‘ಕ್ವಾಟ್ಲೆ ಕಿಚನ್’ ಶೋ​ನಿಂದ ದಿಢೀರ್ ಆಗಿ​ ಹೊರ ನಡೆದ ಕೆಂಪಮ್ಮ; ಇಲ್ಲಿದೆ ವಿವರ

ಕ್ವಾಟ್ಲೆ ಕಿಚನ್ ರಿಯಾಲಿಟಿ ಶೋನಲ್ಲಿ ಜನಪ್ರಿಯ ಸ್ಪರ್ಧಿ ಕೆಂಪಮ್ಮ ಅವರು ಅನಿರೀಕ್ಷಿತವಾಗಿ ಸ್ಪರ್ಧೆಯಿಂದ ಹೊರ ನಡೆದಿದ್ದಾರೆ. ವಿಧಾನಸೌಧದ ಬಳಿ ಅಡುಗೆ ಮಾಡುತ್ತಿದ್ದ ಕೆಂಪಮ್ಮ ಅವರ ಅಡುಗೆ ಕೌಶಲ್ಯ ಮತ್ತು ಸರಳತೆ ಎಲ್ಲರ ಮನ ಗೆದ್ದಿತ್ತು. "ಕುಕ್ ಆಫ್ ದ ವೀಕ್" ಪ್ರಶಸ್ತಿ ಪಡೆದಿದ್ದ ಅವರು ಡೇಂಜರ್ ಜೋನ್‌ಗೆ ಬಂದ ನಂತರ ಸ್ಪರ್ಧೆಯಿಂದ ಹೊರ ನಡೆದಿದ್ದಾರೆ ಎಂದು ತಿಳಿದುಬಂದಿದೆ.

‘ಕ್ವಾಟ್ಲೆ ಕಿಚನ್’ ಶೋ​ನಿಂದ ದಿಢೀರ್ ಆಗಿ​ ಹೊರ ನಡೆದ ಕೆಂಪಮ್ಮ; ಇಲ್ಲಿದೆ ವಿವರ
ಕೆಂಪಮ್ಮ
Updated By: ರಾಜೇಶ್ ದುಗ್ಗುಮನೆ

Updated on: Aug 20, 2025 | 8:02 AM

ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ವಾರದ ದಿನಗಳಲ್ಲಿ ಧಾರಾವಾಹಿಗಳು ಪ್ರಸಾರ ಕಂಡರೆ, ವಾರಾಂತ್ಯದಲ್ಲಿ ವಿವಿಧ ರೀತಿಯ ರಿಯಾಲಿಟಿ ಶೋಗಳು ಪ್ರಸಾರ ಕಾಣುತ್ತವೆ. ಈಗ ‘ಕ್ವಾಟ್ಲೆ ಕಿಚನ್’ ಹೆಸರಿನ ಶೋ ಆರಂಭ ಆಗಿದೆ. ಈ ಶೋನಲ್ಲಿ ಅಡುಗೆಯ ಜೊತೆಗೆ ನಗುವನ್ನೂ ಬಡಿಸುವ ಕೆಲಸ ಆಗುತ್ತಿದೆ. ಈ ಶೋನ ಅನುಪಮಾ ಗೌಡ ಹಾಗೂ ಕುರಿ ಪ್ರತಾಪ್ ನಡೆಸಿಕೊಡುತ್ತಾರೆ. ಈ ಶೋನ ಸ್ಪರ್ಧಿ ಆಗಿದ್ದ ಕೆಂಪಮ್ಮ ಅವರು ಶೂಟ್‌ನಿಂದ ದಿಢೀರ್ ಆಚೆ ನಡೆದಿದ್ದಾರೆ.

ಕೆಂಪಮ್ಮ ಅಡುಗೆಯನ್ನೇ ನಂಬಿಕೊಂಡಿದ್ದವರು. ಕಳೆದ 25 ವರ್ಷಗಳಿಂದ ಬೆಂಗಳೂರಿನ ವಿಧಾನಸೌಧ ಸಮೀಪ ಶುಚಿ-ರುಚಿ ಅಡುಗೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಅವರಿಗೆ ‘ಕ್ವಾಟ್ಲೆ ಕಿಚನ್‌’ನಲ್ಲಿ ಕುಕ್ ಆಗಿ ಸ್ಪರ್ಧಿಸೋ ಅವಕಾಶ ಸಿಕ್ಕಿತು. ಅವರು ತಮ್ಮ ಭಿನ್ನ ಮ್ಯಾನರಿಸಂನಿಂದ ಕರ್ನಾಟಕದಾದ್ಯಂತ ಮನೆಮಾತಾಗಿದ್ದರು. ಅವರು ಶೋನಿಂದ ಹೊರ ನಡೆದಿದ್ದಾರೆ.

ವಿಧಾನಸೌಧದ ಸಮೀಪ ಪ್ರತಿದಿನವೂ ಎರಡು ಸಾವಿರಕ್ಕೂ ಹೆಚ್ಚು ಜನರಿಗೆ ಇವರ ಕೈರುಚಿ ತಲುಪುತ್ತದೆ. ಮುದ್ದೆ, ಅನ್ನ, ಸಾರು ಸೇರಿದಂತೆ ವಿವಿಧ ರೀತಿಯ ಅಡುಗೆ ಮಾಡಿ ಬಡಿಸುತ್ತಾರೆ. ಅವರು ಅಕ್ಷರ ಕಲಿಯದೇ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಅವರು ಪತಿಯನ್ನು ಕೂಡ ಕಳೆದುಕೊಂಡಿದ್ದಾರೆ. ಅವರು ಒಬ್ಬರೇ ಮೆಸ್ ನಡೆಸಿಕೊಂಡು ಬಂದಿರುವುದು ಇವರ ಹಿರಿಮೆ.

ಇದನ್ನೂ ಓದಿ
ಮಂಗಳೂರು ಬೆಡಗಿ ಪೂಜಾ ಹೆಗ್ಡೆ ಮುಟ್ಟಿದ್ದೆಲ್ಲವೂ ಕಬ್ಬಿಣ; ಕೈ ಕೊಟ್ಟ ಅದೃಷ್ಟ
ಸಲ್ಮಾನ್ ಖಾನ್ ಬಿಗ್ ಬಾಸ್ ಸಂಭಾವನೆಗೆ ಕತ್ತರಿ; ಕಿಚ್ಚನ ವಿಚಾರದಲ್ಲಿ ಏನು?
ವಿಮರ್ಶೆಯಲ್ಲಿ ಸೋತ ‘ಕೂಲಿ’ಗೆ ಮೊದಲ ಆಘಾತ ಕೊಟ್ಟ ಪ್ರೇಕ್ಷಕ
ಬಸ್ ಓಡಿಸಿದ ಬಾಲಯ್ಯ; ಮುಖದಲ್ಲಿರೋ ಭಯ ನೋಡಿದ್ರೆ ಯಾರೂ ಕೂರೋ ಧೈರ್ಯ ಮಾಡಲ್ಲ

ಕ್ವಾಟ್ಲೆ ಕಿಚನ್‌ನಲ್ಲಿ ಕುಕ್‌ ಆಗಿ ತಮ್ಮ ಕೈಚಳಕ ತೋರಿಸಿದ ಕೆಂಪಮ್ಮ ಎಲ್ಲರ ಮನ ಸೆಳೆದರು. ಶೆಫ್ ಕೌಷಿಕ್, ಜಡ್ಜ್ ಶೃತಿ ಸೇರಿದಂತೆ ಕಿಚನ್‌ನಲ್ಲಿ ಎಲ್ಲರಿಗೂ ಇವರೆಂದರೆ ಅಚ್ಚುಮೆಚ್ಚಾಗಿತ್ತು. ಅವರು ‘ಕುಕ್ ಆಫ್ ದ ವೀಕ್’ ಬಿರುದು ಕೂಡ ಪಡೆದಿದ್ದರು. ಕ್ವಾಟ್ಲೆ ಕಿಚನ್‌ನಲ್ಲಿ ನೂಡಲ್ಸ್, ಬರ್ಗರ್ ಸೇರಿದಂತೆ ಹಲವು ರೀತಿಯ ಕಾಂಟಿನೆಂಟಲ್ ಅಡುಗೆಯನ್ನೂ ಮಾಡಿ ಕೆಂಪಮ್ಮ ಭೇಷ್ ಎನಿಸಿಕೊಂಡವರು. ಇವರು ಡೇಂಜರ್ ಜೋನ್‌ಗೆ ಬಂದಿದ್ದರು. ಇದರಿಂದ ಹತಾಶರಾಗಿ ಅಚಾನಕ್ಕಾಗಿ ಸ್ಪರ್ಧೆಯಿಂದ ಹೊರನಡೆದಿದ್ದಾರೆ. ಈಗಾಗಲೇ ಸೋನಿಯಾ ಪೊನ್ನಮ್ಮ ಮತ್ತು ಪ್ರೇರಣಾ ಕಂಬಂ ಎಲಿಮಿನೇಟ್ ಆಗಿದ್ದು, ಇದೀಗ ಕೆಂಪಮ್ಮ ಸ್ಪರ್ಧೆಯಿಂದ ಹೊರ ಹೋಗಿದ್ದಾರೆ.

ಇದನ್ನೂ ಓದಿ: ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಹೊಸ ಧಾರಾವಾಹಿ ‘ಪ್ರೇಮಕಾವ್ಯ’; ಆ.4ರಂದು ಪ್ರಸಾರ ಆರಂಭ

ಸ್ಪರ್ಧೆ ವಾರದಿಂದ ವಾರಕ್ಕೆ ಕುತೂಹಲಗೊಳ್ಳುತ್ತ ಇದೆ. ಏಳು ಜನ ಕುಕ್‌ಗಳು ಇದ್ದು, ಸ್ಪರ್ಧೆ ಇನ್ನಷ್ಟು ಪ್ರಬಲತೆ ಪಡೆದುಕೊಂಡಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ನಿಮ್ಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶೋ ಪ್ರಸಾರ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 8:01 am, Wed, 20 August 25