ಟಾಲಿವುಡ್ ನಟ ನಾಗ ಚೈತನ್ಯ (Naga Chaitanya) ಅವರ ಬದುಕಿನಲ್ಲಿ ಈ ರೀತಿ ಆಗುತ್ತದೆ ಎಂದು ಅವರ ಫ್ಯಾನ್ಸ್ ಊಹಿಸಿರಲಿಲ್ಲ. ಪ್ರೀತಿಸಿ ಮದುವೆಯಾದ ಸಮಂತಾ (Samantha) ಅವರು ವಿಚ್ಛೇದನ ಪಡೆದು ದೂರಾದರು. ಡಿವೋರ್ಸ್ ಆದ ಬಳಿಕ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅನೇಕ ಚಟುವಟಿಕೆಗಳಲ್ಲಿ ಅವರು ಭಾಗವಹಿಸುತ್ತಿದ್ದಾರೆ. ಆದರೆ ನಾಗ ಚೈತನ್ಯ ಸ್ವಲ್ಪ ಸೈಲೆಂಟ್ ಆಗಿದ್ದಾರೆ. ಅವರು ಯಾರನ್ನು ಕೈ ಹಿಡಿಯಬಹುದು ಎಂಬ ದೊಡ್ಡ ಪ್ರಶ್ನೆ ಎಲ್ಲರ ಮುಂದಿದೆ. ಈ ಸಂದರ್ಭದಲ್ಲಿ ನಾಗ ಚೈತನ್ಯ ಯಾವುದೇ ಹುಡುಗಿಯ ಜೊತೆ ಕಾಣಿಸಿಕೊಂಡರೂ ಜನರು ಕಣ್ಣರಳಿಸಿ ನೋಡುತ್ತಾರೆ. ಈಗ ನಟಿ, ನಿರೂಪಕಿ ಲಹರಿ ಶರಿ (Lahari Shari) ಅವರು ನಾಗ ಚೈತನ್ಯ ಅವರ ಖಾಸಗಿ ವಿಮಾನದಲ್ಲಿ (Naga Chaitanya Private Flight) ಸುತ್ತಾಟ ನಡೆಸಿದ ಫೋಟೋ ವೈರಲ್ ಆಗಿದೆ..
ತೆಲುಗು ಚಿತ್ರರಂಗದಲ್ಲಿ ಲಹರಿ ಶರಿ ಫೇಮಸ್ ಆಗಿದ್ದಾರೆ. ನಟಿಯಾಗಿ, ನಿರೂಪಕಿಯಾಗಿ, ಬಿಗ್ ಬಾಸ್ ಸ್ಪರ್ಧಿಯಾಗಿ ಅವರು ಗಮನ ಸೆಳೆದಿದ್ದಾರೆ. ಈಗ ಲಹರಿ ಶರಿಗೆ ನಾಗ ಚೈತನ್ಯ ಅವರ ಖಾಸಗಿ ವಿಮಾನದಲ್ಲಿ ಹಾರಾಡುವ ಅವಕಾಶ ಸಿಕ್ಕಿದೆ. ಈ ವೇಳೆ ಅಕ್ಕಿನೇನಿ ನಾಗಾರ್ಜುನ ಕೂಡ ಜೊತೆಗಿದ್ದರು. ಆ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಏನಿದು ಸಮಾಚಾರ ಎಂದು ಕೆದಕಿ ನೋಡಿದರೆ ಅಸಲಿ ವಿಚಾರ ತಿಳಿಯುತ್ತದೆ.
ನಾಗ ಚೈತನ್ಯ ಮತ್ತು ನಾಗಾರ್ಜುನ ಅವರನ್ನು ಕಂಡರೆ ಲಹರಿ ಶರಿ ಅವರಿಗೆ ಸಖತ್ ಅಭಿಮಾನ. ಈ ಸೆಲೆಬ್ರಿಟಿಗಳ ಜೊತೆ ದಿನ ಕಳೆಯಬೇಕು ಎಂಬುದು ಅವರ ಕನಸಾಗಿತ್ತು. ಅದೀಗ ಈಡೇರಿದೆ. ‘ಬಂಗಾರ‍್ರಾಜು’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಾಗ ಚೈತನ್ಯ ಮತ್ತು ನಾಗಾರ್ಜುನ ಭಾಗವಹಿಸುತ್ತಿದ್ದಾರೆ. ಅದರಲ್ಲಿ ಲಹರಿ ಶರಿ ಕೂಡ ಪಾಲ್ಗೊಂಡಿದ್ದಾರೆ. ಪ್ರಚಾರದ ಸಲುವಾಗಿ ಊರೂರು ಸುತ್ತುತ್ತಿರುವ ತಂದೆ-ಮಗನ ಜೊತೆ ಖಾಸಗಿ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಲಹರಿ ಶರಿ ಅವರಿಗೂ ಸಿಕ್ಕಿದೆ. ಆ ಫೋಟೋಗಳು ಈಗ ವೈರಲ್ ಆಗಿವೆ.
Had a memorable journey! ✈️ Felt humble to meet both Nagarjuna Sir and Naga Chaitanya Sir ! ? @chay_akkineni@iamnagarjuna#nagsir #akkineninagarjuna #kingnagarjuna#nag #nagarjuna #nagarjunaakkineni #nagachaitanya #akkineni #akkineninagachaitanya #chay #nagachaithanya pic.twitter.com/AynGV1xGT6
— Lahari Shari (@laharishari) January 8, 2022
‘ಕನಸು ನನಸಾಯಿತು. ಇಡೀ ದಿನ ನಿಮ್ಮ ಜೊತೆ ಕಳೆಯುವ ಅವಕಾಶ ನೀಡಿದ್ದಕ್ಕಾಗಿ ನಾಗಾರ್ಜುನ ಸರ್ ಮತ್ತು ನಾಗ ಚೈತನ್ಯ ಸರ್ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಈ ದಿನವನ್ನು ಸ್ಮರಣೀಯವಾಗಿಸಿದ್ದೀರಿ. ಲವ್ ಅಕ್ಕಿನೇನೀಸ್’ ಎಂದು ಲಹರಿ ಶರಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:
‘ಹು ಅಂತೀಯಾ ಮಾವ’ ಹಾಡಿನ ಮೇಲೆ ಕಾಪಿ ಆರೋಪ; ವೈರಲ್ ಆಗುತ್ತಿದೆ ಹೋಲಿಕೆಯ ವಿಡಿಯೋ
‘ಕುಟುಂಬಕ್ಕೆ ಮುಜುಗರ ತರುವ ಪಾತ್ರ ಮಾಡಲ್ಲ’; ಸಮಂತಾ ವಿಚ್ಛೇದನಕ್ಕೆ ಪರೋಕ್ಷವಾಗಿ ಕಾರಣ ನೀಡಿದ ನಾಗ ಚೈತನ್ಯ