‘ಹಣಕ್ಕಲ್ಲ, ಹುಚ್ಚಾಟಕ್ಕೆ’; ಅಂಬಾನಿ ಮಗನ ಮದುವೆಗೆ ಬಂದಿದ್ದಕ್ಕೆ ಕಾರಣ ನೀಡಿದ ಕಿಮ್ ಕರ್ದಾಶಿಯಾನ್

2024ರ ಜುಲೈನಲ್ಲಿ ನಡೆದ ಅಂಬಾನಿ ಕುಟುಂಬದ ಮದುವೆಯಲ್ಲಿ ಕಿಮ್ ಕರ್ದಾಶಿಯನ್ ಪಾಲ್ಗೊಂಡಿದ್ದರು. ಅವರಿಗೆ ಅಂಬಾನಿ ಕುಟುಂಬದ ಬಗ್ಗೆ ಹೆಚ್ಚು ತಿಳಿದಿರಲಿಲ್ಲವಾದರೂ, ಸಾಮಾನ್ಯ ಸ್ನೇಹಿತರ ಮೂಲಕ ಆಹ್ವಾನ ಪಡೆದಿದ್ದರು. ಕಿಮ್ ಅವರು ತಮ್ಮ ರಿಯಾಲಿಟಿ ಶೋನಲ್ಲಿ ಈ ಭಾರತ ಪ್ರವಾಸ ಮತ್ತು ಅದ್ಭುತವಾದ ಆಹ್ವಾನ ಪತ್ರದ ಬಗ್ಗೆ ವಿವರಿಸಿದ್ದಾರೆ.

‘ಹಣಕ್ಕಲ್ಲ, ಹುಚ್ಚಾಟಕ್ಕೆ’; ಅಂಬಾನಿ ಮಗನ ಮದುವೆಗೆ ಬಂದಿದ್ದಕ್ಕೆ ಕಾರಣ ನೀಡಿದ ಕಿಮ್ ಕರ್ದಾಶಿಯಾನ್
Kim Kardashian
Edited By:

Updated on: Mar 15, 2025 | 7:35 AM

2024ರ ಜುಲೈ ತಿಂಗಳಲ್ಲಿ ಭಾರತದಲ್ಲಿ ನಡೆದ ಅಂಬಾನಿ ಕುಟುಂಬದ ಮದುವೆಯಲ್ಲಿ ಮಾಡೆಲ್ ಕಿಮ್ ಕರ್ದಾಶಿಯಾನ್ ಭಾಗಿ ಆಗಿದ್ದರು. ಈ ಸುದ್ದಿ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈಗ ಅವರು ನಡೆಸಿಕೊಡೋ ‘ದಿ ಕರ್ದಾಶಿಯನ್ಸ್’ ರಿಯಾಲಿಟಿ ಶೋನಲ್ಲಿ ತಮ್ಮ ಭಾರತದ ಟ್ರಿಪ್ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಅಂಬಾನಿ ಕುಟುಂಬದ ಬಗ್ಗೆ ಸ್ವಲ್ಪವೂ ತಿಳಿದಿರಲೇ ಇಲ್ಲ. ಆದಾಗ್ಯೂ ಅವರು ಭಾರತಕ್ಕೆ ಬಂದರು. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

‘ನನಗೆ ಅಂಬಾನಿ ಕುಟುಂಬದ ಬಗ್ಗೆ ಗೊತ್ತಿರಲಿಲ್ಲ. ಆದರೆ ನಮಗೆ ಕಾಮನ್ ಫ್ರೆಂಡ್ಸ್ ಇದ್ದರು. ಆಭರಣ ವ್ಯಾಪಾರಿ ಲೋರೈನ್ ಶ್ವಾರ್ಟ್ಜ್ ಅಂಬಾನಿ ಕುಟುಂಬಕ್ಕೆ ಆಭರಣ ಮಾಡಿಕೊಡುತ್ತಾರೆ. ಅವರು ನನಗೆ ಒಳ್ಳೆಯ ಗೆಳೆತಿ. ಅವರು ಅಂಬಾನಿ ಮದುವೆಗೆ ಹೋಗುತ್ತಿರುವುದಾಗಿ ನನಗೆ ಹೇಳಿದರು. ಅಂಬಾನಿ ಕುಟುಂಬ ನಿಮ್ಮನ್ನು ಸ್ವಾಗತಿಸಲು ಇಷ್ಟಪಡುತ್ತಿದೆ ಎಂದು ನನ್ನ ಬಳಿ ಹೇಳಿಕೊಂಡರು. ಹುಚ್ಚಾಟಿಕೆಗೆ ಓಕೆ ಎಂದೆವು’ ಎಂದಿದ್ದಾರೆ ಕಿಮ್.

‘ನಮಗೆ ಅಂಬಾನಿ ಕಡೆಯಿಂದ ಆಮಂತ್ರಣ ಬಂತು. ಅದು ಸುಮಾರು 18-22 ಕೆಜಿ ತೂಕ ಇತ್ತು. ಅದನ್ನು ತೆರೆದಾಗ ಅದರಿಂದ ಸಂಗೀತ ಬರುತ್ತಿತ್ತು. ನಮಗೆ ಆಮಂತ್ರಣಪತ್ರ ನೋಡಿ ಕ್ರೇಜಿ ಎನಿಸಿತು. ನಮಗೆ ಅದು ಇಷ್ಟ ಆಯಿತು. ಈ ರೀತಿಯದ್ದಕ್ಕೆ ಇಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. ಹೀಗಾಗಿ ವಿವಾಹಕ್ಕೆ ಹೋದೆವು’ ಎಂದಿದ್ದಾರೆ ಕಿಮ್.

ಇದನ್ನೂ ಓದಿ
ಅಪ್ಪು ಪ್ರೀತಿ ವಿಚಾರ ಹೇಳಿದಾಗ ರಾಜ್​ಕುಮಾರ್ ಪ್ರತಿಕ್ರಿಯಿಸಿದ್ದು ಹೇಗೆ?
ಅಂಬರೀಷ್ ಮಾಡಿದ ಎಡವಟ್ಟಿನಿಂದ ಮೂರು ದಿನ ಪ್ರಜ್ಞೆ ಕಳೆದುಕೊಂಡಿದ್ದ ಜಯಮಾಲಾ
ಗರ್ಲ್​ಫ್ರೆಂಡ್ ಬರ್ತ್​ಡೇ ಪಾರ್ಟಿನ ಅದ್ದೂರಿಯಾಗಿ ಆಚರಿಸಿದ ಸಲ್ಮಾನ್ ಖಾನ್
ಕಿಮ್ ಕರ್ದಾಶಿಯಾನ್ ಮೈಮಾಟ ನೋಡಿ ಕಣ್ಣರಳಿಸಿದ ಸಲ್ಮಾನ್ ಖಾನ್; ವಿಡಿಯೋ ವೈರಲ್

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ವಿವಾಹ ಕಾರ್ಯಕ್ರಮ 2024ರ ಮಾರ್ಚ್​​ನಿಂದ ಆರಂಭ ಆಯಿತು. ಜಾಮ್​ನಗರದಲ್ಲಿ ವಿವಾಹ ಕಾರ್ಯಕ್ರಮ ನಡೆಯಿತು. ರಿಹಾನಾ ಅವರು ಪ್ರೀ-ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಹಾಡಿದರು. ಬಾಲಿವುಡ್​ ಸೆಲೆಬ್ರಿಟಿಗಳು ಕೂಡ ವೇದಿಕೆ ಮೇಲೆ ಹೆಜ್ಜೆ ಹಾಕಿದರು.

ಇದನ್ನೂ ಓದಿ: ಕಿಮ್ ಕರ್ದಾಶಿಯಾನ್ ಮೈಮಾಟ ನೋಡಿ ಕಣ್ಣರಳಿಸಿದ ಸಲ್ಮಾನ್ ಖಾನ್; ವಿಡಿಯೋ ವೈರಲ್

ಕಿಮ್ ಕರ್ದಾಶಿಯಾನ್ ಅಮೆರಿಕದವರು. ಅವರು ಉದ್ಯಮಿ ಆಗಿ, ಮಾಡೆಲ್ ಆಗಿ, ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅವರು ಈಗಾಗಲೇ ಮೂರು ವಿವಾಹ ಆಗಿದ್ದು, ಮೂರು ವಿವಾಹಗಳು ವಿಚ್ಛೇದನದಲ್ಲಿ ಕೊನೆಗೊಂಡಿದೆ. ಅವರಿಗೆ ನಾಲ್ವರು ಮಕ್ಕಳು. ಅವರಿಗೆ ಈಗ 44 ವರ್ಷ. 14,781 ಕೋಟಿ ರೂಪಾಯಿ ಆಸ್ತಿಯನ್ನು ಕಿಮ್ ಹೊಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.