ಕಮಲ್-ರಜನಿ ಚಿತ್ರದಿಂದ ಲೋಕೇಶ್ ಹೊರ ಹೋಗಿದ್ದೇಕೆ?
ಲೋಕೇಶ್ ಕನಕರಾಜ್ ರಜನಿಕಾಂತ್ ಹಾಗೂ ಕಮಲ್ ಹಾಸನ್ ಚಿತ್ರದಿಂದ ಹೊರನಡೆದ ಕಾರಣ ಬಹಿರಂಗವಾಗಿದೆ. ಕಮಲ್ ನಿರ್ಮಾಣದ ಈ ಚಿತ್ರವನ್ನು ನಿರ್ದೇಶಿಸಲು ಲೋಕೇಶ್ ಒಪ್ಪಿಕೊಂಡಿದ್ದರು. ಆದರೆ, ಲೋಕೇಶ್ ಆಕ್ಷನ್ ಚಿತ್ರ ಮಾಡಲು ಬಯಸಿದರೆ, ರಜನಿ-ಕಮಲ್ ಜೋಡಿ ಹಾಸ್ಯ ಅಥವಾ ಮನರಂಜನಾತ್ಮಕ ಚಿತ್ರಕ್ಕೆ ಒಲವು ತೋರಿದರು.

ಕಮಲ್ ಹಾಸನ್ ಹಾಗೂ ರಜನಿಕಾಂತ್ ಚಿತ್ರಕ್ಕೆ ಲೋಕೇಶ್ ಕನಗರಾಜ್ (Lokesh Kanagaraj) ನಿರ್ದೇಶನ ಮಾಡಬೇಕಿತ್ತು. ಆದರೆ, ಅವರು ಹೊರ ನಡೆದರು. ನಂತರ ಸುಂದರ್ ಸಿ ಬಂದರು. ಆದರೆ ಇಬ್ಬರೂ ಚಿತ್ರದಿಂದ ಹೊರಗುಳಿದರು. ಲೋಕೇಶ್ ಏಕೆ ಇಷ್ಟು ದೊಡ್ಡ ಅವಕಾಶವನ್ನು ಬಿಟ್ಟುಕೊಟ್ಟರು? ಇತ್ತೀಚೆಗೆ ಲೋಕೇಶ್ ಕನಕರಾಜ್ ಈ ಬಗ್ಗೆ ಮಾತನಾಡಿದ್ದಾರೆ.
ರಜನಿಕಾಂತ್ ಅವರ 173 ನೇ ಚಿತ್ರವಾಗಲಿರುವ ಈ ಕ್ರೇಜಿ ಪ್ರಾಜೆಕ್ಟ್ ಅನ್ನು ಕಮಲ್ ಹಾಸನ್ ತಮ್ಮದೇ ನಿರ್ಮಾಣ ಸಂಸ್ಥೆ ರಾಜ್‌ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ಆರಂಭದಲ್ಲಿ ಲೋಕೇಶ್ ಕನಕರಾಜ್ ಅವರಿಗೆ ಈ ಚಿತ್ರವನ್ನು ನಿರ್ದೇಶಿಸುವ ಅವಕಾಶ ನೀಡಲಾಯಿತು. ಲೋಕೇಶ್ ಈ ಕಥೆಯ ಮೇಲೆ ಸುಮಾರು ಒಂದೂವರೆ ತಿಂಗಳು ಶ್ರಮಿಸಿದರು. ಇಬ್ಬರು ದಂತಕಥೆಗಳ ಇಮೇಜ್‌ಗೆ ಸೂಕ್ತವಾದ ಶಕ್ತಿಶಾಲಿ ಸ್ಕ್ರಿಪ್ಟ್ ಅನ್ನು ಸಿದ್ಧಪಡಿಸಿ ಅವರಿಗೆ ಹೇಳಿದರು. ಕಥೆಯನ್ನು ಕೇಳಿದ ನಂತರ, ರಜನಿ ಮತ್ತು ಕಮಲ್ ಇಬ್ಬರೂ ತುಂಬಾ ಉತ್ಸುಕರಾಗಿದ್ದರು.
ಲೋಕೇಶ್ ಕನಕರಾಜ್ ಹೈ-ವೋಲ್ಟೇಜ್ ಆಕ್ಷನ್ ಚಿತ್ರಗಳನ್ನು ನಿರ್ದೇಶನ ಮಾಡುವ ನಿರ್ದೇಶಕ. ರಜನಿಕಾಂತ್ ಮತ್ತು ಕಮಲ್ ಹಾಸನ್ ಇಬ್ಬರೂ ಸತತವಾಗಿ ಆಕ್ಷನ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ರಜನಿಕಾಂತ್ ‘ಜೈಲರ್ 2’ ರವರೆಗೆ ಆಕ್ಷನ್ ಚಿತ್ರಗಳಲ್ಲಿ ನಿರತರಾಗಿದ್ದರೆ. ‘ನಾವು ಮತ್ತೆ ಆಕ್ಷನ್ ಚಿತ್ರ ಮಾಡಬೇಕೇ? ಈ ಬಾರಿ ಹಾಸ್ಯದ ಚಿತ್ರ ಮಾಡೋಣ’ ಎಂದು ಅವರಿಬ್ಬರೂ ಕೇಳಿದ್ದರು. ಆದರೆ ಲೋಕೇಶ್ ಅವರ ಶೈಲಿ ಆಕ್ಷನ್ ಚಿತ್ರಗಳಾಗಿರುವುದರಿಂದ, ಈ ರೀತಿಯ ಚಿತ್ರಗಳನ್ನು ಮಾಡುವುದಿಲ್ಲ ಎಂದರು. ಹೀಗಾಗಿ, ಅವರು ಸಿನಿಮಾದಿಂದ ಹೊರನಡೆದರು ಎಂದು ಅವರು ರಿವೀಲ್ ಮಾಡಿದ್ದಾರೆ.
ಇದನ್ನೂ ಓದಿ: ನಿರ್ದೇಶಕ ಲೋಕೇಶ್ ಕನಗರಾಜ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ರಚಿತಾ ರಾಮ್?
ಲೋಕೇಶ್ ಕನಕರಾಜ್ ಆಕ್ಷನ್ ಬಯಸಿದರೆ, ರಜನಿ-ಕಮಲ್ ಮನರಂಜನೆಯನ್ನು ಆರಿಸಿಕೊಂಡಿದ್ದಾರೆ. ಈ ಕಾರಣದಿಂದ ಸಿನಿಮಾ ಮಾಡುವ ಅವಕಾಶ ಲೋಕೇಶ್ಗೆ ಕೈ ತಪ್ಪಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



