ರಜನಿಕಾಂತ್ ಪತ್ನಿ ಲತಾಗೆ ಎದುರಾಯ್ತು ಸಂಕಷ್ಟ; ಫೋರ್ಜರಿ ಕೇಸ್ ಮುಂದುವರಿಸಲು ಕರ್ನಾಟಕ ಹೈಕೋರ್ಟ್ ಅಸ್ತು

| Updated By: ರಾಜೇಶ್ ದುಗ್ಗುಮನೆ

Updated on: Aug 09, 2022 | 6:17 PM

‘ಕೊಚಾಡಿಯನ್​’ ಸಿನಿಮಾ ನಿರ್ಮಾಣ ಮಾಡಿದ್ದ ಮೀಡಿಯಾ ಒನ್ ಲಿಮಿಟೆಡ್​ ಪರವಾಗಿ ಲತಾ ಗ್ಯಾರಂಟಿ ಸಹಿ ಮಾಡಿದ್ದರು. ಸಿನಿಮಾ ಸೋತರೆ ನಷ್ಟ ಭರಿಸುವ ಭರವಸೆ ನೀಡಿದ್ದರು.

ರಜನಿಕಾಂತ್ ಪತ್ನಿ ಲತಾಗೆ ಎದುರಾಯ್ತು ಸಂಕಷ್ಟ; ಫೋರ್ಜರಿ ಕೇಸ್ ಮುಂದುವರಿಸಲು ಕರ್ನಾಟಕ ಹೈಕೋರ್ಟ್ ಅಸ್ತು
ರಜನಿಕಾಂತ್​-ಲತಾ
Follow us on

ನಟ ರಜನಿಕಾಂತ್ (Rajinikanth) ಅವರ ಪತ್ನಿ ಲತಾಗೆ ಸಂಕಷ್ಟ ಮುಂದುವರಿದಿದೆ. ‘ಕೊಚಾಡಿಯನ್​’ ಸಿನಿಮಾಗೆ ಸಂಬಂಧಿಸಿ ಹಣಕಾಸು ವಿವಾದ ಕೋರ್ಟ್ ಮೆಟ್ಟಿಲು ಏರಿತ್ತು. ಲತಾ ವಿರುದ್ಧ ಫೋರ್ಜರಿ, ವಂಚನೆ, ಸುಳ್ಳು ಹೇಳಿಕೆ ಕೇಸ್ ದಾಖಲಾಗಿತ್ತು. ಅವರ ವಿರುದ್ಧದ ವಂಚನೆ, ಸುಳ್ಳು ಹೇಳಿಕೆ ಪ್ರಕರಣಗಳನ್ನು ರದ್ದುಪಡಿಸಿರುವ ಕರ್ನಾಟಕ ಹೈಕೋರ್ಟ್, ಫೋರ್ಜರಿ ಕೇಸ್ ಮುಂದುವರಿಸಲು ಸೂಚನೆ ನೀಡಿದೆ. ಇದರಿಂದ ಲತಾ (Latha Rajinikanth) ಅವರಿಗೆ ಒಂದು ಕಡೆಯಲ್ಲಿ ರಿಲೀಫ್ ಸಿಕ್ಕರೆ, ಮತ್ತೊಂದೆಡೆ ಸಂಕಷ್ಟ ಮುಂದುವರಿದಿದೆ.

2014ರಲ್ಲಿ ರಜನಿಕಾಂತ್ ನಟನೆಯ ‘ಕೊಚಾಡಿಯನ್’ ಸಿನಿಮಾ ತೆರೆಗೆ ಬಂತು. ಈ ಚಿತ್ರಕ್ಕೆ ರಜನಿಕಾಂತ್ ಅವರ ಮಗಳು ಸೌಂದರ್ಯಾ ರಜನಿಕಾಂತ್ ನಿರ್ದೇಶನ ಮಾಡಿದ್ದರು. ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಈ ಚಿತ್ರದಲ್ಲಿ ನಟಿಸಿದ್ದರು. 125 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಗಳಿಕೆ ಮಾಡಿದ್ದು ಕೇವಲ 42 ಕೋಟಿ ರೂಪಾಯಿ ಮಾತ್ರ. ಇದರಿಂದ ನಿರ್ಮಾಪಕರು ದೊಡ್ಡ ನಷ್ಟ ಅನುಭವಿಸಿದ್ದರು.

‘ಕೊಚಾಡಿಯನ್​’ ಸಿನಿಮಾ ನಿರ್ಮಾಣ ಮಾಡಿದ್ದ ಮೀಡಿಯಾ ಒನ್ ಲಿಮಿಟೆಡ್​ ಪರವಾಗಿ ಲತಾ ಗ್ಯಾರಂಟಿ ಸಹಿ ಮಾಡಿದ್ದರು. ಸಿನಿಮಾ ಸೋತರೆ ನಷ್ಟ ಭರಿಸುವ ಭರವಸೆ ನೀಡಿದ್ದರು. ಈ ಸಿನಿಮಾ ಬಾಕ್ಸ್​ ಆಫೀಸ್​​ನಲ್ಲಿ ಸೋಲು ಕಂಡಿತು. ಆದರೆ, ಭರವಸೆಯಂತೆ ಲತಾ ನಷ್ಟ ಭರ್ತಿ ಮಾಡಿಲ್ಲವೆಂದು ಆರೋಪವಿದೆ.

ಇದನ್ನೂ ಓದಿ
Jailer: ಶಿವಣ್ಣ-ರಜನಿಕಾಂತ್​ ಸಿನಿಮಾಗೆ ‘ಜೈಲರ್​’ ಶೀರ್ಷಿಕೆ: ಅಭಿಮಾನಿಗಳಲ್ಲಿ ಕ್ರೇಜ್​ ಹೆಚ್ಚಿಸಿದ ಪೋಸ್ಟರ್​
ರಜನಿಕಾಂತ್​ಗೆ ನಾಯಕಿ ಆದ ಐಶ್ವರ್ಯಾ ರೈ; ಹೊಸ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ
ಡಿವೋರ್ಸ್​ ಬಳಿಕ ರಜನಿ ಪುತ್ರಿಗೆ ಮತ್ತೆ ಕಂಟಕ; ಆಸ್ಪತ್ರೆಗೆ ದಾಖಲಾದ ಐಶ್ವರ್ಯಾ ರಜನಿಕಾಂತ್​
ಕೋಟ್ಯಂತರ ರೂ. ಸಂಭಾವನೆ ಪಡೆಯುವ ರಜನಿಕಾಂತ್​ ಎಷ್ಟು ಆಸ್ತಿ ಹೊಂದಿದ್ದಾರೆ? ಇಲ್ಲಿದೆ ವಿವರ..

ಈ ಪ್ರಕರಣದ ಬಗ್ಗೆ ವರದಿ ಮಾಡದಂತೆ ಲತಾ ತಡೆಯಾಜ್ಞೆ ಕೋರಿದ್ದರು. ಮಾಧ್ಯಮಗಳ ವಿರುದ್ಧ ಲತಾ ತಡೆಯಾಜ್ಞೆ ತಂದಿದ್ದರು. ಆದರೆ, ತಡೆಯಾಜ್ಞೆ ಪಡೆಯಲು ಅವರು ಬೆಂಗಳೂರು ಪ್ರೆಸ್ ಕ್ಲಬ್ ವಿಳಾಸಕ್ಕೆ ಸಂಬಂಧಿಸಿದ ನಕಲಿ ದಾಖಲೆ ಬಳಕೆ ಮಾಡಿದ್ದರು ಎಂಬ ಆರೋಪ ಇದೆ. ಈ ಪ್ರಕರಣದಲ್ಲಿ ಮೆ.ಆ್ಯಡ್ ಬ್ಯೂರೋ ಅಡ್ವರ್ಟೈಸಿಂಗ್ ಪ್ರೈ. ಲಿ ಖಾಸಗಿ ದೂರು ನೀಡಿತ್ತು. ಈ ಪ್ರಕರಣದಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.

ಇದನ್ನೂ ಓದಿ: ರಾಜಕೀಯಕ್ಕೆ ಮರಳುವುದಿಲ್ಲ ಎಂದ ಸೂಪರ್​​ಸ್ಟಾರ್ ರಜನಿಕಾಂತ್

ಈ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಹೈಕೋರ್ಟ್‌ಗೆ ಲತಾ ರಜನಿಕಾಂತ್ ಅರ್ಜಿ ಸಲ್ಲಿಸಿದ್ದರು. ವಂಚನೆ, ಸುಳ್ಳು ಹೇಳಿಕೆ ಪ್ರಕರಣಗಳನ್ನು ರದ್ದುಪಡಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನರಿದ್ದ ಏಕಸದಸ್ಯ ಪೀಠ, ಫೋರ್ಜರಿ ಕೇಸ್ ಮುಂದುವರಿಸಲು ಸೂಚನೆ ನೀಡಿದೆ.