ಬೋಲ್ಡ್ ಆಗಿ ಪೋಸ್ ಕೊಟ್ಟ ನಟಿ ರಶ್ಮಿಕಾ ಮಂದಣ್ಣ; ಇದು ಸಿನಿಮಾ ಪ್ರಮೋಷನ್ ಅಲ್ಲ
ದಕ್ಷಿಣ ಭಾರತದ ನಟಿಯರಿಗೆ ಹೋಲಿಸಿದರೆ ಬಾಲಿವುಡ್ ನಟಿಯರು ಹಾಟ್ ಫೋಟೋ ಹಂಚಿಕೊಳ್ಳುವ ವಿಚಾರದಲ್ಲಿ ಮುಂದಿದ್ದಾರೆ. ಇಲ್ಲಿಗಿಂತ ಬಾಲಿವುಡ್ನಲ್ಲೇ ಬೋಲ್ಡ್ ದೃಶ್ಯಗಳನ್ನು ತೋರಿಸುವುದು ಹೆಚ್ಚು. ಈಗ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಹೀಗಾಗಿ ಅಲ್ಲಿಯ ಸಂಸ್ಕೃತಿಯನ್ನು ಅವರು ಪಾಲಿಸುತ್ತಿರುವಂತಿದೆ.
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಈಗ ಬಾಲಿವುಡ್ ನಟಿ ಕೂಡ ಹೌದು. ಅಲ್ಲಿಯೂ ಹಲವು ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಬೋಲ್ಡ್ ಪಾತ್ರಗಳನ್ನು ಮಾಡಲು ಈಗ ಹಿಂದೇಟು ಹಾಕುತ್ತಿಲ್ಲ. ಈಗ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಸಖತ್ ಬೋಲ್ಡ್ ಆಗಿ ಅವರು ಪೋಸ್ ಕೊಟ್ಟಿದ್ದಾರೆ. ಅವರ ಫೋಟೋ ನೋಡಿ ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ. ಈ ಫೋಟೋಗೆ 13 ಗಂಟೆಯಲ್ಲಿ 20 ಲಕ್ಷ ಲೈಕ್ಸ್ ಸಿಕ್ಕಿದೆ. ಕೆಲವರು ಎಂದಿನಂತೆ ಈ ಫೋಟೋ ಬಗ್ಗೆ ಅಪಸ್ವರ ತೆಗೆದಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾದಿಂದ ಬಣ್ಣದ ಬದುಕು ಆರಂಭಿಸಿದರು. ಆ ಬಳಿಕ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ‘ಚಲೋ’ ಸಿನಿಮಾ ಮಾಡಿದ ಬಳಿಕ ರಶ್ಮಿಕಾ ಖ್ಯಾತಿ ತೆಲುಗಿನಲ್ಲಿ ಹೆಚ್ಚಿತು. ವಿಜಯ್ ದೇವರಕೊಂಡ ಜೊತೆ ‘ಗೀತ ಗೋವಿಂದಂ’ ಸಿನಿಮಾ ಮಾಡಿದ ಬಳಿಕವಂತೂ ರಶ್ಮಿಕಾ ಜನಪ್ರಿಯತೆ ದ್ವಿಗುಣವಾಯ್ತು. ತೆಲುಗಿನಲ್ಲಿ ಮಹೇಶ್ ಬಾಬು, ಅಲ್ಲು ಅರ್ಜುನ್, ಅಕ್ಕಿನೇನಿ ನಾಗಾರ್ಜುನ, ನಿತಿನ್, ವಿಜಯ್ ದೇವರಕೊಂಡ, ತಮಿಳಿನಲ್ಲಿ ದಳಪತಿ ವಿಜಯ್, ಹಿಂದಿಯಲ್ಲಿ ಅಮಿತಾಭ್ ಬಚ್ಚನ್, ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ಈಗ ದಿನ ಕಳೆದಂತೆ ರಶ್ಮಿಕಾ ಅವರು ಬೋಲ್ಡ್ ಅವತಾರ ತಾಳುತ್ತಿದ್ದಾರೆ.
ದಕ್ಷಿಣ ಭಾರತದ ನಟಿಯರಿಗೆ ಹೋಲಿಸಿದರೆ ಬಾಲಿವುಡ್ ನಟಿಯರು ಹಾಟ್ ಫೋಟೋ ಹಂಚಿಕೊಳ್ಳುವ ವಿಚಾರದಲ್ಲಿ ಮುಂದಿದ್ದಾರೆ. ಇಲ್ಲಿಗಿಂತ ಬಾಲಿವುಡ್ನಲ್ಲೇ ಬೋಲ್ಡ್ ದೃಶ್ಯಗಳನ್ನು ತೋರಿಸುವುದು ಹೆಚ್ಚು. ಈಗ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಹೀಗಾಗಿ ಅಲ್ಲಿಯ ಸಂಸ್ಕೃತಿಯನ್ನು ಅವರು ಪಾಲಿಸುತ್ತಿರುವಂತಿದೆ.
ರಶ್ಮಿಕಾ ಮಂದಣ್ಣ ಅವರು ಹಂಚಿಕೊಂಡಿರುವ ಹೊಸ ಫೋಟೋ ಸಖತ್ ಬೋಲ್ಡ್ ಆಗಿದೆ. ಅವರು ಒಂದು ಪೀಸ್ ಡ್ರೆಸ್ನಲ್ಲಿ ಮಿಂಚಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಟೀಂನವರು ಗೊತ್ತಿಲ್ಲದೆ ಈ ಫೋಟೋ ಪೋಸ್ಟ್ ಮಾಡಿದ್ದಾರಂತೆ. ‘ಗಯ್ಸ್ ಈ ಫೋಟೋ ಕ್ಲಿಕ್ ಮಾಡಿದ್ದು ಒಂದು ವರ್ಷದ ಹಿಂದೆ. ನಾವು ರಶ್ಮಿಕಾಗೆ ಗೊತ್ತಿಲ್ಲದೆ ಈ ಫೋಟೋ ಪೋಸ್ಟ್ ಮಾಡುತ್ತಿದ್ದೇವೆ. ಎಲ್ಲಾ ನಿಮಗೋಸ್ಕರ’ ಎಂದು ಕ್ಯಾಪ್ಶನ್ ನೀಡಲಾಗಿದೆ. ಸದ್ಯ ಈ ಫೋಟೊ ಗಮನ ಸೆಳೆಯುತ್ತಿದೆ.
ಈ ಫೋಟೋಗೆ ಹಲವು ರೀತಿಯ ಕಮೆಂಟ್ಗಳು ಬಂದಿವೆ. ‘ರಶ್ಮಿಕಾ ಮಂದಣ್ಣ ಅವರೇ ಈ ಫೋಟೋನ ಪೋಸ್ಟ್ ಮಾಡಿರುತ್ತಾರೆ. ಆ ಬಳಿಕ ಫೋಟೋ ಪೋಸ್ಟ್ ಮಾಡಿದ್ದು ನನಗೆ ಗೊತ್ತೇ ಇಲ್ಲ ಎನ್ನುವ ರೀತಿಯಲ್ಲಿ ಪೋಸ್ ಕೊಡುತ್ತಾರೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ರಶ್ಮಿಕಾ ಬೋಲ್ಡ್ನೆಸ್ನ ಹೊಗಳಿದ್ದಾರೆ.
ಇದನ್ನೂ ಓದಿ: ಪ್ರತಿ ಕಿಸ್ಗೆ ಹೆಚ್ಚುವರಿ 20 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರಾ ನಟಿ ರಶ್ಮಿಕಾ ಮಂದಣ್ಣ?
ರಶ್ಮಿಕಾ ಮಂದಣ್ಣ ಅವರು ಸದ್ಯ ‘ಅನಿಮಲ್’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ರಣಬೀರ್ ಕಪೂರ್ ಅವರು ಹೀರೋ. ‘ಅರ್ಜುನ್ ರೆಡ್ಡಿ’ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅವರ ಸಿನಿಮಾಗಳಲ್ಲಿ ಬೋಲ್ಡ್ ದೃಶ್ಯಗಳು ಸಾಕಷ್ಟಿರುತ್ತವೆ. ‘ಅನಿಮಲ್’ ಸಿನಿಮಾದಲ್ಲೂ ಇದು ಮುಂದುವರಿದಿದೆ. ರಶ್ಮಿಕಾ ಹಾಗೂ ರಣಬೀರ್ ಮಧ್ಯೆ ಸಾಕಷ್ಟು ಲಿಪ್ ಲಾಕ್ ದೃಶ್ಯಗಳು ಇವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:07 am, Wed, 18 October 23