ತಪ್ಪು ಮಾಡಿದರೂ ಪ್ರಶಾಂತ್​ ಸಂಬರಗಿ ಬೆನ್ನು ತಟ್ಟಿದ ಸುದೀಪ್​! ಕಿಚ್ಚ ಮಾಡಿದ್ದು ಸರೀನಾ?

ಮಂಜು ಮೂರು ದಿನ ಮೊದಲೇ ನನಗೆ ಕಳಪೆ ಎನ್ನುವ ಪಟ್ಟ ನೀಡುವುದಾಗಿ ಹೇಳಿಕೊಂಡಿದ್ದರು. ಇದಕ್ಕೆ ಅವರು ಮನೆಯಲ್ಲಿ ಎಲ್ಲರನ್ನೂ ಎತ್ತಿಕಟ್ಟಿದ್ದರು ಎನ್ನುವ ಆರೊಪವನ್ನು ಪ್ರಶಾಂತ್​ ಮಾಡಿದರು.

ತಪ್ಪು ಮಾಡಿದರೂ ಪ್ರಶಾಂತ್​ ಸಂಬರಗಿ ಬೆನ್ನು ತಟ್ಟಿದ ಸುದೀಪ್​! ಕಿಚ್ಚ ಮಾಡಿದ್ದು ಸರೀನಾ?
ಪ್ರಶಾಂತ್​-ಕಿಚ್ಚ ಸುದೀಪ್​

Updated on: Mar 28, 2021 | 5:20 PM

ಪ್ರಶಾಂತ್​ ಸಂಬರಗಿ ಬಿಗ್​ ಬಾಸ್​ ಮನೆಯಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾದ ಸ್ಪರ್ಧಿ. ಇಲ್ಲಿಗೆ ಬರುವ ಮೊದಲು ಸಾಕಷ್ಟು ವಿವಾದಗಳನ್ನು ಮಾಡಿಕೊಂಡಿದ್ದ ಅವರು, ಬಿಗ್​ ಬಾಸ್​ ಮನೆಯಲ್ಲೂ ತಮ್ಮ ನೇರ ಮಾತಿನಿಂದ ಚರ್ಚೆಯಲ್ಲಿದ್ದಾರೆ. ಈ ಮಧ್ಯೆ, ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ವಿವಾದಗಳನ್ನು ಅವರು ಮೈಮೇಲೆ ಎಳೆದುಕೊಂಡಿದ್ದಾರೆ. ನಾಲ್ಕನೇ ವಾರ ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಾಲು ಸಾಲು ತಪ್ಪು ಮಾಡಿದ್ದರೂ ಅವರನ್ನು ಕಿಚ್ಚ ಸುದೀಪ್​ ಹೊಗಳಿದ್ದಾರೆ. ಅಷ್ಟಕ್ಕೂ ಪ್ರಶಾಂತ್ ಅವರನ್ನು ಕಿಚ್ಚ ಹೊಗಳಲು ಕಾರಣ ಏನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ನಾಲ್ಕನೇ ವಾರ ಬಿಗ್​ ಬಾಸ್ ಮನೆಯಲ್ಲಿ ಪ್ರಶಾಂತ್​ ಸಾಕಷ್ಟು ಜನರ ಬಳಿ ಜಗಳ ಮಾಡಿಕೊಂಡಿದ್ದಾರೆ. ಅದರಲ್ಲೂ ಮಂಜು ಜತೆ ಪ್ರಶಾಂತ್​ ತುಂಬಾನೇ ಮುನಿಸಿಕೊಂಡಿದ್ದರು. ಈ ವಾರ ಅತಿ ಕಳಪೆ ಎನ್ನುವ ಪಟ್ಟವನ್ನು ಪ್ರಶಾಂತ್​ಗೆ ನೀಡಲಾಯಿತು. ನನಗೆ ಕಳಪೆ ಎನ್ನುವ ಪಟ್ಟ ಬರುವುದಕ್ಕೆ ಮಂಜು ಪಾವಗಡ ಪಾತ್ರ ದೊಡ್ಡದಿದೆ ಎಂದು ಪ್ರಶಾಂತ್​ ಆರೋಪ ಮಾಡಿದ್ದರು.

ಮಂಜು ಮೂರು ದಿನ ಮೊದಲೇ ನನಗೆ ಕಳಪೆ ಎನ್ನುವ ಪಟ್ಟ ನೀಡುವುದಾಗಿ ಹೇಳಿಕೊಂಡಿದ್ದರು. ಇದಕ್ಕೆ ಅವರು ಮನೆಯಲ್ಲಿ ಎಲ್ಲರನ್ನೂ ಎತ್ತಿಕಟ್ಟಿದ್ದರು ಎನ್ನುವ ಆರೊಪವನ್ನು ಪ್ರಶಾಂತ್​ ಮಾಡಿದರು. ಆದರೆ, ಮಂಜು ಈ ಆರೋಪವನ್ನು ಅಲ್ಲಗಳೆದಿದ್ದರು. ಪ್ರಶಾಂತ್​ ಮನೆಯಲ್ಲಿ ಕಸವನ್ನು ಸರಿಯಾಗಿ ಗುಡಿಸಿಲ್ಲ. ಈ ಕಾರಣಕ್ಕೆ ನಾನು ಕಳಪೆ ಎನ್ನುವ ಪಟ್ಟ ನೀಡಿದೆ ಎಂದು ಸ್ಪಷ್ಟನೆಯನ್ನೂ ನಿಡಿದರು. ಇದು ಪ್ರಶಾಂತ್​ಗೆ ಖುಷಿ ನೀಡಿಲ್ಲ. ಹೀಗಾಗಿ ಇಬ್ಬರ ನಡುವೆ ವೈಮನಸ್ಸು ಕೂಡ ಬೆಳೆಯಿತು.

ವಾರದ ಪಂಚಾಯ್ತಿಯಲ್ಲೂ ಸುದೀಪ್​ ಈ ವಿಚಾರ ಪ್ರಸ್ತಾಪ ಮಾಡಿದರು. ಅಂದು ಮನೆಯ ಕ್ಯಾಪ್ಟನ್​ ಆಗಿದ್ದ ಅರವಿಂದ್​ ಈ ಬಗ್ಗೆ ಪ್ರತಿಕ್ರಿಯೆ ನೀಡಿದರು. ಪ್ರಶಾಂತ್​ ಅವರು ತಮಗೆ ವಹಿಸಿದ ಕೆಲಸವನ್ನು ಸರಿಯಾಗಿ ಮಾಡಿಲ್ಲ ಎಂದರು. ಆಗ, ಪ್ರಶಾಂತ್​ ಸಂಬರಗಿ ತಪ್ಪನ್ನು ಒಪ್ಪಿಕೊಂಡರು. ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಇದನ್ನು ತಿದ್ದುಕೊಳ್ಳುತ್ತೇನೆ ಎಂದು ಭರವಸೆ ಕೂಡ ನೀಡಿದರು.

ಪ್ರಶಾಂತ್​ ತಪ್ಪು ಮಾಡಿದ್ದರೂ ಅದನ್ನು ಒಪ್ಪಿಕೊಂಡು ತಿದ್ದುಕೊಳ್ಳುತ್ತೇನೆ ಎಂದು ಹೇಳಿರುವುದು ಸುದೀಪ್​ಗೆ ಖುಷಿ ತಂದಿದೆ. ಹೀಗಾಗಿ, ತಪ್ಪು ಮಾಡಿದರೂ ನೀವು ಅದನ್ನು ಒಪ್ಪಿಕೊಂಡಿದ್ದೀರ. ಹೀಗಾಗಿ, ನಾನು ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ ಎಂದರು.

ಇದನ್ನೂ ಓದಿ: ಸ್ಪರ್ಧಿಗಳ ವಿರುದ್ಧ ಸಿಟ್ಟಿಗೆದ್ದ ಪ್ರಶಾಂತ್​; ಬಿಗ್​ ಬಾಸ್​ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ!

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us