ಬಿಗ್​ ಬಾಸ್ ಹೆಸರು ದುರ್ಬಳಕೆ ಮಾಡಿಕೊಂಡ ಪ್ರಶಾಂತ್​ ಸಂಬರಗಿ; ಸುದೀಪ್ ಛೀಮಾರಿ

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಕ್ಯಾಪ್ಟನ್​ ಆಗಿದ್ದಾರೆ. ಹೀಗಾಗಿ, ಅವರು ಮನೆಯವರನ್ನು ಸಂಪೂರ್ಣವಾಗಿ ಕಂಟ್ರೋಲ್​ಗೆ ತೆಗೆದುಕೊಳ್ಳೋಕೆ ಮುಂದಾಗುತ್ತಿದ್ದಾರೆ.

ಬಿಗ್​ ಬಾಸ್ ಹೆಸರು ದುರ್ಬಳಕೆ ಮಾಡಿಕೊಂಡ ಪ್ರಶಾಂತ್​ ಸಂಬರಗಿ; ಸುದೀಪ್ ಛೀಮಾರಿ
ಪ್ರಶಾಂತ್​-ಕಿಚ್ಚ ಸುದೀಪ್​
Edited By:

Updated on: Apr 12, 2021 | 8:34 AM

ಬಿಗ್​ ಬಾಸ್​ ಮನೆಯ ಸದಸ್ಯರು ಪ್ರಶಾಂತ್​ ಸಂಬರಗಿ ಮೇಲೆ ಸಾಲು ಸಾಲು ಆರೋಪ ಮಾಡುತ್ತಲೇ ಇರುತ್ತಾರೆ. ಕೆಲವೊಂದು ಮನೆಯಲ್ಲೇ ಬಗೆಹರಿದರೆ, ಇನ್ನೂ ಕೆಲವು ಸುದೀಪ್​ ಎದುರು ಚರ್ಚೆಗೆ ಬರುತ್ತದೆ. ಆದರೆ, ಈ ಬಾರಿ ಸ್ವತಃ ಸುದೀಪ್​ ಅವರೇ ಪ್ರಶಾಂತ್​ ವಿಚಾರ ಎತ್ತಿಕೊಂಡು ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಬಿಗ್​ ಬಾಸ್​ ಹೆಸರು ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಸರಿಯಾಗಿ ಮಾತಿನ ಚಾಟಿ ಬೀಸಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಕ್ಯಾಪ್ಟನ್​ ಆಗಿದ್ದಾರೆ. ಹೀಗಾಗಿ, ಅವರು ಮನೆಯವರನ್ನು ಸಂಪೂರ್ಣವಾಗಿ ಕಂಟ್ರೋಲ್​ಗೆ ತೆಗೆದುಕೊಳ್ಳೋಕೆ ಮುಂದಾಗುತ್ತಿದ್ದಾರೆ. ಎಲ್ಲರೂ ತಾವು ಹೇಳಿದಂತೆ ಕೇಳಬೇಕು ಎನ್ನುವ ಮನಸ್ಥಿತಿ ಹೊಂದಿದ್ದಾರೆ. ಇದರ ಭಾಗವಾಗಿ ಅವರು ಕೆಲವು ಸುಳ್ಳುಗಳನ್ನು ಹೇಳಿದ್ದಾರೆ. ಇದು ಸುದೀಪ್​ ಗಮನಕ್ಕೆ ಬಂದಿದೆ.

ಬಿಗ್​ ಬಾಸ್​ ಇತ್ತೀಚೆಗೆ ಟಾಸ್ಕ್​ ಒಂದನ್ನು ನೀಡಿದ್ದರು. ಅದನ್ನು ಹೇಳೋಕೆ ಕನ್​ಫೆಷನ್​ ರೂಂಗೆ ಪ್ರಶಾಂತ್​ ಅವರನ್ನು ಕರೆಯಲಾಗಿತ್ತು. ಆಗ ಬಿಗ್​ ಬಿಗ್​ ಬಾಸ್​ ಟಾಸ್ಕ್​ ಬಗ್ಗೆ ಹೇಳಿದ್ದರು. ಆಗ ನಮಗೆ ಊಟ ಆಗಿಲ್ಲ, 10 ನಿಮಿಷ ಟೈಂ ಕೊಡಿ ಎಂದು ಪ್ರಶಾಂತ್​ ಕೇಳಿದ್ದರು. ಆದರೆ, ಕನ್​ಫೆಷನ್​ ರೂಂನಿಂದ ಹೊರ ಬಂದ ಪ್ರಶಾಂತ್​, ಬಿಗ್​ ಬಾಸ್ ಹೇಳಿದಾರೆ, 10 ನಿಮಿಷ ಮಾತ್ರ ಟೈಂ ಇದೆ. ಅಷ್ಟರಲ್ಲಿ ರೆಡಿ ಆಗಿ ಎಂದು ಹೇಳಿದ್ದರು. ಇದನ್ನು ಸುದೀಪ್​ ಉಲ್ಲೇಖಿಸಿದ್ದಾರೆ.

ಇನ್ನು, ಬಿಗ್​ ಬಾಸ್​ ಮನೆಯಲ್ಲಿ ದಿಂಬಿನ ಫೈಟ್​ ನಡೆಯುತ್ತಿತ್ತು. ಹೀಗೆ ಮಾಡಬಾರದು ಎಂದು ಬಿಗ್​ ಬಾಸ್​ ಹೇಳಿದಾರೆ ಅಂತ ಪ್ರಶಾಂತ್​ ಹೇಳುವ ಮೂಲಕ ಮನೆಯವರನ್ನು ಸುಮ್ಮನಿರಿಸಿದ್ದರು. ಇದಕ್ಕೂ ಸುದೀಪ್​ ಅಸಮಾಧಾನ ಹೊರ ಹಾಕಿದ್ದಾರೆ.

ಬಿಗ್​ ಬಾಸ್ ಕೋಟ್​ ಮಾಡಿ ಹೇಳುವಾಗ ಎಚ್ಚರವಾಗಿರಿ. ಬಿಗ್​ ಬಾಸ್​ ಏನು ಹೇಳಿದ್ದಾರೋ ಅದನ್ನು ಮಾತ್ರ ಹೇಳಬೇಕು. ನೀವೇ ಲೈನ್ ಕ್ರಿಯೇಟ್​ ಮಾಡಿ ಹೇಳಬಾರದು. ಹಾಗೆ ಹೇಳೋದು ತಪ್ಪಾಗುತ್ತದೆ ಎಂದು ಅಚ್ಚರಿಸಿದರು. ಇದಕ್ಕೆ ಸಮಜಾಯಿಶಿ ಕೊಡೋಕೆ ಹೋದ ಪ್ರಶಾಂತ್​ಗೆ, ತಪ್ಪು ತಪ್ಪೇ ಎಂದು ಹೇಳುವ ಮೂಲಕ ಸುದೀಪ್​​ ಸುಮ್ಮನಾಗಿಸಿದರು.

ಇದನ್ನೂ ಓದಿ: ಸಂಬರಗಿ ನಡೆಸಿದ ದೊಡ್ಡ ಕುತಂತ್ರ ವಿಫಲ​; ಮನೆಯವರ ಎದುರು ಹೀರೋ ಆದ ರಘು!

ತಪ್ಪಾಗಿದೆ ಕ್ಷಮಿಸಿ; ಸುದೀಪ್​ ನೇರ ಪ್ರಶ್ನೆಗೆ ಹಣ್ಣುಗಾಯಿ ನೀರುಗಾಯಿ ಆದ ಸಂಬರಗಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us