ಕೊವಿಡ್​ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಿದ ನಟಿ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿದ ಬಿಜೆಪಿ

ಐಷಾ ನೀಡಿದ ಹೇಳಿಕೆ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಅಲ್ಲದೆ, ಇದು ವಿವಾದಾತ್ಮಕ ಹೇಳಿಕೆ ಎಂದು ಲಕ್ಷದ್ವೀಪದಲ್ಲಿ ಪ್ರತಿಭಟನೆಗಳು ನಡೆದಿದ್ದವು.

ಕೊವಿಡ್​ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಿದ ನಟಿ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿದ ಬಿಜೆಪಿ
ಐಷಾ ಸುಲ್ತಾನ

ಕೊವಿಡ್​ ವಿಚಾರದಲ್ಲಿ ಕೇಂದ್ರದ ವಿರುದ್ಧ ಮಾತನಾಡಿದ್ದ ಲಕ್ಷದ್ವೀಪದ ಮಾಡೆಲ್​ ಹಾಗೂ ನಟಿ ಐಷಾ ಸಲ್ತಾನ​ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದೆ. ಸದ್ಯ, ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಅನೇಕರು ಟ್ವಿಟರ್​ನಲ್ಲಿ ಈ ಬಗ್ಗೆ ಪರ-ವಿರೋಧ ಚರ್ಚೆ ಮಾಡುತ್ತಿದ್ದಾರೆ.

ಐಷಾ ಇತ್ತೀಚೆಗೆ ಮಾಧ್ಯಮವೊಂದರ ಚರ್ಚೆಯಲ್ಲಿ ಭಾಗಿಯಾಗಿದ್ದರು. ಮಾತಿನ ಭರದಲ್ಲಿ, ‘ಲಕ್ಷದ್ವೀಪದಲ್ಲಿ ಕೊರೊನಾ ಹೆಚ್ಚಲು ಇಲ್ಲಿನ ಅಡ್ಮಿನಿಸ್ಟ್ರೇಟರ್​ ಪ್ರಫುಲ್​ ಪಟೇಲ್​ ಅವರ ನಿರ್ಧಾರವೇ ಕಾರಣ. ಮತ್ತು ಲಕ್ಷದ್ವೀಪದ ವಿರುದ್ಧ ಕೇಂದ್ರ ಸರ್ಕಾರ ಬಯೋ ವೆಪನ್​ ಬಳಕೆ ಮಾಡಿದೆ. ಆರಂಭದಲ್ಲಿ ಇಲ್ಲಿ ಕೊವಿಡ್​ ಕೇಸ್​ಗಳು ಇರಲೇ ಇಲ್ಲ. ಈಗ ನಿತ್ಯ ನೂರು ಪ್ರಕರಣಗಳು ಬರುತ್ತಿವೆ’ ಎಂದು ಹೇಳಿದ್ದರು.

ಐಷಾ ನೀಡಿದ ಹೇಳಿಕೆ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಅಲ್ಲದೆ, ಇದು ವಿವಾದಾತ್ಮಕ ಹೇಳಿಕೆ ಎಂದು ಲಕ್ಷದ್ವೀಪದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಅವರ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ದೇಶದ್ರೋಹ ಪ್ರಕರಣ ದಾಖಲಿಸಿದೆ.

‘ನನ್ನ ವಿರುದ್ಧ ಬಿಜೆಪಿ ಕಾರ್ಯಕರ್ತರು ದೇಶದ್ರೋಹದ ಪ್ರಕರಣ ದಾಖಲು ಮಾಡಿದ್ದಾರೆ. ಆದರೆ ಯಾವಾಗಲೂ ಸತ್ಯವೇ ಗೆಲುವು ಕಾಣುತ್ತದೆ.  ನಾನು ಹುಟ್ಟಿದ ಭೂಮಿಗಾಗಿ ಫೈಟ್​ ಮಾಡುತ್ತೇನೆ. ನನ್ನಲ್ಲಿ ಈಗ ಯಾವುದೇ ಭಯ ಉಳಿದುಕೊಂಡಿಲ್ಲ. ನನ್ನ ಧ್ವನಿ ಮತ್ತಷ್ಟು ದೊಡ್ಡದಾಗಲಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Rocketry Trailer: ದೇಶದ್ರೋಹ ಆರೋಪ ಹೊತ್ತಿದ್ದ ನಂಬಿ ನಾರಾಯಣ್​ ಬಗ್ಗೆ ಮಾಧವನ್​ ಸಿನಿಮಾ! ‘ರಾಕೆಟ್ರಿ’ ಚಿತ್ರದ ರಿಯಲ್​ ಕಥೆ ಏನು?

Read Full Article

Click on your DTH Provider to Add TV9 Kannada