‘ಕುಬೇರ’ ಸಿನಿಮಾ ನೋಡುವಾಗಲೇ ಕುಸಿದು ಬಿದ್ದ ಚಿತ್ರಮಂದಿರದ ಸೀಲಿಂಗ್

ತೆಲಂಗಾಣದ ಚಿತ್ರಮಂದಿರವೊಂದಲ್ಲಿ ಈ ಘಟನೆ ನಡೆದಿದೆ. ‘ಕುಬೇರ’ ಚಿತ್ರ ಪ್ರದರ್ಶನದ ವೇಳೆ ಸೀಲಿಂಗ್ ಕುಸಿದಿದೆ. ಇದರಿಂದಾಗಿ ಕೆಲವರಿಗೆ ಗಾಯ ಆಗಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ಸೀಲಿಂಗ್ ಕುಸಿದ ಬಳಿಕ ಸಿನಿಮಾದ ಪ್ರದರ್ಶನ ನಿಲ್ಲಿಸಲಾಗಿದೆ. ವಿಡಿಯೋ ವೈರಲ್ ಆಗುತ್ತಿದೆ.

‘ಕುಬೇರ’ ಸಿನಿಮಾ ನೋಡುವಾಗಲೇ ಕುಸಿದು ಬಿದ್ದ ಚಿತ್ರಮಂದಿರದ ಸೀಲಿಂಗ್
Theatre

Updated on: Jun 27, 2025 | 5:36 PM

ಧನುಶ್, ರಶ್ಮಿಕಾ ಮಂದಣ್ಣ, ನಾಗಾರ್ಜುನ ನಟನೆಯ ‘ಕುಬೇರ’ ಸಿನಿಮಾ (Kubera Movie) ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಈ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಎಲ್ಲರಿಂದ ಪಾಸಿಟಿವ್ ವಿಮರ್ಶೆ ಸಿಕ್ಕಿದ್ದರಿಂದ ಜನರು ಚಿತ್ರಮಂದಿರದತ್ತ ಹೆಜ್ಜೆ ಹಾಕುತ್ತಿದ್ದಾರೆ. ಈ ನಡುವೆ ಒಂದು ಕಹಿ ಘಟನೆ ನಡೆದಿದೆ. ‘ಕಬೇರ’ ಸಿನಿಮಾ ಪ್ರದರ್ಶನ ಆಗುತ್ತಿರುವಾಗಲೇ ಚಿತ್ರಮಂದಿರದ ಸೀಲಿಂಗ್ (Theatre Ceiling) ಕುಸಿದು ಬಿದ್ದಿದೆ. ಇದರಿಂದಾಗಿ ಪ್ರೇಕ್ಷಕರಿಗೆ ಗಾಯಗಳು ಆಗಿವೆ. ತೆಲಂಗಾಣದ ಮೆಹಬೂಬಾಬಾದ್​ನಲ್ಲಿ ಈ ಘಟನೆ ನಡೆದಿದೆ.

ಬುಧವಾರ (ಜೂನ್ 25) ‘ಏಷ್ಯನ್ ಮುಕುಂದ’ ಚಿತ್ರಮಂದಿರದಲ್ಲಿ ‘ಕುಬೇರ’ ಸಿನಿಮಾ ಪ್ರದರ್ಶನ ಆಗುತ್ತಿತ್ತು. ಪ್ರೇಕ್ಷಕರು ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದರು. ಬೆಳಗ್ಗೆ 11.30ರ ಸುಮಾರಿಗೆ ಚಿತ್ರಮಂದಿರದ ಸೀಲಿಂಗ್ ಕುಸಿದಿದೆ. ಕೆಳಗೆ ಕೂತಿದ್ದ ಪ್ರೇಕ್ಷಕರ ಮೈ ಮೇಲೆಯೇ ಸೀಲಿಂಗ್ ಬಿದ್ದಿದ್ದರಿಂದ ಎಲ್ಲರೂ ಗಾಬರಿ ಆಗಿದ್ದಾರೆ. ಕೆಲವರಿಗೆ ಸಣ್ಣ-ಪುಟ್ಟ ಗಾಯಳಾಗಿವೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯ ಆಗಿಲ್ಲ. ಸ್ವಲ್ಪದರಲ್ಲಿಯೇ ಅಪಾಯ ತಪ್ಪಿ ಹೋಗಿದೆ. ಸೀಲಿಂಗ್ ಕುಸಿದ ಬಳಿಕ ಅಲ್ಲಿನ ಪರಿಸ್ಥಿತಿ ಹೇಗಿದೆ ಎಂಬುದನ್ನು ವಿವರಿಸುವ ವಿಡಿಯೋ ವೈರಲ್ ಆಗಿದೆ. ಇದನ್ನು ಕಂಡು ಜನರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಸೀಲಿಂಗ್ ಕುಸಿಯುತ್ತಿದ್ದಂತೆಯೇ ‘ಕುಬೇರ’ ಸಿನಿಮಾದ ಪ್ರದರ್ಶನ ನಿಲ್ಲಿಸಲಾಯಿತು.

ಇದನ್ನೂ ಓದಿ
ನೀರು ಕುಡಿಯುವಾಗ ಧನುಷ್​ ಬಗ್ಗೆ ಹೊಗಳಿಕೆ; ಎಲ್ಲವೂ ಮೂಗಲ್ಲೇ ಬಂತು
ಧನುಶ್ ವಿರುದ್ಧ ಗಂಭೀರ ಆರೋಪ ಮಾಡಿದ ನಿರ್ಮಾಣ ಸಂಸ್ಥೆ
'ನೀಚ' ಧನುಶ್​ ನಿಜ ಬಣ್ಣ ಬಯಲು ಮಾಡಿದ ನಯನತಾರಾ
ಮಾಜಿ ಪತ್ನಿ ಜತೆ ಕುಳಿತು ವೆಟ್ಟೈಯನ್​ ಸಿನಿಮಾ ನೋಡಿದ ಧನುಷ್; ವಿಡಿಯೋ ವೈರಲ್

ಚಿತ್ರಮಂದಿರದ ಸೀಲಿಂಗ್ ಮೈಮೇಲೆ ಬಿದ್ದಿದ್ದರಿಂದ ಇಬ್ಬರಿಗೆ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಚಿತ್ರಮಂದಿರದವರ ನಿರ್ಲಕ್ಷ್ಯದಿಂದಲೇ ಈ ರೀತಿ ಆಗಿದೆ ಎಂದು ಸಿಬ್ಬಂದಿಯ ಜೊತೆ ಪ್ರೇಕ್ಷಕರು ಜಗಳ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಕೇಸ್ ದಾಖಲಾಗಿಲ್ಲ. ಯಾಕೆಂದರೆ, ಗಾಯಗೊಂಡ ಪ್ರೇಕ್ಷಕರು ಚಿತ್ರಮಂದಿರದವರ ಜೊತೆ ರಾಜಿ ಆಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಭಿಕ್ಷುಕನ ವೇಷ ಧರಿಸಲು ಕೋಟಿ ಕೋಟಿ ಸಂಭಾವನೆ ಪಡೆದ ಧನುಶ್

ಮೊದಲ ದಿನ ‘ಕುಬೇರ’ ಸಿನಿಮಾಗೆ 14.75 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ತೆಲುಗು, ತಮಿಳು, ಕನ್ನಡ ಮುಂತಾದ ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆ ಆಗಿದೆ. ಆಮಿರ್ ಖಾನ್ ನಟನೆಯ ‘ಸಿತಾರೆ ಜಮೀನ್ ಪರ್’ ಸಿನಿಮಾದ ಪೈಪೋಟಿ ನಡುವೆಯೂ ‘ಕುಬೇರ’ ಸಿನಿಮಾ ಉತ್ತಮವಾಗಿ ಕಲೆಕ್ಷನ್ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.