AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಯರ್ ಜಗದೀಶ್ ಹೊರಗೆ, ಪತ್ನಿ ಒಳಗೆ: ಕಲರ್ಸ್ ಶೋನಲ್ಲಿ ಜಗದೀಶ್ ಪತ್ನಿ

ಲಾಯರ್ ಜಗದೀಶ್ ತಮ್ಮ ಚಿತ್ರ, ವಿಚಿತ್ರ ಮತ್ತು ಅಗ್ರೆಸ್ಸಿವ್ ವರ್ತನೆಯಿಂದಾಗಿ ಬಿಗ್​ಬಾಸ್​ ಮನೆಯಿಂದ ಹೊರಗಟ್ಟಲ್ಪಟ್ಟಿದ್ದಾರೆ. ಆದರೆ ಅವರ ಪತ್ನಿ ಅದೇ ಕಲರ್ಸ್​ನ ಶೋ ಒಂದರಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ.

ಲಾಯರ್ ಜಗದೀಶ್ ಹೊರಗೆ, ಪತ್ನಿ ಒಳಗೆ: ಕಲರ್ಸ್ ಶೋನಲ್ಲಿ ಜಗದೀಶ್ ಪತ್ನಿ
ಲಾಯರ್ ಜಗದೀಶ್-ಸೌಮ್ಯಾ ಜಗದೀಶ್
ಮಂಜುನಾಥ ಸಿ.
|

Updated on: Oct 16, 2024 | 2:46 PM

Share

ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭ ಆದಾಗಿನಿಂದಲೂ ವಕೀಲ ಜಗದೀಶ್ ಮನೆಯಲ್ಲಿ ಅಬ್ಬರ ಎಬ್ಬಿಸಿದ್ದಾರೆ. ಬೇಕೆಂದೇ ನಿಯಮಗಳನ್ನು ಮುರಿಯುವುದು, ಕೆಟ್ಟ ಭಾಷೆ ಬಳಸುವುದು, ಮಿತಿ ಮೀರಿ ಫ್ಲರ್ಟ್ ಮಾಡುವುದು, ಸಿಕ್ಕ-ಸಿಕ್ಕವರ ಮೇಲೆ, ಸಿಕ್ಕ-ಸಿಕ್ಕವರ ಬಳಿ ಛಾಡಿ ಹೇಳುವುದು, ಎಲ್ಲರ ಮೇಲೂ ಜಗಳ ಆಡುವುದು, ಬಿಗ್​ಬಾಸ್​ ಧಮ್ಕಿ ಹಾಕುವುದು ಇದೇ ಮಾಡುತ್ತಾ ಬಂದಿದ್ದಾರೆ. ಜಗದೀಶ್ ಅವರ ಈ ವರ್ತನೆಯಿಂದ ಬೇಸತ್ತು ಇಡೀ ಮನೆ ಮಂದಿ ಅವರ ವಿರುದ್ಧ ಒಂದಾಗಿದ್ದರು. ಜಗದೀಶ್ ಹಾಗೂ ಮನೆಯ ಸದಸ್ಯರೊಬ್ಬರ ನಡುವೆ ಜಟಾಪಟಿ ನಡೆದಿರುವ ಕಾರಣ ಇದೀಗ ಜಗದೀಶ್ ಅನ್ನು ಕಲರ್ಸ್ ವಾಹಿನಿಯ ಬಿಗ್​ಬಾಸ್ ಮನೆಯಿಂದ ಹೊರಗೆ ಹಾಕಲಾಗಿದೆ. ಆದರೆ ಅವರ ಪತ್ನಿ ಅದೇ ಕಲರ್ಸ್ ವಾಹಿನಿಯ ಶೋ ಒಂದರಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ.

ಸವಿರುಚಿ ಕಾರ್ಯಕ್ರಮ ಕಲರ್ಸ್ ವಾಹಿನಿಯ ಜನಪ್ರಿಯ ಅಡುಗೆ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಲಾಯರ್ ಜಗದೀಶ್ ಅವರ ಪತ್ನಿ ಅತಿಥಿಯಾಗಿ ಆಗಮಿಸಿದ್ದಾರೆ. ಜಗದೀಶ್ ಪತ್ನಿ ಸೌಮ್ಯಾ ಜಗದೀಶ್ ಅವರು ಸವಿರುಚಿ ಕಾರ್ಯಕ್ರಮಕ್ಕೆ ಆಗಮಿಸಿದ್ದು, ರುಚಿ-ರುಚಿಯಾದ ಅಡುಗೆ ಮಾಡಿದ್ದಾರೆ. ಈ ಕಾರ್ಯಕ್ರಮದ ಪ್ರೋಮೋ ಅನ್ನು ಕಲರ್ಸ್ ವಾಹಿನಿ ಹಂಚಿಕೊಂಡಿದೆ. ವಿಶೇಷವೆಂದರೆ ಈ ಶೋ ಪ್ರಸಾರವಾಗುವ ವೇಳೆಗಾಗಲೆ ಜಗದೀಶ್, ಬಿಗ್​ಬಾಸ್ ಮನೆಯಿಂದ ಹೊರಗೆ ಬಂದಿದ್ದಾಗಿದೆ.

ಶೋನಲ್ಲಿ ಸೌಮ್ಯಾ ಅವರು, ಸೋಯಾ ಚಂಕ್ಸ್ ಮಸಾಲಾ ಕರಿ ಅಡುಗೆ ಮಾಡಿ ತೋರಿಸಿದರು. ಕಾರ್ಯಕ್ರಮದಲ್ಲಿ ಜಗದೀಶ್ ಬಗ್ಗೆಯೂ ಮಾತನಾಡಿದ ಸೌಮ್ಯಾ ಅವರು, ಬಿಗ್​ಬಾಸ್​ ನಲ್ಲಿ ಹೇಗೆ ಅವರು ಇದ್ದಾರೆಯೋ ಹಾಗೆಯೇ ಮನೆಯಲ್ಲಿಯೂ ಜಗದೀಶ್ ಇರುತ್ತಾರೆ ಎಂದು ಹೇಳಿದ್ದರು. ‘ಜಗದೀಶ್ ಅವರ ವ್ಯಕ್ತಿತ್ವ, ವರ್ತನೆಯನ್ನು ಯಾರೂ ಊಹಿಸಲು ಸಾಧ್ಯ ಆಗುವುದಿಲ್ಲ. ಒಮ್ಮೆ ಇದ್ದಕ್ಕಿದ್ದಂತೆ ಜಗಳ ಆಡಿ ಬಿಡುತ್ತಾರೆ ಆ ನಂತರ ಅವರೇ ಬಂದು ಕ್ಷಮೆ ಕೇಳುತ್ತಾರೆ. ಅವರಿಗೆ, ಅವರು ಮಾಡಿದ ತಪ್ಪು ಬೇಗನೆ ಅರ್ಥ ಆಗುತ್ತದೆ’ ಎಂದು ಪತ್ನಿ ಸೌಮ್ಯಾ ಅಡುಗೆ ಶೋನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:ಬಿಗ್ ಬಾಸ್​ನಲ್ಲಿ ರಂಜಿತ್-ಜಗದೀಶ್ ಮಧ್ಯೆ ಫೈಟ್? ಇಬ್ಬರೂ ಔಟ್

ಶೋನಲ್ಲಿ ಪತಿಯನ್ನು ನೆನದು ಭಾವುಕರಾಗಿದ್ದರು ಸೌಮ್ಯಾ, ‘ದಂಪತಿಗಳ ನಡುವೆ ಸಣ್ಣ ಪುಟ್ಟ ವಿಷಯಗಳು ಖುಷಿ ನೀಡುತ್ತವೆ. ಒಬ್ಬರಿಗೆ ತುತ್ತು ತಿನ್ನಿಸುವುದು, ಹೂವು ಮುಡಿಸುವುದು ಇದೆಲ್ಲ ಬಹಳ ಮುಖ್ಯ. ನಾನು ಇದನ್ನು ಹೇಳುತ್ತಿದ್ದೆ ಅವರಿಗೆ ಅದು ಅರ್ಥ ಆಗುತ್ತಿರುಲಿಲ್ಲ. ಈಗ ಅವರಿಗೆ ಅದೆಲ್ಲ ಅರ್ಥ ಆಗಿದೆ. ಮನೆಗೆ ಹೋಗಿ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ನಾನೂ ಸಹ ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂದಿದ್ದಾರೆ. ‘ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೀರ?’ ಎಂದು ನಿರೂಪಕಿಯ ಪ್ರಶ್ನೆಗೆ, ಭಾವುಕರಾದ ಸೌಮ್ಯಾ ಅವರು ‘ಅದು ಹೇಳಲು ಸಾಧ್ಯವಿಲ್ಲ’ ಎಂದು ಗದ್ಗದಿತರಾಗಿದ್ದಾರೆ.

ಈಗ ಜಗದೀಶ್, ಬಿಗ್​ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಲಿಮಿನೇಟ್ ಅನ್ನುವುದಕ್ಕಿಂತಲೂ ಹೊರಗಟ್ಟಲ್ಪಟ್ಟಿದ್ದಾರೆ. ಮನೆಯ ಒಳಗಿದ್ದಾಗ ಬಿಗ್​ಬಾಸ್ ಅನ್ನು ಹಾಗೆ ಮಾಡ್ತೀನಿ, ಹೀಗೆ ಮಾಡ್ತೀನಿ ಎಂದೆಲ್ಲ ಸವಾಲು ಹಾಕಿದ್ದರು. ಈಗ ಜಗದೀಶ್ ಹೊರಗೆ ಬಂದ ಮೇಲೆ ಏನು ಮಾಡುತ್ತಾರೆ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ