AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲವು ಡಿಸ್ಕಷನ್​ಗಳು ಬೇಡ; ಮನೆ ಒಡೆಯೋಕೆ ಹೋದ ಚಕ್ರವರ್ತಿಗೆ ಸುದೀಪ್​ ವಾರ್ನಿಂಗ್

ಈ ವಾರ ಚಂದ್ರಚೂಡ್​ ಕಳಪೆ ಪ್ರದರ್ಶನ ತೋರಿದ ಆರೋಪ ಹೊತ್ತು ಜೈಲು ಸೇರಿದರು. ಮನೆಯವರೆಲ್ಲರೂ ಸಂಚು ರೂಪಿಸಿ ಇದನ್ನು ಮಾಡಿದರು ಎನ್ನುವ ಸುಳ್ಳು ಆರೋಪವನ್ನು ಚಂದ್ರಚೂಡ್ ಮಾಡಿದ್ದರು. ಇದಕ್ಕೆ ಸುದೀಪ್​ ಸ್ಪಷ್ಟನೆ ನೀಡಿದ್ದಾರೆ.

ಕೆಲವು ಡಿಸ್ಕಷನ್​ಗಳು ಬೇಡ; ಮನೆ ಒಡೆಯೋಕೆ ಹೋದ ಚಕ್ರವರ್ತಿಗೆ ಸುದೀಪ್​ ವಾರ್ನಿಂಗ್
ಚಕ್ರವರ್ತಿ ಚಂದ್ರಚೂಡ್​ - ಕಿಚ್ಚ ಸುದೀಪ್
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Apr 11, 2021 | 3:44 PM

ಚಕ್ರವರ್ತಿ ಚಂದ್ರಚೂಡ್​ ಬಂದಮೇಲೆ ಬಿಗ್​ ಬಾಸ್​ ಮನೆಯಲ್ಲಿ ಅನೇಕ ವಿಚಾರಗಳು ಬದಲಾಗಿವೆ. ಪ್ರಶಾಂತ್​ ಸಂಬರಗಿ ಸದಾ ಚಂದ್ರಚೂಡ್​ ಜತೆಯೇ ಇರುತ್ತಾರೆ. ಇದನ್ನು ಗಮನಿಸಿದ ಸ್ಪರ್ಧಿಗಳು, ಇಬ್ಬರೂ ಮನೆ ಒಡೆಯೋಕೆ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಆರೋಪ ಹೊರಿಸಿದರು. ಈ ವಿಚಾರವಾಗಿ ಸುದೀಪ್​ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಚಂದ್ರಚೂಡ್​ಗೆ ಖಡಕ್​ ವಾರ್ನಿಂಗ್​ ನೀಡಿದ್ದಾರೆ. ಈ ವಾರ ಚಂದ್ರಚೂಡ್​ ಕಳಪೆ ಪ್ರದರ್ಶನ ತೋರಿದ ಆರೋಪ ಹೊತ್ತು ಜೈಲು ಸೇರಿದರು. ಕಳಪೆ ಪ್ರದರ್ಶನ ಯಾರಿಗೆ ನೀಡಬೇಕು ಎಂದು ಎಲ್ಲಿಯೂ ಚರ್ಚೆ ಮಾಡುವಂತಿಲ್ಲ. ಇದು ಮನೆಯಲ್ಲಿ ಎಲ್ಲರಿಗೂ ಗೊತ್ತಿರುವ ವಿಚಾರ. ಮನೆಯವರೆಲ್ಲರೂ ಸಂಚು ರೂಪಿಸಿ ಇದನ್ನು ಮಾಡಿದರು ಎನ್ನುವ ಸುಳ್ಳು ಆರೋಪವನ್ನು ಚಂದ್ರಚೂಡ್ ಮಾಡಿದ್ದರು. ಇದಕ್ಕೆ ಸುದೀಪ್​ ಸ್ಪಷ್ಟನೆ ನೀಡಿದ್ದಾರೆ.

ವಿಕೆಂಡ್​ನಲ್ಲಿ ಮಾತನಾಡಿದ ಸುದೀಪ್​, ಶುಭಾ ಆ್ಯಂಡ್​ ಟೀಂ ನಿಂತು ಮಾತನಾಡುತ್ತಿರುವುದನ್ನು ನೋಡಿ ನೀವು ನಾನಾ ಕಲ್ಪನೆಗಳನ್ನು ಮಾಡಿಕೊಂಡಿರಿ. ಕಳಪೆ ಎನ್ನುವ ಪಟ್ಟ ಹೊರಿಸೋಕೆ ಅವರು ಚರ್ಚೆ ನಡೆಸಿದರು ಎಂದು ನೀವು ಊಹಿಸಿದಿರಿ. ಆದರೆ, ಅವರು ನಮಗೆ ಬಿರಿಯಾನಿ ಕಳುಹಿಸಿ, ಚಿಕನ್​ ಕಳುಹಿಸಿ ಎನ್ನುವ ಬೇಡಿಕೆ ಇಡುತ್ತಿದ್ದರು ಅಷ್ಟೇ ಎಂದು ಚಕ್ರವರ್ತಿಗೆ ಎಲ್ಲವನ್ನೂ ಸ್ಪಷ್ಟಪಡಿಸಿದ್ದಾರೆ.

ನೀವು ತುಂಬಾ ತಿಳುವಳಿಕೆ ಇರುವ ವ್ಯಕ್ತಿ. ನೀವು ಹೀಗೆ ಮಾಡಬಾರದು. ನೀವು ಏನನ್ನಾದರೂ ಮಾತನಾಡುತ್ತಾ ಇದ್ದರೆ ಉಳಿದವರೂ ಅದನ್ನೇ ಮಾತನಾಡುತ್ತಾರೆ ಅನ್ನೋ ಭಾವನೆ ಬರುತ್ತದೆ. ಆದರೆ, ಇದು ಸರಿಯಲ್ಲ. ಬಿಗ್​ ಬಾಸ್​ ಮನೆಯಲ್ಲಿ ಕೆಲವು ಚರ್ಚೆಗಳು ಬೇಡ. ಅದು ಹೊರ ಜಗತ್ತಿಗೆ ಸರಿ ಕಾಣುವುದಿಲ್ಲ. ಜನರ ಪಾಲಿಗೆ ಕೆಟ್ಟವರಾಗಿ ಕಾಣೋದು ನೀವೆ. ಟಾಸ್ಕ್​ ಗೆಲ್ಲೋಕೆ, ಮನರಂಜನೆ ನೀಡೋಕೆ ಎನೆಲ್ಲ ಬೇಕೋ ಅದನ್ನು ಮಾಡಿ. ನಾವು ಕೊನೆಗೆ ಇಲ್ಲಿ ಒಬ್ಬರನ್ನೇ ಗೆಲ್ಲಿಸೋದು ಎಂದು ಚಕ್ರವರ್ತಿಗೆ ಸುದೀಪ್​ ನೇರವಾಗಿ ಮಾತಿನ ಏಟು ಕೊಟ್ಟರು.

ಇನ್ನು, ಮನೆಯಲ್ಲಿ ಗುಂಪುಗಳಾಗುತ್ತಿವೆ ಎನ್ನುವ ವಿಚಾರವಾಗಿಯೂ ಮಾತನಾಡಿದ ಸುದೀಪ್​,ಇಲ್ಲಿ ಯಾರೂ ತಮ್ಮದೇ ಪಾರ್ಟಿ ಮಾಡಲು ಸಾಧ್ಯವಿಲ್ಲ. ಕಳೆದ ಒಂದು ವಾರದಿಂದ ಕೆಲವರು ಇದರ ಮೇಲೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಆದರೆ, ಇದರಿಂದ ಹೊರ ಬನ್ನಿ ಎಂದು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಒಡೆದು ಆಳೋಕೆ ಬಂದ ಚಕ್ರವರ್ತಿ ಚಂದ್ರಚೂಡ್​ಗೆ ಮರೆಯಲಾರದ ಪಾಠ ಕಲಿಸಿದ ಸ್ಪರ್ಧಿಗಳು