ಐಎಂಡಿಬಿ ರೇಟಿಂಗ್​: ‘ಕೆಜಿಎಫ್ 2’ ಚಿತ್ರವನ್ನು ಹಿಂದಿಕ್ಕಿದ ಏಕೈಕ ಸಿನಿಮಾ ಇದು; ಇಲ್ಲಿದೆ ಫುಲ್ ಲಿಸ್ಟ್

ಐಎಂಡಿಬಿಯಲ್ಲಿ ಸಿನಿಮಾಗಳಿಗೆ ರೇಟಿಂಗ್ ನೀಡಲಾಗುತ್ತದೆ. ವೀಕ್ಷಕರೇ ಸಿನಿಮಾಗೆ ರೇಟಿಂಗ್ ನೀಡುತ್ತಾರೆ. 2022ರಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಸಿನಿಮಾಗಳ ಪಟ್ಟಿಯನ್ನು ಐಎಂಡಿಬಿ ಬಿಡುಗಡೆ ಮಾಡಿದೆ.

ಐಎಂಡಿಬಿ ರೇಟಿಂಗ್​: ‘ಕೆಜಿಎಫ್ 2’ ಚಿತ್ರವನ್ನು ಹಿಂದಿಕ್ಕಿದ ಏಕೈಕ ಸಿನಿಮಾ ಇದು; ಇಲ್ಲಿದೆ ಫುಲ್ ಲಿಸ್ಟ್
ಯಶ್-ಕಮಲ್ ಹಾಸನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 13, 2022 | 2:49 PM

‘ಕೆಜಿಎಫ್ 2’ ಚಿತ್ರ (KGF: Chapter 2) ಬಾಕ್ಸ್ ಆಫೀಸ್​ನಲ್ಲಿ ಮಾಡಿದ ದಾಖಲೆ ತುಂಬಾನೇ ದೊಡ್ಡದು. ಈ ಚಿತ್ರ 1200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದಲ್ಲದೆ, ಇನ್ನೂ ಅನೇಕ ದಾಖಲೆಗಳನ್ನು ಈ ಚಿತ್ರ ಬರೆದಿದೆ. ಈ ಮಧ್ಯೆ ಐಎಂಡಿಬಿಯಲ್ಲೂ (IMDB) ‘ಕೆಜಿಎಫ್ 2’ಗೆ ಒಳ್ಳೆಯ ರೇಟಿಂಗ್ ಸಿಕ್ಕಿದೆ. 2022ರಲ್ಲಿ ರಿಲೀಸ್ ಆದ ಅತ್ಯುತ್ತಮ ಸಿನಿಮಾಗಳ ಪೈಕಿ ಯಶ್ (Yash) ನಟನೆಯ ಈ ಚಿತ್ರಕ್ಕೂ ಟಾಪ್ 10ನಲ್ಲಿ ಸ್ಥಾನ ಸಿಕ್ಕಿದೆ. ಐಎಂಡಿಬಿ ರೇಟಿಂಗ್​ನಲ್ಲಿ ‘ಕೆಜಿಎಫ್ 2’ ಚಿತ್ರವನ್ನು ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾ ಹಿಂದಿಕ್ಕಿದೆ.

ಐಎಂಡಿಬಿಯಲ್ಲಿ ಸಿನಿಮಾಗಳಿಗೆ ರೇಟಿಂಗ್ ನೀಡಲಾಗುತ್ತದೆ. ವೀಕ್ಷಕರೇ ಸಿನಿಮಾಗೆ ರೇಟಿಂಗ್ ನೀಡುತ್ತಾರೆ. 2022ರಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಸಿನಿಮಾಗಳ ಪಟ್ಟಿಯನ್ನು ಐಎಂಡಿಬಿ ಬಿಡುಗಡೆ ಮಾಡಿದೆ. ಈ ಪೈಕಿ ‘ವಿಕ್ರಮ್​’ (8.8) ಮೊದಲ ಸ್ಥಾನದಲ್ಲಿದ್ದರೆ, ‘ಕೆಜಿಎಫ್ 2’ (8.5) ಎರಡನೇ ಸ್ಥಾನದಲ್ಲಿ ಇದೆ. ಮೂರನೇ ಸ್ಥಾನದಲ್ಲಿ ‘ದಿ ಕಾಶ್ಮೀರ್ ಫೈಲ್ಸ್​’ (8.3), ನಾಲ್ಕನೇ ಸ್ಥಾನದಲ್ಲಿ ಮಲಯಾಳಂನ ‘ಹೃದಯಂ’ (8.1), ಐದನೇ ಸ್ಥಾನದಲ್ಲಿ ‘ಆರ್​ಆರ್​ಆರ್​’ ಚಿತ್ರ (8.0) ಇದೆ.

ಇದನ್ನೂ ಓದಿ
Image
Srinidhi Shetty: ಗ್ಲಾಮರಸ್ ಲುಕ್​ನಲ್ಲಿ ‘ಕೆಜಿಎಫ್’ ಬೆಡಗಿ ಶ್ರೀನಿಧಿ ಶೆಟ್ಟಿ; ಫೋಟೋಗಳು ಇಲ್ಲಿವೆ
Image
ಮಧ್ಯರಾತ್ರಿ ಸಿನಿಮಾ ವೀಕ್ಷಿಸಿದ ಶ್ರೀನಿಧಿ ಶೆಟ್ಟಿ, ಗರುಡ, ವಿನಯ್ ರಾಜ್​ಕುಮಾರ್..; ಚಿತ್ರ ನೋಡಿ ಆಶಾ ಭಟ್ ಹೇಳಿದ್ದೇನು?
Image
Srinidhi Shetty: ‘ಕೆಜಿಎಫ್’ ಬೆಡಗಿ ಶ್ರೀನಿಧಿ ಶೆಟ್ಟಿ ಕ್ಯೂಟ್ ಫೋಟೋ ಗ್ಯಾಲರಿ
Image
‘ಕೆಜಿಎಫ್​ 2’ ಪ್ರಚಾರಕ್ಕಾಗಿ ದೆಹಲಿಗೆ ತೆರಳಿದ ಯಶ್, ಶ್ರೀನಿಧಿ ಶೆಟ್ಟಿ

ವೆಬ್ ಸೀರಿಸ್​ಗಳಿಗೂ ರೇಟಿಂಗ್ ನೀಡಲಾಗಿದೆ. ‘ಕ್ಯಾಂಪಸ್ ಡೈರೀಸ್​’ (9.0) ಮೊದಲ ಸ್ಥಾನದಲ್ಲಿದೆ. ‘ರಾಕೆಟ್ ಬಾಯ್ಸ್’ (8.9) ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ‘ಪಂಚಾಯತ್ 2’ (8.9) ಇದೆ. ‘ಅಪಹರಣ್​’ (8.4) ಹಾಗೂ ‘ಹ್ಯೂಮನ್​’ (8.0) ನಾಲ್ಕು ಹಾಗೂ ಐದನೇ ಸ್ಥಾನದಲ್ಲಿವೆ.

View this post on Instagram

A post shared by IMDb (@imdb)

ಇದನ್ನೂ ಓದಿ: ಬೆಂಗಳೂರಲ್ಲಿ ಅಪಘಾತ: ‘ಕೆಜಿಎಫ್ 2’ ನಟನ ಬೆಂಜ್ ಕಾರು ಸಂಪೂರ್ಣ ಜಖಂ; ಕೂದಲೆಳೆ ಅಂತರದಲ್ಲಿ ನಟ ಪಾರು

‘ವಿಕ್ರಮ್​’ ಇತ್ತೀಚೆಗೆ ರಿಲೀಸ್ ಆದ ಸಿನಿಮಾ. ಈ ಸಿನಿಮಾವನ್ನು ಕಮಲ್ ಹಾಸನ್ ಅವರೇ ನಿರ್ಮಿಸಿ, ನಟಿಸಿದ್ದಾರೆ. ಈ ಚಿತ್ರದಲ್ಲಿ ಫಹಾದ್ ಫಾಸಿಲ್, ವಿಜಯ್ ಸೇತುಪತಿ ಕೂಡ ಮುಖ್ಯ ಪಾತ್ರ ಮಾಡಿದ್ದಾರೆ. ರೊಲೆಕ್ಸ್ ಹೆಸರಿನ ಪಾತ್ರದಲ್ಲಿ ಸೂರ್ಯ ಅವರು ಕಾಣಿಸಿಕೊಂಡಿದ್ದಾರೆ. ಅವರದ್ದು ಅತಿಥಿ ಪಾತ್ರವಾದರೂ ಸಖತ್ ಹೈಲೈಟ್ ಆಗಿದೆ. ಈ ಚಿತ್ರ ಐಎಂಡಿಬಿಯಲ್ಲಿ ‘ಕೆಜಿಎಫ್ 2’ಗಿಂತ ಹೆಚ್ಚು ರೇಟಿಂಗ್ ಪಡೆದರೂ, ಈ ಚಿತ್ರದ ಅರ್ಧದಷ್ಟು ಕಲೆಕ್ಷನ್ ಮಾಡಲು ‘ವಿಕ್ರಮ್’ ಬಳಿ ಸಾಧ್ಯವಾಗಿಲ್ಲ. ‘ವಿಕ್ರಮ್’ ಸಿನಿಮಾ ಒಟ್ಟಾರೆಯಾಗಿ 400 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ