ಲಿಯಾಂಡರ್ ಪೇಸ್-ಕಿಮ್ ಶರ್ಮಾ ಪ್ರೀತಿಗೆ ಸಿಕ್ತು ಫೋಟೋ ಸಾಕ್ಷಿ; ಮೌನವಾಗಿ ಎಲ್ಲವನ್ನೂ ಒಪ್ಪಿಕೊಂಡ ಜೋಡಿ
ಲಿಯಾಂಡರ್ ಪೇಸ್ ಅವರನ್ನು ತಬ್ಬಿಕೊಂಡಿರುವ ಕಿಮ್ ಶರ್ಮಾ ಅವರು ಕ್ಯಾಮರಾ ಕಡೆಗೆ ತಿರುಗಿ ಪೋಸ್ ನೀಡಿದ್ದಾರೆ. ಪ್ರೇಯಸಿಯನ್ನು ಕಣ್ತುಂಬಿಕೊಳ್ಳುತ್ತಿರುವ ಲಿಯಾಂಡರ್ ಪೇಸ್ ಅವರು ಮನಸಾರೆ ನಗು ಚೆಲ್ಲಿದ್ದಾರೆ.
ಮಾಜಿ ಟಿನಿಸ್ ಆಟಗಾರ ಲಿಯಾಂಡರ್ ಪೇಸ್ ಮತ್ತು ನಟಿ ಕಿಮ್ ಶರ್ಮಾ ನಡುವಿನ ಸಂಬಂಧ ಈಗ ಗುಟ್ಟಾಗಿ ಉಳಿದಿಲ್ಲ. ಅವರಿಬ್ಬರು ತುಂಬ ಆಪ್ತವಾಗಿ ಕಾಣಿಸಿಕೊಂಡ ಫೋಟೋಗಳು ಈ ಹಿಂದೆಯೇ ವೈರಲ್ ಆಗಿದ್ದವು. ಆದರೂ ಕೂಡ ಈ ಜೋಡಿ ತಮ್ಮ ರಿಲೇಷನ್ಶಿಪ್ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆಗಳನ್ನು ನೀಡಿರಲಿಲ್ಲ. ಈಗ ಅವರಿಬ್ಬರ ಪ್ರೇಮ್ ಕಹಾನಿಗೆ ಸಾಕ್ಷಿ ಒದಗಿಸುವಂತಹ ಇನ್ನೊಂದು ಘಟನೆ ನಡೆದಿದೆ. ಆ ಮೂಲಕ ಕಿಮ್ ಶರ್ಮಾ ಮತ್ತು ಲಿಯಾಂಡರ್ ಪೇಸ್ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬುದು ಬಹುತೇಕ ಖಚಿತವಾಗಿದೆ. ಈ ಪ್ರಯಣಪಕ್ಷಿಗಳು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಒಂದೇ ರೀತಿಯ ಫೋಟೋಗಳನ್ನು ಹಂಚಿಕೊಂಡು ಅಚ್ಚರಿ ಮೂಡಿಸಿವೆ.
ಈ ಫೋಟೋದಲ್ಲಿ ಲಿಯಾಂಡರ್ ಪೇಸ್ ಅವರನ್ನು ತಬ್ಬಿಕೊಂಡಿರುವ ಕಿಮ್ ಶರ್ಮಾ ಅವರು ಕ್ಯಾಮರಾ ಕಡೆಗೆ ತಿರುಗಿ ಪೋಸ್ ನೀಡಿದ್ದಾರೆ. ಪ್ರೇಯಸಿಯನ್ನು ಕಣ್ತುಂಬಿಕೊಳ್ಳುತ್ತಿರುವ ಲಿಯಾಂಡರ್ ಪೇಸ್ ಅವರು ಮನಸಾರೆ ನಗು ಚೆಲ್ಲಿದ್ದಾರೆ. ಈ ಜೋಡಿಯ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಿಮ್ ಶರ್ಮಾ ಅವರು ಸೂಕ್ತವಾದ ಕ್ಯಾಪ್ಷನ್ ನೀಡದೇ ಈ ಫೋಟೋ ಹಂಚಿಕೊಂಡು ಕೌತುಕ ಮೂಡಿಸಿದ್ದಾರೆ. ಆದರೆ ಲಿಯಾಂಡರ್ ಪೇಸ್ ಅವರು ‘ಮ್ಯಾಜಿಕ್’ ಎಂದು ಕ್ಯಾಪ್ಷನ್ ನೀಡಿದ್ದಾರೆ.
View this post on Instagram
ಈ ವರ್ಷ ಜುಲೈನಲ್ಲಿ ಕೂಡ ಈ ಜೋಡಿಯ ಕೆಲವು ಆತ್ಮೀಯ ಕ್ಷಣಗಳ ಫೋಟೋಗಳು ವೈರಲ್ ಆಗಿದ್ದವು. ಲಿಯಾಂಡರ್ ಪೇಸ್ ಮತ್ತು ಕಿಮ್ ಶರ್ಮಾ ಬಗ್ಗೆ ಕಿಮ್ ಅವರ ಮಾಜಿ ಪ್ರಿಯಕರ ಹರ್ಷವರ್ಧನ್ ರಾಣೆ ಪ್ರತಿಕ್ರಿಯೆ ನೀಡಿದ್ದರು. ‘ಇವರಿಬ್ಬರ ಸಂಬಂಧದ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರೇ ಒಪ್ಪಿಕೊಂಡರೆ ಒಳ್ಳೆಯದು. ಅವರು ಡೇಟಿಂಗ್ ಮಾಡುತ್ತಿರುವ ಸುದ್ದಿ ನಿಜವಾಗಿದ್ದರೆ ಅವರಿಬ್ಬರನ್ನು ಹಾಟೆಸ್ಟ್ ಕಪಲ್ ಅಂತ ಕರೆಯಬಹುದು’ ಎಂದು ಹರ್ಷವರ್ಧನ್ ರಾಣೆ ಹೇಳಿದ್ದರು. 2019ರವರೆಗೂ ಹರ್ಷವರ್ಧನ್ ರಾಣೆ ಜೊತೆಗೆ ಕಿಮ್ ಶರ್ಮಾ ಡೇಟಿಂಗ್ ಮಾಡುತ್ತಿದ್ದರು. ಆದರೆ ಇಬ್ಬರ ನಡುವೆ ವೈಮನಸ್ಸು ಮೂಡಿದ್ದರಿಂದ ಬ್ರೇಕಪ್ ಮಾಡಿಕೊಂಡಿದ್ದರು. ಈಗ ಲಿಯಾಂಡರ್ ಪೇಸ್ ಜೊತೆ ಕಿಮ್ ಲವ್ವಿ-ಡವ್ವಿ ಜೋರಾಗಿದೆ.
ತೆಲುಗಿನ ಸೂಪರ್ ಹಿಟ್ ಸಿನಿಮಾ ‘ಮಗಧೀರ’ದಲ್ಲಿ ನಟಿ ಕಿಮ್ ಶರ್ಮಾ ವಿಶೇಷ ಪಾತ್ರ ಮಾಡಿದ್ದರು. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದ ಅವರು 2010ರಿಂದ ಈಚೆಗೆ ಕೊಂಚ ಸೈಲೆಂಟ್ ಆಗಿದ್ದಾರೆ. ಕೈಯಲ್ಲಿ ಸಿನಿಮಾ ಇಲ್ಲದಿದ್ದರೂ ವೈಯಕ್ತಿಕ ಜೀವನದ ಕಾರಣಕ್ಕಾಗಿ ಅವರು ಆಗಾಗ ಸುದ್ದಿ ಆಗುತ್ತಿರುತ್ತಾರೆ.
ಇದನ್ನೂ ಓದಿ:
ಲಿಯಾಂಡರ್ ಪೇಸ್ ಜೊತೆ ‘ಮಗಧೀರ’ ಚೆಲುವೆ ಡೇಟಿಂಗ್; ಮಾಜಿ ಬಾಯ್ಫ್ರೆಂಡ್ ಹೇಳಿದ್ದೇನು?
Prabhas: ಡೇಟಿಂಗ್ ವಿಚಾರಕ್ಕೆ ಜಾಗತಿಕ ಮಟ್ಟದಲ್ಲಿ ಪ್ರಭಾಸ್ ಸುದ್ದಿ; ಇದೆಲ್ಲ ಯಾರ ಜೊತೆ, ಏನು ಕಥೆ?