Adipurush: ಕರುನಾಡಿನಲ್ಲಿ ‘ಕೆಆರ್​ಜಿ ಸ್ಟುಡಿಯೋಸ್​’ ಸಂಸ್ಥೆಯ ಪಾಲಾಯ್ತು ‘ಆದಿಪುರುಷ್​’ ಸಿನಿಮಾ ವಿತರಣೆ ಹಕ್ಕು

KRG Studios: ಪ್ಯಾನ್​ ಇಂಡಿಯಾ ಮಟ್ಟದಲ್ಲಿ ‘ಆದಿಪುರುಷ್’ ಚಿತ್ರ ಜೂನ್ 16ರಂದು ಬಿಡುಗಡೆ ಆಗಲಿದೆ. ಕರ್ನಾಟಕದಲ್ಲಿ ಈ ಸಿನಿಮಾದ ವಿತರಣೆ ಹಕ್ಕುಗಳನ್ನು ‘ಕೆಆರ್​ಜಿ ಸ್ಟುಡಿಯೋಸ್​’ ಸಂಸ್ಥೆ ಪಡೆದುಕೊಂಡಿದೆ.

Adipurush: ಕರುನಾಡಿನಲ್ಲಿ ‘ಕೆಆರ್​ಜಿ ಸ್ಟುಡಿಯೋಸ್​’ ಸಂಸ್ಥೆಯ ಪಾಲಾಯ್ತು ‘ಆದಿಪುರುಷ್​’ ಸಿನಿಮಾ ವಿತರಣೆ ಹಕ್ಕು
ಪ್ರಭಾಸ್​
Follow us
ಮದನ್​ ಕುಮಾರ್​
|

Updated on: Jun 10, 2023 | 3:42 PM

ಬಹುನಿರೀಕ್ಷಿತ ‘ಆದಿಪುರುಷ್​’ (Adipurush) ಸಿನಿಮಾದ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದುಕೊಂಡಿವೆ. ಈ ಸಿನಿಮಾವನ್ನು ವಿಶ್ವಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ. ಪ್ರಭಾಸ್​ ಅಭಿನಯದ ಈ ಚಿತ್ರದ ಬಗ್ಗೆ ಕರುನಾಡಿನಲ್ಲಿಯೂ ಕ್ರೇಜ್​ ಹೆಚ್ಚಾಗಿದೆ. ಕರ್ನಾಟಕದಲ್ಲಿ ‘ಆದಿಪುರುಷ್​’ ಸಿನಿಮಾದ ವಿತರಣೆ ಹಕ್ಕುಗಳು ‘ಕೆಆರ್​ಜಿ ಸ್ಟುಡಿಯೋಸ್​’ (KRG Studios) ಸಂಸ್ಥೆಯ ಪಾಲಾಗಿದೆ. ‘ನಮಗೆ ಆದಿಪುರುಷ್ ಚಿತ್ರದ ಕರ್ನಾಟಕದ ವಿತರಣೆ ಸಿಕ್ಕಿರುವುದು ಬಹಳ ಹೆಮ್ಮೆಯ ಸಂಗತಿ’ ಎಂದು ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕ ಮತ್ತು ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯ ಸಂಸ್ಥಾಪಕರಾದ ಕಾರ್ತಿಕ್ ಗೌಡ (Karthik Gowda) ಸಂತಸ ವ್ಯಕ್ತಪಡಿಸಿದ್ದಾರೆ. ‘ನಮ್ಮ ಪೌರಾಣಿಕ ಮಹಾಕಾವ್ಯವಾದ ರಾಮಾಯಣದಲ್ಲಿ ಇರುವ ಸಾರವನ್ನು ಇಟ್ಟುಕೊಂಡು ಇಂದಿನ ಕಾಲಘಟ್ಟಕ್ಕೆ ಮತ್ತು ಇಂದಿನ ಪೀಳಿಗೆಗೆ ಅನುಗುಣವಾಗಿ ಆದಿಪುರುಷ್ ಚಿತ್ರವನ್ನು ಮಾಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ‘ಆದಿಪುರುಷ್’ ಚಿತ್ರ ಜೂನ್ 16ರಂದು ತೆಲುಗು, ಹಿಂದಿ, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ರಿಲೀಸ್​ ಆಗಲಿದೆ. ವಿದೇಶದಲ್ಲೂ ಅದ್ದೂರಿಯಾಗಿ ತೆರೆಕಾಣಲಿದೆ. ಈ ಚಿತ್ರವು ಪ್ರಭಾಸ್ ಮತ್ತು ಯು.ವಿ. ಕ್ರಿಯೇಷನ್ಸ್ ಜೊತೆಗಿನ ‘ಕೆ.ಆರ್.ಜಿ ಸ್ಟುಡಿಯೋಸ್’ ಒಡನಾಟಕ್ಕೆ ಸಾಕ್ಷಿಯಾಗಲಿದೆ. ಟಿ. ಸೀರೀಸ್ ಮತ್ತು ರೆಟ್ರೋಫಿಲ್ಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಓಂ ರಾವತ್ ಅವರು ನಿರ್ದೇಶನ ಮಾಡಿದ್ದಾರೆ.

3ಡಿ ವರ್ಷನ್​ನಲ್ಲಿ ತೆರೆಕಾಣುತ್ತಿರುವುದರಿಂದ ‘ಆದಿಪುರುಷ್’ ಸಿನಿಮಾದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಸೆನ್ಸಾರ್​ ಮಂಡಳಿಯಲ್ಲಿ ಈ ಸಿನಿಮಾಗೆ ‘ಯು’ ಪ್ರಮಾಣ ಪತ್ರ ಸಿಕ್ಕಿದೆ. ಅಂದರೆ, ವಯಸ್ಸಿನ ಮಿತಿ ಇಲ್ಲದೇ ಯಾರು ಬೇಕಿದ್ದರೂ ಈ ಸಿನಿಮಾವನ್ನು ನೋಡಬಹುದು. ಫ್ಯಾಮಿಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು ‘ಯು’ ಪ್ರಮಾಣಪತ್ರ ಬಹಳ ಮುಖ್ಯ ಆಗುತ್ತದೆ. ಇನ್ನು ಈ ಸಿನಿಮಾದ ಅವಧಿ ಬರೋಬ್ಬರಿ 3 ಗಂಟೆ ಇದೆ ಎಂಬುದು ಗಮನಿಸಬೇಕಾದ ಅಂಶ.

ಇದನ್ನೂ ಓದಿ: Adipurush Movie: ರಾಮನ ಮೀಸೆ ವಿಚಾರಕ್ಕೆ ಸ್ಪಷ್ಟನೆ ನೀಡಿದ ‘ಆದಿಪುರುಷ್’ ನಿರ್ಮಾಪಕ

‘ಆದಿಪುರುಷ್​’ ಚಿತ್ರದ ಹಿಂದಿ ಅವತರಣಿಕೆಯ ಸೆನ್ಸಾರ್​ ಸರ್ಟಿಫಿಕೇಟ್​ ಲಭ್ಯವಾಗಿದೆ. ಇದರಲ್ಲಿ ಚಿತ್ರದ ಅವಧಿ ಬಗ್ಗೆ ಮಾಹಿತಿ ಇದೆ. ಆ ಪ್ರಕಾರ, ಈ ಸಿನಿಮಾದ ಅವಧಿ ಬರೋಬ್ಬರು 2 ಗಂಟೆ 59 ನಿಮಿಷಗಳು. ಅಂದರೆ, 3 ಗಂಟೆಗೆ ಒಂದು ನಿಮಿಷ ಮಾತ್ರ ಬಾಕಿ. ಮಧ್ಯಂತರದ ಸಮಯವನ್ನೂ ಸೇರಿಸಿದರೆ ಈ ಸಿನಿಮಾದ ಪ್ರದರ್ಶನಕ್ಕೆ 3 ಗಂಟೆ 15 ನಿಮಿಷ ಬೇಕು. ಇದು ಪ್ರೇಕ್ಷಕರ ತಾಳ್ಮೆ ಪರೀಕ್ಷಿಸಬಹುದು. ಕೆಲವೊಮ್ಮೆ ಇದರಿಂದ ಸಿನಿಮಾಗೆ ಹಿನ್ನಡೆ ಆಗಲೂಬಹುದು. ಹಾಗಂತ ಯಾವುದನ್ನೂ ನಿಖರವಾಗಿ ಹೇಳಲು ಸಾಧ್ಯವಿಲ್ಲ. 3 ಗಂಟೆ ಅವಧಿ ಇರುವ ಸಿನಿಮಾಗಳು ಸೂಪರ್​ ಹಿಟ್​ ಉದಾಹರಣೆ ಕೂಡ ಇದೆ.

ಇದನ್ನೂ ಓದಿ: Ranbir Kapoor: ಬಡ ಮಕ್ಕಳಿಗಾಗಿ ‘ಆದಿಪುರುಷ್​’ ಚಿತ್ರದ 10 ಸಾವಿರ ಟಿಕೆಟ್​ ಉಚಿತವಾಗಿ ನೀಡಲು ಮುಂದಾದ ನಟ ರಣಬೀರ್​ ಕಪೂರ್​

‘ಆದಿಪುರುಷ್​’ ಚಿತ್ರದಲ್ಲಿ ಪ್ರಭಾಸ್ ಅವರು ರಾಮನಾಗಿ ನಟಿಸಿದ್ದು, ಸೀತೆ ಪಾತ್ರಕ್ಕೆ ಕೃತಿ ಸನೋನ್​ ಬಣ್ಣ ಹಚ್ಚಿದ್ದಾರೆ. ಲಕ್ಷ್ಮಣನಾಗಿ ಸನ್ನಿ ಸಿಂಗ್​ ಅಭಿನಯಿಸಿದ್ದಾರೆ. ರಾವಣನ ಪಾತ್ರವನ್ನು ಸೈಫ್​ ಅಲಿ ಖಾನ್​ ಮಾಡಿದ್ದಾರೆ. ಆಂಜನೇಯನ ಪಾತ್ರದಲ್ಲಿ ದೇವದತ್ತ ನಾಗೆ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ದಿನ ಈ ಸಿನಿಮಾ ಎಷ್ಟು ಕಲೆಕ್ಷನ್​ ಮಾಡಬಹುದು ಎಂಬ ಕೌತುಕ ಎಲ್ಲರ ಮನದಲ್ಲೂ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್