KGF 2: ತೆರೆಗೆ ಬಂದು 3 ತಿಂಗಳ ಬಳಿಕ ‘ಕೆಜಿಎಫ್ 2’ ಚಿತ್ರದಿಂದ ಸೃಷ್ಟಿ ಆಯ್ತು ಯಾವ ಚಿತ್ರವೂ ಮಾಡಿರದ ದಾಖಲೆ

| Updated By: Digi Tech Desk

Updated on: Jul 16, 2022 | 12:34 PM

KGF Chapter 2 Records - ‘ಕೆಜಿಎಫ್ 2’ ತೆರೆಗೆ ಬಂದು ಜುಲೈ 14ಕ್ಕೆ ಮೂರು ತಿಂಗಳು ಪೂರ್ಣಗೊಂಡಿದೆ. ಈ ಸಿನಿಮಾ ಈಗ ವಿಶಿಷ್ಟ ದಾಖಲೆ ಒಂದನ್ನು ಬರೆದಿದೆ. ಭಾರತದ ಯಾವ ಚಿತ್ರವೂ ಈ ದಾಖಲೆ ಮಾಡಿಲ್ಲ ಅನ್ನೋದು ವಿಶೇಷ.

KGF 2: ತೆರೆಗೆ ಬಂದು 3 ತಿಂಗಳ ಬಳಿಕ ‘ಕೆಜಿಎಫ್ 2’ ಚಿತ್ರದಿಂದ ಸೃಷ್ಟಿ ಆಯ್ತು ಯಾವ ಚಿತ್ರವೂ ಮಾಡಿರದ ದಾಖಲೆ
ಯಶ್
Follow us on

‘ಕೆಜಿಎಫ್ 2’ (KGF: Chapter 2) ಚಿತ್ರ ಥಿಯೇಟರ್​ನಲ್ಲಿ ಓಟ ಮುಗಿಸಿದೆ. ವಿಶ್ವಾದ್ಯಂತ ಈ ಚಿತ್ರ 1250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಕನ್ನಡದ ಚಿತ್ರವೊಂದು ಇಷ್ಟು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದ್ದು ಇದೇ ಮೊದಲು. ಈ ಚಿತ್ರದಿಂದ ಕನ್ನಡ ಚಿತ್ರರಂಗದ ಹಿರಿಮೆ ಹೆಚ್ಚಿದೆ. ಯಶ್​​ಗೆ (Yash) ಪ್ಯಾನ್​ ಇಂಡಿಯಾ ಸ್ಟಾರ್​ ಪಟ್ಟ ಸಿಕ್ಕಿದೆ. ‘ಕೆಜಿಎಫ್ 2’ ತೆರೆಗೆ ಬಂದು ಜುಲೈ 14ಕ್ಕೆ ಮೂರು ತಿಂಗಳು ಪೂರ್ಣಗೊಂಡಿದೆ. ಈ ಸಿನಿಮಾ ಈಗ ವಿಶಿಷ್ಟ ದಾಖಲೆ ಒಂದನ್ನು ಬರೆದಿದೆ. ಭಾರತದ ಯಾವ ಚಿತ್ರವೂ ಈ ದಾಖಲೆ ಮಾಡಿಲ್ಲ ಅನ್ನೋದು ವಿಶೇಷ.

Ormax Media ಸಂಸ್ಥೆಯು ಎಲ್ಲಾ ಚಿತ್ರಗಳಿಗೆ ರೇಟಿಂಗ್ ನೀಡುತ್ತದೆ. ಇಲ್ಲಿ ರೇಟಿಂಗ್ ನೀಡುವವರು ವೀಕ್ಷಕರೇ. ‘ಕೆಜಿಎಫ್ 2’ ಚಿತ್ರಕ್ಕೆ Ormax Power Ratingನಲ್ಲಿ ಐದೂ ಭಾಷೆಗಳಲ್ಲಿ 90+ (100ಕ್ಕೆ) ರೇಟಿಂಗ್ ಸಿಕ್ಕಿದೆ. Ormax Power Ratingನಲ್ಲಿ ಭಾರತದ ಯಾವ ಚಿತ್ರವೂ ಈ ದಾಖಲೆ ಬರೆದಿಲ್ಲ ಅನ್ನೋದು ವಿಶೇಷ.

ಇದನ್ನೂ ಓದಿ
Srinidhi Shetty: ಗ್ಲಾಮರಸ್ ಲುಕ್​ನಲ್ಲಿ ‘ಕೆಜಿಎಫ್’ ಬೆಡಗಿ ಶ್ರೀನಿಧಿ ಶೆಟ್ಟಿ; ಫೋಟೋಗಳು ಇಲ್ಲಿವೆ
ಮಧ್ಯರಾತ್ರಿ ಸಿನಿಮಾ ವೀಕ್ಷಿಸಿದ ಶ್ರೀನಿಧಿ ಶೆಟ್ಟಿ, ಗರುಡ, ವಿನಯ್ ರಾಜ್​ಕುಮಾರ್..; ಚಿತ್ರ ನೋಡಿ ಆಶಾ ಭಟ್ ಹೇಳಿದ್ದೇನು?
Srinidhi Shetty: ‘ಕೆಜಿಎಫ್’ ಬೆಡಗಿ ಶ್ರೀನಿಧಿ ಶೆಟ್ಟಿ ಕ್ಯೂಟ್ ಫೋಟೋ ಗ್ಯಾಲರಿ
‘ಕೆಜಿಎಫ್​ 2’ ಪ್ರಚಾರಕ್ಕಾಗಿ ದೆಹಲಿಗೆ ತೆರಳಿದ ಯಶ್, ಶ್ರೀನಿಧಿ ಶೆಟ್ಟಿ

‘ಕೆಜಿಎಫ್ 2’ ಚಿತ್ರಕ್ಕೆ ಐಎಂಡಿಬಿಯಲ್ಲಿ ಒಳ್ಳೆಯ ರೇಟಿಂಗ್ ಸಿಕ್ಕಿದೆ. 2022ರ ಏಪ್ರಿಲ್​ನಲ್ಲಿ ತೆರೆಗೆ ಬಂದ ಈ ಸಿನಿಮಾಗೆ ಐಎಂಡಿಬಿಯಲ್ಲಿ 8.5 ರೇಟಿಂಗ್ ಸಿಕ್ಕಿದೆ. ಈ ವರ್ಷ ತೆರೆಗೆ ಬಂದ ಭಾರತದ ಚಿತ್ರಗಳ ಪೈಕಿ ಅತಿ ಹೆಚ್ಚು ರೇಟಿಂಗ್ ಪಡೆದ ಎರಡನೇ ಚಿತ್ರ ಇದಾಗಿದೆ.

ಬಾಕ್ಸ್ ಆಫೀಸ್​ನಲ್ಲಿ  ‘ಕೆಜಿಎಫ್ 2’ ಚಿತ್ರ ಕಮಾಲ್ ಮಾಡಿದೆ. ಹಿಂದಿಯಲ್ಲಿ ಈ ಸಿನಿಮಾ 433 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಬಾಲಿವುಡ್ ಬಾಕ್ಸ್ ಆಫೀಸ್​ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ. ಇತ್ತೀಚಿನವರೆಗೂ ಈ ಸಿನಿಮಾ ಮುಂಬೈನಲ್ಲಿ ಪ್ರದರ್ಶನ ಕಾಣುತ್ತಿತ್ತು. ಸದ್ಯ ಅಮೇಜಾನ್​ ಪ್ರೈಮ್ ವಿಡಿಯೋದಲ್ಲಿ ಈ ಸಿನಿಮಾ ರಿಲೀಸ್ ಆಗಿ, ಧೂಳೆಬ್ಬಿಸುತ್ತಿದೆ.

ಇದನ್ನೂ ಓದಿ: ಐಎಂಡಿಬಿ ರೇಟಿಂಗ್​: ‘ಕೆಜಿಎಫ್ 2’ ಚಿತ್ರವನ್ನು ಹಿಂದಿಕ್ಕಿದ ಏಕೈಕ ಸಿನಿಮಾ ಇದು; ಇಲ್ಲಿದೆ ಫುಲ್ ಲಿಸ್ಟ್

ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್ ಮೊದಲಾದವರು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದೆ. ಈ ಚಿತ್ರದಿಂದ ನಿರ್ಮಾಣ ಸಂಸ್ಥೆಗೆ ಸಾಕಷ್ಟು ಲಾಭ ಆಗಿದೆ.

Published On - 12:10 pm, Sat, 16 July 22