AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೇಮಿಗಳ ದಿನಾಚರಣೆ: ಪಾರು-ದೇವದಾಸ್ ಬದಲಿಗೆ ಚಂದ್ರ-ದೇವದಾಸ್ ಪ್ರೇಮಕತೆ

Lokesh Kanagaraj: ಪ್ರತಿ ಬಾರಿಯೂ ಪಾರು-ದೇವದಾಸ್ ಕತೆಯನ್ನು ಬೇರೆ ಬೇರೆ ರೀತಿಯಲ್ಲಿ ಹೇಳಲಾಗಿದೆ. ಆದರೆ ಇದೇ ಮೊದಲ ಬಾರಿಗೆ ದೇವದಾಸ್ ಮತ್ತು ಚಂದ್ರ ಪ್ರೇಮಕತೆ ತೆರೆ ಮೇಲೆ ಬರಲು ಸಜ್ಜಾಗಿದೆ. ದೇವದಾಸ್-ಪಾರು ಪ್ರೇಮಕತೆಯಲ್ಲಿ ಬರುವ ವೇಶ್ಯೆಯ ಹೆಸರು ಚಂದ್ರ. ದೇವದಾಸ್-ಪಾರು ಕತೆಯಲ್ಲಿ ಚಂದ್ರ ಒಂದು ರೀತಿ ಪೋಷಕ ಪಾತ್ರವಷ್ಟೆ ಆದರೆ ಈಗ ನಿರ್ದೇಶಕರೊಬ್ಬರು ಚಂದ್ರ ಅನ್ನೇ ನಾಯಕಿಯನ್ನಾಗಿಸಿ ದೇವದಾಸ್ ಮತ್ತು ಚಂದ್ರ ಪ್ರೇಮಕತೆಯನ್ನು ಸಿನಿಮಾ ಮಾಡಲು ಮುಂದಾಗಿದ್ದಾರೆ. ಸಿನಿಮಾದ ಹೆಸರು ‘ಡಿಸಿ’ (ದೇವದಾಸ್-ಚಂದ್ರ).

ಪ್ರೇಮಿಗಳ ದಿನಾಚರಣೆ: ಪಾರು-ದೇವದಾಸ್ ಬದಲಿಗೆ ಚಂದ್ರ-ದೇವದಾಸ್ ಪ್ರೇಮಕತೆ
Dc Tamil Movie
ಮಂಜುನಾಥ ಸಿ.
|

Updated on:Feb 14, 2026 | 7:23 PM

Share

ಭಾರತದ ಜನಪ್ರಿಯ ಪ್ರೇಮಕತೆಗಳೆಂದರೆ ಪಾರು-ದೇವದಾಸ್ ಕತೆ ನೆನಪಿಗೆ ಬರುತ್ತದೆ. ಹಲವಾರು ಭಾಷೆಗಳಲ್ಲಿ ಪಾರು-ದೇವದಾಸ್ ಕತೆ ಸಿನಿಮಾ ಸಹ ಆಗಿದೆ. ಪ್ರತಿ ಬಾರಿಯೂ ಪಾರು-ದೇವದಾಸ್ ಕತೆಯನ್ನು ಬೇರೆ ಬೇರೆ ರೀತಿಯಲ್ಲಿ ಹೇಳಲಾಗಿದೆ. ಆದರೆ ಇದೇ ಮೊದಲ ಬಾರಿಗೆ ದೇವದಾಸ್ ಮತ್ತು ಚಂದ್ರ ಪ್ರೇಮಕತೆ ತೆರೆ ಮೇಲೆ ಬರಲು ಸಜ್ಜಾಗಿದೆ. ದೇವದಾಸ್-ಪಾರು ಪ್ರೇಮಕತೆಯಲ್ಲಿ ಬರುವ ವೇಶ್ಯೆಯ ಹೆಸರು ಚಂದ್ರ. ದೇವದಾಸ್-ಪಾರು ಕತೆಯಲ್ಲಿ ಚಂದ್ರ ಒಂದು ರೀತಿ ಪೋಷಕ ಪಾತ್ರವಷ್ಟೆ ಆದರೆ ಈಗ ನಿರ್ದೇಶಕರೊಬ್ಬರು ಚಂದ್ರ ಅನ್ನೇ ನಾಯಕಿಯನ್ನಾಗಿಸಿ ದೇವದಾಸ್ ಮತ್ತು ಚಂದ್ರ ಪ್ರೇಮಕತೆಯನ್ನು ಸಿನಿಮಾ ಮಾಡಲು ಮುಂದಾಗಿದ್ದಾರೆ. ಸಿನಿಮಾದ ಹೆಸರು ‘ಡಿಸಿ’ (ದೇವದಾಸ್-ಚಂದ್ರ).

‘ಕೈದಿ’, ‘ಲಿಯೊ’, ‘ವಿಕ್ರಂ’, ‘ಕೂಲಿ’ ಸಿನಿಮಾಗಳ ನಿರ್ದೇಶಕ ಲೋಕೇಶ್ ಕನಕರಾಜ್ ಇದೀಗ ನಾಯಕನಾಗಿ ಎಂಟ್ರಿ ಕೊಟ್ಟಿದ್ದು, ‘ಡಿಸಿ’ ಸಿನಿಮಾ ಮೂಲಕ ಅವರು ನಾಯಕನಾಗಿದ್ದಾರೆ. ಇದು ಆಧುನಿಕ ದೇವದಾಸ್ ಮತ್ತು ಚಂದ್ರ ಅವರುಗಳ ಕತೆಯಾಗಿದ್ದು, ‘ಡಿಸಿ’ ಸಿನಿಮಾದ ಟೀಸರ್ ಇಂದು (ಫೆಬ್ರವರಿ 14) ಬಿಡುಗಡೆ ಆಗಿದೆ. ಈಗ ಬಿಡುಗಡೆ ಆಗಿರುವ ಟೀಸರ್​​ನಲ್ಲಿ ಭರ್ಜರಿ ರಕ್ತದೋಕುಳಿಯೇ ಹರಿದಿದ್ದು, ಇದೇ ಕಾರಣಕ್ಕೆ ‘ಬ್ಲಡಿ ಲವ್ ಸ್ಟೋರಿ’ (ರಕ್ತ-ಸಿಕ್ತ ಪ್ರೇಮಕತೆ) ಎಂದು ‘ಡಿಸಿ’ ಸಿನಿಮಾವನ್ನು ಕರೆದಿದ್ದಾರೆ ನಿರ್ದೇಶಕ.

ಲೋಕೇಶ್ ಕನಕರಾಜ್ ಅವರು ‘ದೇವದಾಸ್’ ಪಾತ್ರದಲ್ಲಿ ಕಾಣಿಸಿಕೊಂಡರೆ, ಅವರಿಗೆ ಜೋಡಿಯಾಗಿ ಬಾಲಿವುಡ್ ನಟಿ ವಾಮಿಕಾ ಗಬ್ಬಿ ‘ಚಂದ್ರ’ ಎಂಬ ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದಾರೆ. ನಟಿ ಸಂಜನಾ ಕೃಷ್ಣಮೂರ್ತಿ ‘ಪಾರ್ವತಿ’ ಎಂಬ ಪ್ರಮುಖ ಪಾತ್ರದಲ್ಲಿದ್ದಾರೆ. ಈಗ ಬಿಡುಗಡೆ ಆಗಿರುವ ಟೀಸರ್ ಗಮನಿಸಿದರೆ ಪ್ರೇಮಭಂಗ ಅನುಭವಿಸಿದ ವ್ಯಕ್ತಿಯ ಮೇಲೆ ವೇಶ್ಯೆಗೆ ಪ್ರೀತಿ ಆಗುವ ಬಳಿಕ ನಾಯಕ ವೇಶ್ಯೆ ಹಾಗೂ ಮೊದಲ ಪ್ರೀತಿಯ ನಡುವೆ ಯಾವುದನ್ನು ಆರಿಸಿಕೊಳ್ಳುತ್ತಾನೆ ಎಂಬ ತಿಕ್ಕಾಟಗಳನ್ನು ಹೊಂದಿರುವ ಕತೆ ಇದೆಂಬುದರ ಸುಳಿವು ಸಿಗುತ್ತದೆ.

ಇದನ್ನೂ ಓದಿ:ಈ ವಾರವೂ ಒಟಿಟಿಗೆ ಬಂದಿವೆ ಹಿಟ್ ಸಿನಿಮಾಗಳು: ಪಟ್ಟಿ ಇಲ್ಲಿದೆ

ಧನುಶ್ ಮತ್ತು ಶಿವರಾಜ್ ಕುಮಾರ್ ನಟಿಸಿದ್ದ ‘ಕ್ಯಾಪ್ಟನ್ ಮಿಲ್ಲರ್’ ಮತ್ತು ‘ರಾಕಿ’ ಸಿನಿಮಾಗಳನ್ನು ನಿರ್ದೇಶಿಸಿದ್ದ ಅರುಣ್ ಮಟ್ಟೇಶ್ವರನ್ ಈ ‘ಡಿಸಿ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಲೋಕೇಶ್ ಅವರ ಆಪ್ತ ಗೆಳೆಯ ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಇಂದು ಬಿಡುಗಡೆಯಾದ ಪ್ರೋಮೋ ದೇವದಾಸನ ಹಳೆಯ ಕಥೆಯನ್ನು ಆಧುನಿಕ ಗ್ಯಾಂಗ್‌ಸ್ಟರ್ ಹಿನ್ನೆಲೆಯಲ್ಲಿ ತೋರಿಸುವಂತಿದೆ. ರಕ್ತಸಿಕ್ತ ಕೈಯಲ್ಲಿ ಚಾಕು ಹಿಡಿದು ಲೋಕೇಶ್ ಅವರು ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ. ಪ್ರೀತಿ ಮತ್ತು ಹಿಂಸೆಯ ಸಮ್ಮಿಶ್ರಣವಾಗಿರುವ ಈ ಚಿತ್ರವು ‘ಬ್ಲಡಿ ವ್ಯಾಲೆಂಟೈನ್’ ಎಂಬ ಥೀಮ್ ಹೊಂದಿದೆ.

ಸನ್ ಪಿಕ್ಚರ್ಸ್ ನಿರ್ಮಾಣದ ಈ ಸಿನಿಮಾ 2026ರ ಬೇಸಿಗೆಯಲ್ಲಿ ತೆರೆಗೆ ಬರಲು ಸಜ್ಜಾಗಿದೆ. ನಿರ್ದೇಶಕನಾಗಿ ಯಶಸ್ಸು ಕಂಡಿರುವ ಲೋಕೇಶ್, ಈಗ ನಟನಾಗಿ ಎಷ್ಟು ಪ್ರಭಾವ ಬೀರಲಿದ್ದಾರೆ ಎಂದು ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:19 pm, Sat, 14 February 26

Follow Us
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ