ಲಿಯಾಂಡರ್​ ಪೇಸ್​ ಜೊತೆ ‘ಮಗಧೀರ’ ಚೆಲುವೆ ಡೇಟಿಂಗ್​; ಮಾಜಿ ಬಾಯ್​ಫ್ರೆಂಡ್​ ಹೇಳಿದ್ದೇನು?

Leander Paes | Kim Sharma: ಲಿಯಾಂಡರ್​ ಪೇಸ್​ ಜೊತೆ ಕಿಮ್ ಶರ್ಮಾ​ ಓಡಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಅವರು ತಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡಿದರೂ ಅಚ್ಚರಿ ಏನಿಲ್ಲ.

ಲಿಯಾಂಡರ್​ ಪೇಸ್​ ಜೊತೆ ‘ಮಗಧೀರ’ ಚೆಲುವೆ ಡೇಟಿಂಗ್​; ಮಾಜಿ ಬಾಯ್​ಫ್ರೆಂಡ್​ ಹೇಳಿದ್ದೇನು?
ಲಿಯಾಂಡರ್​ ಪೇಸ್​ ಜೊತೆ ‘ಮಗಧೀರ’ ಚೆಲುವೆ ಡೇಟಿಂಗ್​
Edited By:

Updated on: Jul 15, 2021 | 2:06 PM

ಸಿನಿಲೋಕದ ತಾರೆಯರ ಜೊತೆಗೆ ಕ್ರೀಡಾ ಜಗತ್ತಿನ ಸೆಲೆಬ್ರಿಟಿಗಳು ರಿಲೇಷನ್​ಶಿಪ್ ಬೆಳೆಸುವ ಪರಿಪಾಠ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ವಿರಾಟ್​ ಕೊಯ್ಲಿ-ಅನುಷ್ಕಾ ಶರ್ಮಾ, ಹರ​ಭಜನ್​ ಸಿಂಗ್​-ಗೀತಾ ಬಸ್ರಾ, ಯುವರಾಜ್​ ಸಿಂಗ್​-ಹಸಲ್​​ ಕೀಜ್​ ಸೇರಿದಂತೆ ಅನೇಕ ಜೋಡಿಗಳ ಉದಾಹರಣೆ ಇದೆ. ಈಗ ಅದೇ ಸಾಲಿಗೆ ಖ್ಯಾತ ಟೆನಿಸ್​ ಆಟಗಾರ ಲಿಯಾಂಡರ್​ ಪೇಸ್​ (Leander Paes) ಮತ್ತು ನಟಿ ಕಿಮ್​ ಶರ್ಮಾ (Kim Sharma) ಕೂಡ ಸೇರ್ಪಡೆ ಆಗಲಿದ್ದಾರೆ ಎಂಬ ಅನುಮಾನ ಕಾಡುತ್ತಿದೆ. ಆ ಅನುಮಾನಕ್ಕೆ ಪುಷ್ಟಿ ನೀಡುವಂತಹ ಕೆಲವು ಫೋಟೋಗಳು ಕೂಡ ಈಗ ವೈರಲ್​ ಆಗಿವೆ.

ತೆಲುಗಿನ ಸೂಪರ್​ ಹಿಟ್​ ಸಿನಿಮಾ ‘ಮಗಧೀರ’ದಲ್ಲಿ ನಟಿ ಕಿಮ್​ ಶರ್ಮಾ ವಿಶೇಷ ಪಾತ್ರ ಮಾಡಿದ್ದರು. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದ ಅವರು 2010ರಿಂದ ಈಚೆಗೆ ಕೊಂಚ ಸೈಲೆಂಟ್​ ಆಗಿದ್ದಾರೆ. ಸಿನಿಮಾ ಅಲ್ಲದಿದ್ದರೂ ವೈಯಕ್ತಿಕ ಜೀವನದ ಕಾರಣಕ್ಕಾಗಿ ಅವರು ಆಗಾಗ ಸುದ್ದಿ ಆಗುತ್ತಿರುತ್ತಾರೆ. ಈಗ ಟೆನಿಸ್​ ಆಟಗಾರ ಲಿಯಾಂಡರ್​ ಪೇಸ್​ ಜೊತೆ ಕಾಣಿಸಿಕೊಂಡು ಸೆನ್ಸೇಷನ್​ ಕ್ರಿಯೇಟ್​ ಮಾಡುತ್ತಿದ್ದಾರೆ.

ಲಿಯಾಂಡರ್​ ಪೇಸ್​ ಮತ್ತು ಕಿಮ್​ ಶರ್ಮಾ ಅವರು ಹಾಯಾಗಿ ಗೋವಾದ ಕಡಲ ಕಿನಾರೆಯಲ್ಲಿ ಜೊತೆಯಾಗಿ ಕಾಲ ಕಳೆಯುತ್ತಿದ್ದಾರೆ. ಯಾರಿಗೂ ಕೇರ್​ ಮಾಡದೇ ತುಂಬ ಆಪ್ತವಾಗಿ ಅವರು ಓಡಾಡುತ್ತಿದ್ದಾರೆ. ಇಬ್ಬರೂ ಜೊತೆಯಾಗಿ ಪೋಸ್​ ನೀಡಿರುವ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಇವರಿಬ್ಬರು ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಗುಲ್ಲು ಜೋರಾಗಿ ಹಬ್ಬಿದೆ. ಆದರೆ ಈ ಬಗ್ಗೆ ಈ ಪ್ರಣಯ ಪಕ್ಷಿಗಳು ಅಧಿಕೃತವಾಗಿ ಏನನ್ನೂ ಹೇಳಿಲ್ಲ.

ಲಿಯಾಂಡರ್​ ಪೇಸ್​ ಮತ್ತು ಕಿಮ್​ ಶರ್ಮಾ ಬಗ್ಗೆ ಕಿಮ್​ ಅವರ ಮಾಜಿ ಪ್ರಿಯಕರ ಹರ್ಷವರ್ಧನ್​ ರಾಣೆ ಪ್ರತಿಕ್ರಿಯೆ ನೀಡಿದ್ದಾರೆ. ‘ಇವರಿಬ್ಬರ ಸಂಬಂಧದ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರೇ ಒಪ್ಪಿಕೊಂಡರೆ ಒಳ್ಳೆಯದು. ಅವರು ಡೇಟಿಂಗ್​ ಮಾಡುತ್ತಿರುವ ಸುದ್ದಿ ನಿಜವಾಗಿದ್ದರೆ ಅವರಿಬ್ಬರನ್ನು ಹಾಟೆಸ್ಟ್​ ಕಪಲ್​ ಅಂತ ಕರೆಯಬಹುದು’ ಎಂದು ಹರ್ಷವರ್ಧನ್​ ರಾಣೆ ಹೇಳಿದ್ದಾರೆ.

2019ರವರೆಗೂ ಹರ್ಷವರ್ಧನ್​ ರಾಣೆ ಜೊತೆಗೆ ಕಿಮ್​ ಶರ್ಮಾ ಡೇಟಿಂಗ್​ ಮಾಡುತ್ತಿದ್ದರು. ಆದರೆ ಇಬ್ಬರ ನಡುವೆ ವೈಮನಸ್ಸು ಮೂಡಿದ್ದರಿಂದ ಈ ಜೋಡಿ ಬ್ರೇಕಪ್​ ಮಾಡಿಕೊಂಡಿತು. ಸದ್ಯ ಲಿಯಾಂಡರ್​ ಪೇಸ್​ ಜೊತೆ ಕಿಮ್​ ಓಡಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಅವರು ತಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡಿದರೂ ಅಚ್ಚರಿ ಏನಿಲ್ಲ.

ಇದನ್ನೂ ಓದಿ:

ಡೇಟಿಂಗ್​ ಆ್ಯಪ್​ನಲ್ಲಿ ಖ್ಯಾತ ನಿರ್ದೇಶಕನ ಮಗಳ ಫೇಕ್​ ಖಾತೆ; ತಪ್ಪಾಗಿ ತಿಳಿದ ಅಭಿಮಾನಿಗಳು ಮಾಡಿದ್ದೇನು?

ನಟಿ ತಾಪ್ಸೀ ಪನ್ನು ಡೇಟ್​ ಮಾಡುವ ಹುಡುಗನಿಗೆ ಈ ಗುಣ ಇರಲೇಬೇಕು