಿದರು. ತಮ್ಮ ಸುದೀರ್ಘ ಚಲನಚಿತ್ರ ಪಯಣದಲ್ಲಿ ಸದಾ ಬೆಂಬಲವಾಗಿ ನಿಂತ ಎಲ್ಲಾ ಅಭಿಮಾನಿಗಳಿಗೆ ಈ ವೇಳೆ ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದರು.

ಇದನ್ನೂ ಓದಿ: ತಾಯಿ ಕಿಳವಿಚಿತ್ರದ ಯಶಸ್ಸು: ನಿರ್ದೇಶಕನಿಗೆ ದುಬಾರಿ ಕಾರು ಗಿಫ್ಟ್ ನೀಡಿದ ನಟ ಶಿವಕಾರ್ತಿಕೇಯನ್

‘ಸರ್ದಾರ್ 2’ ಚಿತ್ರವನ್ನು ಪಿ.ಎಸ್. ಮಿತ್ರನ್ ಅವರು ಬರೆದು ನಿರ್ದೇಶಿಸಿದ್ದಾರೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಎಸ್.ಜೆ. ಸೂರ್ಯ, ಕನ್ನಡತಿ ಆಶಿಕಾ ರಂಗನಾಥ್, ರಜೀಷಾ ವಿಜಯನ್ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಸೆಪ್ಟೆಂಬರ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿ ನಟ ಕಾರ್ತಿ ಅವರ ಈ ವಿವಾದಾತ್ಮಕ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಪ್ರಮುಖ ಚರ್ಚಾವಿಷಯವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us