Liger: ಡಿಗ್ರಿ ಓದಿ ಟೀ ಮಾರುತ್ತಿರುವ ಯುವತಿಯ ಅಂಗಡಿಯಲ್ಲಿ ಚಹಾ ಸವಿದ ‘ಲೈಗರ್’ ನಟ ವಿಜಯ್ ದೇವರಕೊಂಡ
Graduate Chaiwali | Priyanka Gupta: ‘ಗ್ರಾಜ್ಯುಯೇಟ್ ಚಾಯ್ವಾಲಿ’ ಖ್ಯಾತಿಯ ಪ್ರಿಯಾಂಕಾ ಗುಪ್ತಾ ಅವರ ಜೊತೆ ವಿಜಯ್ ದೇವರಕೊಂಡ ಒಂದಷ್ಟು ಮಾತುಕತೆ ನಡೆಸಿದ್ದಾರೆ. ಈ ವೇಳೆ ಕ್ಲಿಕ್ಕಿಸಿದ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿವೆ.
ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ (Vijay Devarakonda) ಅವರು ಈಗ ಊರೂರು ಸುತ್ತುತ್ತಿದ್ದಾರೆ. ಅವರ ಹೊಸ ಸಿನಿಮಾ ‘ಲೈಗರ್’ (Liger) ಪ್ರಚಾರದ ಸಲುವಾಗಿ ಅನೇಕ ಕಡೆಗಳಿಗೆ ತೆರಳಿ ಜನರನ್ನು ಭೇಟಿ ಮಾಡುತ್ತಿದ್ದಾರೆ. ವಿಜಯ್ ದೇವರಕೊಂಡ ಹೋದಲ್ಲೆಲ್ಲ ಫ್ಯಾನ್ಸ್ ಮುತ್ತಿಗೆ ಹಾಕಿಕೊಳ್ಳುತ್ತಿದ್ದಾರೆ. ಅವರಿಗೆ ರಾಷ್ಟ್ರ ವ್ಯಾಪಿ ಜನಪ್ರಿಯತೆ ಸಿಕ್ಕಿದೆ. ‘ಲೈಗರ್’ ಸಿನಿಮಾದ ಬಿಡುಗಡೆಗೂ ಮುನ್ನವೇ ವಿಜಯ್ ದೇವರಕೊಂಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಇತ್ತೀಚಿಗೆ ಅವರು ಬಿಹಾರದ ಪಾಟ್ನಾ ನಗರಕ್ಕೆ ತೆರಳಿ ಸಿನಿಮಾ ಪ್ರಚಾರ ಮಾಡಿದರು. ಈ ವೇಳೆ ವಿಶೇಷವಾದ ಟೀ ಅಂಗಡಿಗೆ ಭೇಟಿ ನೀಡಿದ್ದಾರೆ. ಹೌದು, ಅರ್ಥಶಾಸ್ತ್ರ ಪದವಿಧರೆ ಪ್ರಿಯಾಂಕಾ ಗುಪ್ತಾ (Priyanka Gupta) ನಡೆಸುತ್ತಿರುವ ಟೀ ಅಂಗಡಿಯಲ್ಲಿ ವಿಜಯ್ ದೇವರಕೊಂಡ ಚಹಾ ಸವಿದಿದ್ದಾರೆ.
ಊರಿನಲ್ಲಿ ಇರುವ ಎಲ್ಲ ಸ್ಟಾರ್ ಹೋಟೆಲ್ಗಳನ್ನು ಬಿಟ್ಟು ಪ್ರಿಯಾಂಕಾ ಗುಪ್ತಾ ಅವರ ಟೀ ಅಂಗಡಿಗೆ ವಿಜಯ್ ದೆವರಕೊಂಡ ಬಂದಿದ್ದರ ಹಿಂದೆ ಒಂದು ಕಾರಣ ಇದೆ. ಪ್ರಿಯಾಂಕಾ ಅವರ ಜರ್ನಿಯೇ ಸ್ಫೂರ್ತಿದಾಯಕವಾಗಿದೆ. ಅರ್ಥಶಾಸ್ತ್ರದಲ್ಲಿ ಪದವಿ ಶಿಕ್ಷಣ ಪಡೆದ ಅವರಿಗೆ ಕೆಲಸ ಸಿಗಲಿಲ್ಲ. ಹಾಗಾಗಿ ಅವರು ‘ಗ್ರಾಜ್ಯುಯೇಟ್ ಚಾಯ್ವಾಲಿ’ ಎಂಬ ಟೀ ಅಂಗಡಿ ಆರಂಭಿಸಿ ಫೇಮಸ್ ಆದರು. ಹಾಗಾಗಿ ಅವರ ಬಳಿ ತೆರಳಿ ವಿಜಯ್ ದೇವರಕೊಂಡ ಟೀ ಕುಡಿದಿದ್ದಾರೆ.
ಪ್ರಿಯಾಂಕಾ ಗುಪ್ತಾ ಅವರ ಜೊತೆ ವಿಜಯ್ ದೇವರಕೊಂಡ ಒಂದಷ್ಟು ಮಾತುಕತೆ ನಡೆಸಿದ್ದಾರೆ. ಈ ವೇಳೆ ಕ್ಲಿಕ್ಕಿಸಿದ ಫೋಟೋ ಮತ್ತು ವಿಡಿಯೋಗಳನ್ನು ಪ್ರಿಯಾಂಕಾ ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅವು ಸಖತ್ ವೈರಲ್ ಆಗಿವೆ. ವಿಜಯ್ ದೇವರಕೊಂಡ ಹೋದಲೆಲ್ಲ ಭಾರಿ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಆ ಮೂಲಕ ‘ಲೈಗರ್’ ಸಿನಿಮಾ ಬಗ್ಗೆ ಜನರಿಗೆ ಎಷ್ಟು ಕ್ರೇಜ್ ಇದೆ ಎಂಬುದು ತಿಳಿಯುತ್ತಿದೆ.
View this post on Instagram
‘ಲೈಗರ್’ ಚಿತ್ರಕ್ಕೆ ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದಾರೆ. ಅನನ್ಯಾ ಪಾಂಡೆ ನಾಯಕಿಯಾಗಿ ನಟಿಸಿದ್ದಾರೆ. ತೆಲುಗು, ಹಿಂದಿ, ಕನ್ನಡ, ಮಲಯಾಳಂ, ತಮಿಳು ಮುಂತಾದ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಆಗಸ್ಟ್ 25ರಂದು ಅದ್ದೂರಿಯಾಗಿ ತೆರೆಕಾಣಲಿರುವ ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ. ಈಗಾಗಲೇ ಹಾಡು ಮತ್ತು ಟ್ರೇಲರ್ನಿಂದ ‘ಲೈಗರ್’ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:14 am, Mon, 8 August 22