ದಳಪತಿ ವಿಜಯ್ (Thalapathy Vijay) ನಟನೆಯ ‘ಲಿಯೋ’ ತಂಡಕ್ಕೆ ಒಂದಾದ ಬಳಿಕ ಒಂದರಂತೆ ಹಿನ್ನಡೆ ಆಗುತ್ತಲೇ ಇದೆ. ಈ ಮೊದಲು ಮುಂಜಾನೆ ನಾಲ್ಕು ಗಂಟೆ ಶೋಗೆ ಅವಕಾಶ ನೀಡಲು ಸರ್ಕಾರ ನಿರಾಕರಿಸಿತ್ತು. ಈ ವಿಚಾರದಲ್ಲಿ ಸಿನಿಮಾ ತಂಡ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯನ್ನು ಕೋರ್ಟ್ ರಿಜೆಕ್ಟ್ ಮಾಡಿತ್ತು. ಈ ಕಾರಣಕ್ಕೆ ತಂಡ ಗೃಹಕಾರ್ಯದರ್ಶಿಯನ್ನು ಭೇಟಿ ಮಾಡಿದೆ. ಆ ಬಳಿಕ ಮರಳಿ ಬರುವಾಗ ಇವರ ಕಾರು ಅಪಘಾತಕ್ಕೆ ಒಳಗಾಗಿದೆ. ‘ಲಿಯೋ (Leo Movie) ತಂಡಕ್ಕೆ ಏನಾಗುತ್ತಿದೆ’ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
‘ಲಿಯೋ’ ಚಿತ್ರದಲ್ಲಿ ದಳಪತಿ ವಿಜಯ್ ಹಾಗೂ ತ್ರಿಷಾ ಮೊದಲಾದವರು ನಟಿಸಿದ್ದಾರೆ. ಲೋಕೇಶ್ ಕನಗರಾಜ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ‘ಲೋಕೇಶ್ ಕನಗರಾಜ್ ಯೂನಿವರ್ಸ್’ ಅಡಿಯಲ್ಲಿ ಸಿನಿಮಾ ಸಿದ್ಧಗೊಂಡಿದೆ ಎನ್ನಲಾಗುತ್ತಿದೆ. ಈ ಕಾರಣದಿಂದಲೇ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಕಾರಣಕ್ಕೆ ತಮಿಳಿನಾಡಿನಾದ್ಯಂತ ಮುಂಜಾನೆ ನಾಲ್ಕು ಗಂಟೆಗೆ ಫ್ಯಾನ್ ಶೋ ಇಡಲು ತಂಡ ನಿರ್ಧರಿಸಿತ್ತು. ಆದರೆ, ಸರ್ಕಾರ ಇದಕ್ಕೆ ಅವಕಾಶ ನೀಡಿಲ್ಲ.
ಕೋರ್ಟ್ ಕೂಡ ಅವಕಾಶ ನೀಡಲು ನಿರಾಕರಿಸಿದ ಬಳಿಕ ‘ಲಿಯೋ’ ಸಿನಿಮಾದ ವಕೀಲರ ತಂಡ ಗೃಹ ಕಾರ್ಯದರ್ಶಿಯನ್ನು ಭೇಟಿ ಮಾಡಿತ್ತು. ಅಲ್ಲಿ ಮಾತುಕತೆ ನಡೆಸಿ ಮರಳಿ ಬರುವಾಗ ಕಾರು ದ್ವಿಚಕ್ರ ವಾಹನಕ್ಕೆ ಗುದ್ದಿದೆ. ಬೈಕ್ ಕಾರಿನ ಅಡಿಯಲ್ಲಿ ಬಿದ್ದಿದೆ. ಈ ಬಗ್ಗೆ ಟ್ರೇಡ್ ಅನಲಿಸ್ಟ್ ಮನೋಬಲ ವಿಜಯಬಾಲನ್ ಅವರು ಟ್ವೀಟ್ ಮಾಡಿದ್ದಾರೆ.
BREAKING: #Leo advocate team car met with an accident.
#LokeshKanagaraj‘s #LeoFilm went to meet Home Secretary to ask for 4am/7am show permission.After returning from a meeting with the Home Secretary, the car rammed… pic.twitter.com/eChtW6Fk8c
— Manobala Vijayabalan (@ManobalaV) October 17, 2023
ಇದನ್ನೂ ಓದಿ: ‘4 ಗಂಟೆ ಶೋಗೆ ಅವಕಾಶ ನೀಡಿ’; ಕೋರ್ಟ್ ಮೆಟ್ಟಿಲೇರಿದ ‘ಲಿಯೋ’ ತಂಡ
‘ಲಿಯೋ’ ಸಿನಿಮಾದ ಆಡಿಯೋ ಲಾಂಚ್ನ ದೊಡ್ಡ ಮಟ್ಟದಲ್ಲಿ ಮಾಡುವ ಪ್ಲಾನ್ನಲ್ಲಿ ತಂಡ ಇತ್ತು. ಆದರೆ, ಇದಕ್ಕೆ ಅವಕಾಶ ಸಿಗಲಿಲ್ಲ. ಆ ಬಳಿಕ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೂ ಇದೇ ರೀತಿ ಆಯಿತು. ಈಗ ಸಿನಿಮಾ ವಿಚಾರದಲ್ಲಿ ಕಿರಿಕ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:05 am, Wed, 18 October 23