‘ಬ್ಲಾಕ್​ಬಸ್ಟರ್ ಸಿನಿಮಾ’; ‘ಕಿಂಗ್ಡಮ್’ ನೋಡಿ ವಿಮರ್ಶೆ ತಿಳಿಸಿದ ಅಭಿಮಾನಿಗಳು

Kingdom Movie Twitter Review: ವಿಜಯ್ ದೇವರಕೊಂಡ ಅಭಿನಯದ ‘ಕಿಂಗ್ಡಮ್’ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದೆ ಎಂದು ಅಭಿಮಾನಿಗಳು ಘೋಷಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ವಿಜಯ್ ಅವರ ಅದ್ಭುತ ಅಭಿನಯ, ಬಲವಾದ ಕಥಾವಸ್ತು, ಮತ್ತು ಆ್ಯಕ್ಷನ್ ದೃಶ್ಯಗಳು ಚಿತ್ರಕ್ಕೆ ಹೆಚ್ಚು ಮೆಚ್ಚುಗೆ ತಂದಿವೆ. ಚಿತ್ರದ ಟ್ರೇಲರ್ ನಿಂದಲೇ ನಿರೀಕ್ಷೆ ಹೆಚ್ಚಿಸಿದ್ದ "ಕಿಂಗ್ಡಮ್" ಈಗ ಗೆಲುವಿನ ನಗೆ ಬೀರಿದೆ.

‘ಬ್ಲಾಕ್​ಬಸ್ಟರ್ ಸಿನಿಮಾ’; ‘ಕಿಂಗ್ಡಮ್’ ನೋಡಿ ವಿಮರ್ಶೆ ತಿಳಿಸಿದ ಅಭಿಮಾನಿಗಳು
ಕಿಂಗ್ಡಮ್

Updated on: Jul 31, 2025 | 11:53 AM

ವಿಜಯ್ ದೇವರಕೊಂಡ ಅವರು ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡುವ ಹಂಬದಲ್ಲಿ ಇದ್ದರು. ಇದಕ್ಕೆ ‘ಕಿಂಗ್ಡಮ್’ ಸಿನಿಮಾ (Kingdom Movie) ಸಾಥ್ ಕೊಟ್ಟಿದೆ. ಇಂದು (ಜುಲೈ 31) ರಿಲೀಸ್ ಆದ ಚಿತ್ರವನ್ನು ನೋಡಿ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಈ ಚಿತ್ರವನ್ನು ‘ಬ್ಲಾಕ್​ಬಸ್ಟರ್’ ಎಂದು ಘೋಷಣೆ ಮಾಡಿದ್ದಾರೆ. ಅಲ್ಲದೆ, ವಿಜಯ್​ಗೆ ಕಂಬ್ಯಾಕ್ ಎಂದು ಫ್ಯಾನ್ಸ್ ಪ್ರೀತಿಯಿಂದ ಬರೆದುಕೊಳ್ಳುತ್ತಿದ್ದಾರೆ. ವಿಜಯ್ ಅವರು ಈ ಚಿತ್ರದ ಮೂಲಕ ಗೆಲುವಿನ ನಗೆ ಬೀರಿದ್ದಾರೆ.

ವಿಜಯ್ ದೇವರಕೊಂಡ ಅವರ ‘ಕಿಂಗ್ಡಮ್’ ಸಿನಿಮಾ ಟ್ರೇಲರ್ ಮೂಲಕ ಸದ್ದು ಮಾಡಿದೆ. ವಿಜಯ್ ದೇವರಕೊಂಡ ಅವರು ಪೊಲೀಸ್ ಅಧಿಕಾರಿ. ಅನಿವಾರ್ಯ ಕಾರಣಗಳಿಂದ ಅವರು ಸ್ಪೈ ಆಗಿ ಜೈಲಿಗೆ ತೆರಳೋ ಪರಿಸ್ಥಿತಿ ಬರುತ್ತದೆ. ಇದರ ಜೊತೆಗೆ ಬ್ರದರ್ ಸೆಂಟಿಮೆಂಟ್ ಸೇರಿದಂತೆ ಇನ್ನೂ ಹಲವು ವಿಚಾರಗಳನ್ನು ಸಿನಿಮಾದಲ್ಲಿ ಹೇಳಲಾಗಿದೆ.

ಇದನ್ನೂ ಓದಿ
‘ಸು ಫ್ರಮ್ ಸೋ’ ಗೆದ್ದ ಖುಷಿಯಲ್ಲಿ ಬಾವ ಹೇಳೋದೇನು? ಯಾರಿವರು?
ಈ ಫೋಟೋದಲ್ಲಿರೋ ಬಾಲಕಿ ಈಗ ಸ್ಟಾರ್ ನಟಿ; ಯಾರೆಂದು ಗುರುತಿಸಿ
ಫೇಕ್ ಅಕೌಂಟ್ ಮಾಡಿದವರಿಗೆ ಸೂರ್ಯವಂಶ ಸ್ಟೈಲ್​ನಲ್ಲಿ ಎಸ್. ನಾರಾಯಣ್ ಕೌಂಟರ್
ವಾರದ ಮಧ್ಯವೂ ‘ಸು ಫ್ರಮ್ ಸೋ’ ಅಬ್ಬರದ ಕಲೆಕ್ಷನ್; ಹಲವು ದಾಖಲೆಗಳು ಉಡೀಸ್

ಇದನ್ನೂ ಓದಿ: ‘ಕಿಂಗ್ಡಮ್’ ಅಡ್ವಾನ್ಸ್ ಬುಕಿಂಗ್ ಬಲು ಜೋರು, ಈ ವರೆಗೆ ಸೇಲ್ ಆಗಿದ್ದೆಷ್ಟು?

ಸಿನಿಮಾ ನೋಡಿದ ಅನೇಕರು ಟ್ವಿಟರ್ ಮೂಲಕ ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ. ‘ಸಿನಿಮಾ ಸೂಪರ್ ಆಗಿದೆ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು, ‘ಬ್ಲಾಕ್​ಬಸ್ಟರ್ ವಿಜಯ್ ಅಣ್ಣ’ ಎಂದು ಹೇಳಿದ್ದಾರೆ. ‘ಸ್ಟೋರಿ ಥೀಮ್ ಸಿನಿಮಾದ ಹೈಲೈಟ್. ಇದು ವಿಜಯ್ ದೇವರಕೊಂಡ ವೃತ್ತಿ ಜೀವನದ ಅತ್ಯುತ್ತಮ ಪರ್ಫಾರ್ಮೆನ್ಸ್. ಆ್ಯಕ್ಷನ್ ಹಾಗೂ ಮ್ಯೂಸಿಕ್ ಅದ್ಭುತವಾಗಿದೆ’ ಎಂದು ಅನೇಕರು ಹೇಳಿದ್ದಾರೆ.

ಗೌತಮ್ ತಿನ್ನನುರಿ ಅವರು ‘ಕಿಂಗ್ಡಮ್’ ಸಿನಿಮಾದಲ್ಲಿ ನಟಿಸಿದ್ದಾರೆ. ನಾಗ ವಂಶಿ ಅವರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ವಿಜಯ್ ದೇವರಕೊಂಡ, ಸತ್ಯದೇವ್, ಭಾಗ್ಯಶ್ರೀ ಭೋರ್ಸೆ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದ ಬಜೆಟ್ 130 ಕೋಟಿ ರೂಪಾಯಿಗೂ ಅಧಿಕವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 11:47 am, Thu, 31 July 25