ನೀರು ಕುಡಿಯುವಾಗ ಧನುಷ್ ಬಗ್ಗೆ ಹೊಗಳಿಕೆ; ಎಲ್ಲವೂ ಮೂಗಲ್ಲೇ ಬಂತು
Dhanush: ನಟ ಧನುಶ್ ತಮಿಳಿನ ಸ್ಟಾರ್ ನಟರಲ್ಲಿ ಒಬ್ಬರು. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಅವರು ನೀಡಿದ್ದಾರೆ. ಸಿನಿಮಾಗಳಲ್ಲಿ ಮಾಸ್, ಕ್ಲಾಸ್ ಹಲವು ರೀತಿಯ ಪಾತ್ರಗಳನ್ನು ಮಾಡಿರುವ ಧನುಶ್, ನಿಜ ಜೀವನದಲ್ಲಿ ತುಸು ಸಂಕೋಚದ ವ್ಯಕ್ತಿತ್ವದವರು. ಸಿನಿಮಾ ಕಾರ್ಯಕ್ರಮವೊಂದರಲ್ಲಿ ನಿರೂಪಕಿ ಧನುಶ್ ಕುರಿತು ಆಡಿದ ಭಾರಿ ಹೊಗಳಿಕೆಯ ಮಾತಿಗೆ ಸ್ವತಃ ಧನುಶ್ ನಕ್ಕಿರುವ ಹಳೆಯ ವಿಡಿಯೋ ಇದೀಗ ವೈರಲ್ ಆಗಿದೆ.

ಧನುಷ್ (Dhanush) ಅವರು ಕಾಲಿವುಡ್ನ ಸ್ಟಾರ್ ಹೀರೋ. ಅವರಿಗೆ ತಮಿಳು ಚಿತ್ರರಂಗದಲ್ಲಿ ಬೇಜಾನ್ ಬೇಡಿಕೆ ಇರೋದು ಗೊತ್ತೇ ಇದೆ. ಅವರು ಭಿನ್ನ ಸಿನಿಮಾಗಳನ್ನು ಮಾಡುತ್ತಾರೆ. ಅವರು ಈಗ ನಿರ್ದೇಶನಕ್ಕೂ ಇಳಿದಿರೋದು ಗೊತ್ತೇ ಇದೆ. ಈಗ ಧನುಷ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ತಮ್ಮ ಬಗ್ಗೆ ಕೇಳಿದ ಹೊಗಳಿಕೆಗೆ ಧನುಷ್ ಸುಸ್ತಾಗಿ ಹೋಗಿದ್ದಾರೆ. ಅವರ ಮೂಗಿನಿಂದ ನೀರು ಬಂದಿದೆ. ಆ ಫನ್ನಿ ವಿಡಿಯೋನ ಇಂದು ನೋಡೋಣ.
ಧನುಷ್ ಹಾಗೂ ಸಾಯಿ ಪಲ್ಲವಿ ‘ಮಾರಿ 2’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿ ನಡೆಯುತ್ತಾ ಇತ್ತು. ಅತ್ತ ಆ್ಯಂಕರ್ ಧನುಷ್ ಅವರನ್ನು ಹೊಗಳೋಕೆ ಆರಂಭಿಸಿದರು. ಅವರನ್ನು ವಿಶೇಷ ಹಾಗೂ ವಿಚಿತ್ರ ಶಬ್ದಗಳಿಂದ ಹೊಗಳಿದರು. ಇದನ್ನು ಕೇಳಿ ಧನುಷ್ ಅವರಿಗೆ ಸ್ವತಃ ನಗು ಬಂದು ಹೋಯಿತು. ಆ ಫನ್ನಿ ವಿಡಿಯೋನ ಈಗ ವೈರಲ್ ಮಾಡಲಾಗುತ್ತಿದೆ.
‘ಕರುಣೆ ಎಂದರೆ ಧನುಷ್’ ಎಂದು ಆ್ಯಂಕರ್ ಹೇಳಿದರು. ಈ ವೇಳೆ ಧನುಷ್ ಅವರು ನೀರು ಕುಡಿಯುತ್ತಿದ್ದರು. ನಗು ತಾಳಲಾರದೆ ಅವರ ಮೂಗಿನಿಂದ ನೀರು ಬಂದೇ ಬಿಟ್ಟಿತು. ಈ ಫನ್ನಿ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಧನುಷ್ ತಮ್ಮ ಕೆಲಸಗಳಿಗೆ ಹಾಗೂ ತಮ್ಮ ಬಗ್ಗೆ ಎಂದಿಗೂ ಹೊಗಳಿಕೆಯನ್ನು ನಿರೀಕ್ಷಿಸಿದವರು ಅಲ್ಲ ಎಂದು ಕೆಲವರು ಹೇಳಿದ್ದಾರೆ.
ಇದನ್ನೂ ಓದಿ:ಧನುಶ್ ವಿರುದ್ಧ ಗಂಭೀರ ಆರೋಪ ಮಾಡಿದ ನಿರ್ಮಾಣ ಸಂಸ್ಥೆ
ಧನುಷ್ ಅವರು ಸದ್ಯ ‘ಕುಬೇರ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ವರ್ಷವೇ ಈ ಚಿತ್ರ ರಿಲೀಸ್ ಆಗುವ ನಿರೀಕ್ಷೆ ಇದೆ. ಈ ಚಿತ್ರಕ್ಕೆ ಕನ್ನಡದ ರಶ್ಮಿಕಾ ಮಂದಣ್ಣ ನಾಯಕಿ. ಈ ಚಿತ್ರ ಗೆದ್ದರೆ ರಶ್ಮಿಕಾ ಅವರಿಗೆ ಕಾಲಿವುಡ್ನಲ್ಲಿ ಬೇಡಿಕೆ ಹೆಚ್ಚುವ ನಿರೀಕ್ಷೆ ಇದೆ. 2024ರಲ್ಲಿ ಧನುಷ್ ನಟನೆಯ ‘ರಾಯನ್’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈಗ ಅವರು ಎರಡು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದರ ಜೊತೆಗೆ ‘ಕುಬೇರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



