
‘ಮಹಾಭಾರತ’ ಧಾರಾವಾಹಿಯಲ್ಲಿ ಭೀಮನ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ನಟ ಸೌರವ್ ಗುರ್ಜರ್ ಅನ್ನು ಪೊಲೀಸರು ಬಂಧಿಸಿದ್ದಾರೆ. ವೃತ್ತಿಪರ ಕುಸ್ತಿಪಟು ಸಹ ಆಗಿರುವ ಸೌರವ್ ವಿರುದ್ಧ ಮಹಿಳೆಯೊಬ್ಬರು ವಂಚನೆ ಪ್ರಕರಣ ದಾಖಲಿಸಿದ್ದರು. ಹೈದರಾಬಾದ್ ನಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಇದೀಗ ಸೌರವ್ ಗುರ್ಜರ್ ಅನ್ನು ಬಂಧಿಸಿದ್ದಾರೆ. ಮಹಿಳೆಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ಅವರಿಗೆ ವಂಚನೆ ಮಾಡಿರುವ ಆರೋಪ ಸೌರವ್ ಅವರ ಮೇಲಿದೆ.
ಮಹಾಭಾರತದಲ್ಲಿ ‘ಭೀಮ’ ಮತ್ತು ರಣ್ಬೀರ್ ಕಪೂರ್ ನಟಿಸಿರುವ ‘ಬ್ರಹ್ಮಾಸ್ತ್ರ’ ಸಿನಿಮಾನಲ್ಲಿ ‘ಜೋರ್’ ಪಾತ್ರಗಳ ಮೂಲಕ ಹೆಚ್ಚು ಜನಪ್ರಿಯರಾಗಿರುವ ಸೌರವ್ ಗುರ್ಜರ್, ಇದೀಗ ಹೈದರಾಬಾದ್ ಪೊಲೀಸರ ಅತಿಥಿ ಆಗಿದ್ದಾರೆ. ದೂರು ನೀಡಿರುವ ಮಹಿಳೆ ತಮ್ಮ ಹಾಗೂ ಸೌರವ್ ಸಂಬಂಧವು ಹಲವು ವರ್ಷಗಳ ಹಿಂದೆ ಪ್ರಾರಂಭವಾಯಿತು ಮತ್ತು ಮದುವೆಯಾಗುವುದಾಗಿ ಗುರ್ಜರ್ ತಮಗೆ ಭರವಸೆ ನೀಡಿದ್ದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಮಹಿಳೆ ನೀಡಿರುವ ದೂರಿನ ಅನ್ವಯ ಮಹಿಳೆಗೆ ಮದುವೆಯ ಭರವಸೆ ನೀಡಿ ಸೌರವ್ ಲೈಂಗಿಕ ಚಟುವಟಿಕೆಗೆ ಮಹಿಳೆಯನ್ನು ಬಳಸಿಕೊಂಡಿದ್ದಾನೆ ಎನ್ನಲಾಗಿದೆ.
ಗಚಿಬೌಲಿ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರಕಾರ, 2021ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ತನಗೆ ಸೌರವ್ ಗುರ್ಜರ್ ಪರಿಚಯವಾಗಿದ್ದರು ಎಂದು ಮಹಿಳೆ ತಿಳಿಸಿದ್ದಾರೆ. ವಾಟ್ಸಾಪ್ ಮೂಲಕ ಇಬ್ಬರೂ ಪರಸ್ಪರ ಹತ್ತಿರವಾದರು ಮತ್ತು ಡಿಸೆಂಬರ್ 25, 2021 ರಂದು ಮೊದಲ ಬಾರಿಗೆ ನೇರವಾಗಿ ಭೇಟಿಯಾದರಂತೆ. ಮಹಿಳೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು ಮತ್ತು ಹೆಂಡತಿಗೆ ಸಮಾನವಾದ ಹಕ್ಕುಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.
ಇದನ್ನೂ ಓದಿThandav Ram Profile: ಧಾರಾವಾಹಿ, ಸಿನಿಮಾ, ವಿವಾದ ಈಗ ಬಿಗ್ಬಾಸ್: ತಾಂಡವ್ ರಾಮ್ ಹಿನ್ನೆಲೆಯೇನು?
ಸೌರವ್ ಅನ್ನು ನಂಬಿ ತಾನು ಅಮೆರಿಕದಿಂದ ಭಾರತಕ್ಕೆ ವಾಪಸ್ಸಾಗಿದ್ದಾಗಿ ಮಹಿಳೆ ಹೇಳಿದ್ದು, ಇಬ್ಬರೂ ಸೇರಿ ಒಟ್ಟಿಗೆ ವ್ಯಾಪಾರವೊಂದನ್ನು ಪ್ರಾರಂಭಿಸುವುದಾಗಿಯೂ ಸೌರವ್ ಭರವಸೆ ನೀಡಿ ಅಮೆರಿಕದಲ್ಲಿದ್ದ ತಮ್ಮ ಉದ್ಯೋಗವನ್ನು ಬಿಡುವಂತೆ ಸೌರವ್ ಒಪ್ಪಿಸಿದ್ದ, ಆದರೆ ಆ ಬಳಿಕ ಮದುವೆಯ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಯ್ತು, ನಾನು ಮದುವೆಗೆ ಒತ್ತಾಯಿಸಿದಾಗೆಲ್ಲ ನನ್ನನ್ನು ಬ್ಲಾಕ್ ಮಾಡುತ್ತಿದ್ದ, ಸಾಕಷ್ಟು ಮಾನಸಿಕ ಮತ್ತು ದೈಹಿಕ ಕಿರುಕುಳವನ್ನು ನನಗೆ ಸೌರವ್ ನೀಡಿದ್ದಾನೆ ಎಂದು ಮಹಿಳೆ ದೂರು ದಾಖಲಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ