ಮತ್ತೆ ನಿರ್ದೇಶಕನ ಕುರ್ಚಿಯಲ್ಲಿ ಕೂರಲು ಸಜ್ಜಾದ ಕಿಚ್ಚ ಸುದೀಪ್
Kichcha Sudeep movie: ಸುದೀಪ್ ಅದ್ಭುತ ನಟರಾಗಿರುವ ಜೊತೆಗೆ ಬಹಳ ಒಳ್ಳೆಯ ನಿರ್ದೇಶಕರೂ ಹೌದು. ಅವರ ನಟನೆಗೆ ಇರುವಂತೆ ಅವರ ನಿರ್ದೇಶನಕ್ಕೂ ಪ್ರತ್ಯೇಕ ಅಭಿಮಾನಿ ವರ್ಗವಿದೆ. ಈ ವರೆಗೆ ಆರು ಸಿನಿಮಾಗಳನ್ನು ಸುದೀಪ್ ನಿರ್ದೇಶಿಸಿದ್ದು, ಆರೂ ಸಿನಿಮಾಗಳು ಹಿಟ್ ಎನಿಸಿಕೊಂಡಿವೆ ಜೊತೆಗೆ ಗುಣಮಟ್ಟದ ಸಿನಿಮಾ ಎಂಬ ವಿಮರ್ಶೆಯನ್ನೂ ಪಡೆದುಕೊಂಡಿವೆ. ಆದರೆ ನಟನೆಯಲ್ಲಿ ಬ್ಯುಸಿ ಆಗಿದ್ದ ಸುದೀಪ್ ಕಳೆದ 12 ವರ್ಷಗಳಿಂದ ಸಿನಿಮಾ ನಿರ್ದೇಶನ ಮಾಡಿಲ್ಲ. ಆದರೆ ಇದೀಗ ಸುದೀಪ್ ಮತ್ತೆ ನಿರ್ದೇಶಕನ ಕುರ್ಚಿಯಲ್ಲಿ ಕೂರಲು ಸಜ್ಜಾಗಿದ್ದಾರೆ. ಸುದೀಪ್ ಅವರು ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.

ಸುದೀಪ್ (Sudeep) ಅದ್ಭುತ ನಟರಾಗಿರುವ ಜೊತೆಗೆ ಬಹಳ ಒಳ್ಳೆಯ ನಿರ್ದೇಶಕರೂ ಹೌದು. ಅವರ ನಟನೆಗೆ ಇರುವಂತೆ ಅವರ ನಿರ್ದೇಶನಕ್ಕೂ ಪ್ರತ್ಯೇಕ ಅಭಿಮಾನಿ ವರ್ಗವಿದೆ. ಈ ವರೆಗೆ ಆರು ಸಿನಿಮಾಗಳನ್ನು ಸುದೀಪ್ ನಿರ್ದೇಶಿಸಿದ್ದು, ಆರೂ ಸಿನಿಮಾಗಳು ಹಿಟ್ ಎನಿಸಿಕೊಂಡಿವೆ ಜೊತೆಗೆ ಗುಣಮಟ್ಟದ ಸಿನಿಮಾ ಎಂಬ ವಿಮರ್ಶೆಯನ್ನೂ ಪಡೆದುಕೊಂಡಿವೆ. ಆದರೆ ನಟನೆಯಲ್ಲಿ ಬ್ಯುಸಿ ಆಗಿದ್ದ ಸುದೀಪ್ ಕಳೆದ 12 ವರ್ಷಗಳಿಂದ ಸಿನಿಮಾ ನಿರ್ದೇಶನ ಮಾಡಿಲ್ಲ. ಆದರೆ ಇದೀಗ ಸುದೀಪ್ ಮತ್ತೆ ನಿರ್ದೇಶಕನ ಕುರ್ಚಿಯಲ್ಲಿ ಕೂರಲು ಸಜ್ಜಾಗಿದ್ದಾರೆ. ಸುದೀಪ್ ಅವರು ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.
2014 ರಲ್ಲಿ ಬಿಡುಗಡೆ ಆಗಿದ್ದ ‘ಮಾಣಿಕ್ಯ’ ಸಿನಿಮಾದ ಬಳಿಕ ಸುದೀಪ್ ಇನ್ಯಾವುದೇ ಸಿನಿಮಾ ನಿರ್ದೇಶಿಸಿಲ್ಲ. ಆದರೆ ಈಗ ಮತ್ತೆ ಸಿನಿಮಾ ನಿರ್ದೇಶನಕ್ಕೆ ಸುದೀಪ್ ಮುಂದಾಗಿದ್ದಾರೆ. ಪ್ರಸ್ತುತ ಅವರು ಅನೂಪ್ ಭಂಡಾರಿ ನಿರ್ದೇಶನದ ‘ಬಿಲ್ಲಾ ರಂಗ ಭಾಷಾ’ ಸಿನಿಮಾನಲ್ಲಿ ನಟಿಸುತ್ತಿದ್ದು, ಆ ಸಿನಿಮಾದ ಬಳಿಕ ಸುದೀಪ್ ಅವರು ಖುದ್ದು ನಿರ್ದೇಶನ ಮಾಡಲಿರುವ ಹೊಸ ಸಿನಿಮಾನಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಚಿತ್ರಕತೆ ರಚನೆಯಲ್ಲಿ ಸುದೀಪ್ ತಮ್ಮನ್ನು ತೊಡಗಿಸಿಕೊಂಡಿದ್ದು, ಶೀಘ್ರವೇ ಸಿನಿಮಾದ ಅಧಿಕೃತ ಘೋಷಣೆಯನ್ನೂ ಮಾಡಲಿದ್ದಾರೆ. ಪ್ರಸ್ತುತ ‘ಬಿಲ್ಲಾ ರಂಗ ಭಾಷಾ’ ಸಿನಿಮಾದ ಮೇಲೆ ಸುದೀಪ್ ಗಮನವಿದ್ದು, ಆ ಸಿನಿಮಾದ ಬಿಡುಗಡೆ ಬಳಿಕವಷ್ಟೆ ಸುದೀಪ್ ಅವರು ಹೊಸ ಸಿನಿಮಾದ ಘೋಷಣೆ ಮಾಡಲಿದ್ದಾರೆ.
ಇದನ್ನೂ ಓದಿ:‘ಬೇಲ್’ ಟೀಸರ್ ನೋಡಿ ಮನಸಾರೆ ಹೊಗಳಿದ ಸುದೀಪ್
ಮೂಲಗಳ ಪ್ರಕಾರ ‘ಬಿಲ್ಲಾ ರಂಗ ಭಾಷಾ’ ಸೇರಿ ಸುದೀಪ್ ಕೈಯಲ್ಲಿ ಒಟ್ಟು ನಾಲ್ಕು ಸಿನಿಮಾಗಳಿವೆ. ಅವುಗಳಲ್ಲಿ ಒಂದನ್ನು ಅವರೇ ನಿರ್ದೇಶಿಸಲಿದ್ದಾರೆ. ತಮಿಳಿನ ಒಬ್ಬ ಜನಪ್ರಿಯ ನಿರ್ದೇಶಕ ಸಹ ಸುದೀಪ್ ಅವರಿಗಾಗಿ ಸಿನಿಮಾ ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ. ಆ ಸಿನಿಮಾ ಏಕಕಾಲದಲ್ಲಿ ತಮಿಳು ಮತ್ತು ಕನ್ನಡದಲ್ಲಿ ನಿರ್ಮಾಣಗೊಳ್ಳಲಿದೆ. ಇದರ ಜೊತೆಗೆ ಕೆಆರ್ಜಿ ನಿರ್ಮಾಣ ಸಂಸ್ಥೆಯೂ ಸಹ ಒಂದು ಸಿನಿಮಾವನ್ನು ಸುದೀಪ್ ಅವರಿಗಾಗಿ ನಿರ್ಮಾಣ ಮಾಡಲಿದೆ.
ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಕಳೆದ ವರ್ಷ ಡಿಸೆಂಬರ್ನಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಯ್ತು. ಅದಾದ ಬಳಿಕ ಸುದೀಪ್ ನಟನೆಯ ಇನ್ಯಾವುದೇ ಸಿನಿಮಾ ಬಂದಿಲ್ಲ. ‘ಬಿಲ್ಲಾ ರಂಗ ಭಾಷಾ’ ಸಿನಿಮಾ ಇದೇ ವರ್ಷಾಂತ್ಯಕ್ಕೆ ಬಿಡುಗಡೆ ಆಗುವ ಸಾಧ್ಯತೆ ಇದೆ. ಅನೂಪ್ ಭಂಡಾರಿ ಅವರೊಟ್ಟಿಗೆ ಸುದೀಪ್ ಅವರದ್ದು ಇದು ಎರಡನೇ ಸಿನಿಮಾ ಆಗಲಿದೆ. ಈ ಹಿಂದೆ ಇದೇ ಜೋಡಿ ‘ವಿಕ್ರಾಂತ್ ರೋಣ’ ಸಿನಿಮಾ ಮಾಡಿತ್ತು. ಆ ಸಿನಿಮಾ ಹಿಟ್ ಎನಿಸಿಕೊಂಡಿತ್ತು. ಈ ಬಾರಿ ‘ಬಿಲ್ಲಾ ರಂಗ ಭಾಷಾ’ ಮೂಲಕ ಭಿನ್ನ ಕತೆಯೊಟ್ಟಿಗೆ ಪ್ರೇಕ್ಷಕರ ಮುಂದೆ ಬರಲಿದೆ ಈ ಜೋಡಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ





