‘ಮಹಾರಾಜ’ ಹಿಟ್ ಆದ ಬೆನ್ನಲ್ಲೆ, ‘ಮಹಾರಾಣಿ’ ಸಿನಿಮಾ ಮಾಡಲು ಮುಂದಾದ ನಿರ್ದೇಶಕ

Maharaja: ಬ್ಲಾಕ್ ಬಸ್ಟರ್ ಸಿನಿಮಾ ‘ಮಹಾರಾಜ’ ನಿರ್ದೇಶಕ ನಿಥಿಲನ್ ಸ್ವಾಮಿನಾಥನ್ ಇದೀಗ ಹೊಸ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದಾರೆ. ಸಿನಿಮಾಕ್ಕೆ ‘ಮಹಾರಾಣಿ’ ಎಂದು ಹೆಸರಿಡಲಾಗಿದ್ದು, ನಯನತಾರಾ ನಾಯಕಿಯಂತೆ.

‘ಮಹಾರಾಜ’ ಹಿಟ್ ಆದ ಬೆನ್ನಲ್ಲೆ, ‘ಮಹಾರಾಣಿ’ ಸಿನಿಮಾ ಮಾಡಲು ಮುಂದಾದ ನಿರ್ದೇಶಕ
Follow us
ಮಂಜುನಾಥ ಸಿ.
|

Updated on: Sep 14, 2024 | 11:12 PM

ಈ ವರ್ಷದ ಅತ್ಯುತ್ತಮ ತಮಿಳು ಸಿನಿಮಾ ಯಾವುದೆಂದರೆ ಸುಲಭವಾಗಿ ‘ಮಹಾರಾಜ’ ಎನ್ನಬಹುದು. ಅತ್ಯಂತ ಕಡಿಮೆ ಬಜೆಟ್​ನಲ್ಲಿ, ಸರಳವಾದ ಕತೆಯನ್ನೇ ಅದ್ಭುತವಾಗಿ ತೆರೆಗೆ ತಂದಿದ್ದಾರೆ ನಿರ್ದೇಶಕ ನಿತಿಲನ್ ಸ್ವಾಮಿನಾಥನ್. ವಿಜಯ್ ಸೇತುಪತಿ ನಾಯಕನಾಗಿ ನಟಿಸಿರುವ ಈ ಸಿನಿಮಾ ಬಹಳ ಸರಳವಾಗಿದ್ದರೂ ಸಹ ನಿರೂಪಣೆ, ಕತೆಯಲ್ಲಿ ಬರುವ ಅದ್ಭುತ ಟ್ವಿಸ್ಟ್ ಹಾಗೂ ಪ್ರಧಾನ ನಟರ ನಟನೆಯಿಂದಾಗಿ ಬಹಳ ಗಮನ ಸೆಳೆದಿತ್ತು. ಈ ಸಿನಿಮಾ ಚಿತ್ರಮಂದಿರದಲ್ಲಿ ಹಿಟ್ ಆಗುವ ಜೊತೆಗೆ ದೇಶದಾದ್ಯಂತ ಸಿನಿಮಾ ಪ್ರೇಮಿಗಳಿಂದ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಸಿನಿಮಾ ಹಿಟ್ ಆದ ಬೆನ್ನಲ್ಲೆ ನಿರ್ದೇಶಕ ಈಗ ‘ಮಹಾರಾಣಿ’ ಸಿನಿಮಾ ಪ್ರಾರಂಭ ಮಾಡಿದ್ದಾರೆ.

‘ಮಹಾರಾಜ’ ಸಿನಿಮಾ ನಿರ್ದೇಶಕ ನಿತಿಲನ್ ಸ್ವಾಮಿನಾಥನ್, ಇದೀಗ ‘ಮಹಾರಾಣಿ’ ಸಿನಿಮಾ ಮಾಡಲು ಮುಂದಾಗಿದ್ದಾರೆ. ಸಿನಿಮಾದಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರಾ ನಾಯಕಿ ಎನ್ನಲಾಗುತ್ತಿದೆ. ನಯನತಾರಾ, ಕಮರ್ಶಿಯಲ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿರುವ ಜೊತೆಗೆ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ವರ್ಷಗಳಿಂದಲೂ ನಟಿಸಿಕೊಂಡು ಬರುತ್ತಿದ್ದಾರೆ. ಇದೀಗ ಮಹಿಳಾ ಪ್ರಧಾನ ಸಿನಿಮಾ ಆಗಿರುವ ‘ಮಹಾರಾಣಿ’ ಸಿನಿಮಾ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ:ಘೋಷಣೆಯಾಯ್ತು ಭಾರತದ ಅತ್ಯುತ್ತಮ ಹಾರರ್ ಸಿನಿಮಾದ ಎರಡನೇ ಭಾಗ

ನಯನತಾರಾ ಅವರೊಟ್ಟಿಗೆ ಕೆಲ ಸುತ್ತಿನ ಮಾತುಕತೆ ಮಾಡಿದ್ದು, ಅವರಿಗೆ ಕತೆ ಬಹಳ ಇಷ್ಟವಾಗಿದೆಯಂತೆ. ‘ಮಹಾರಾಣಿ’ ಸಿನಿಮಾನಲ್ಲಿ ನಾಯಕ ಪಾತ್ರ ಇರುವುದಿಲ್ಲ ಎನ್ನಲಾಗುತ್ತಿದೆ. ಸಿನಿಮಾವನ್ನು ಫ್ಯಾಷನ್ ಸ್ಟುಡಿಯೋಸ್ ಬ್ಯಾನರ್​ನ ಸುದಾನ್ ನಿರ್ಮಾಣ ಮಾಡಲಿದ್ದಾರೆ. ಕಳೆದ ಸಿನಿಮಾ ಹಿಟ್ ಆಗಿರುವ ಕಾರಣ ಈ ಸಿನಿಮಾಕ್ಕೆ ತುಸು ಹೆಚ್ಚಿನ ಬಜೆಟ್ ಮೀಸಲಿಡಲಾಗಿದೆ. ಒಳ್ಳೆಯ ತಂತ್ರಜ್ಞರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ನಿತಿಲನ್ ಸ್ವಾಮಿನಾಥನ್ ಅವರ ‘ಮಹಾರಾಜ’ ಸಿನಿಮಾ ದೊಡ್ಡ ಹಿಟ್ ಎನಿಸಿಕೊಂಡಿತು. ಎಲ್ಲ ವರ್ಗದ ಪ್ರೇಕ್ಷಕರಿಗೂ ಸಹ ಸಿನಿಮಾ ಇಷ್ಟವಾಯ್ತು. ಮಾತ್ರವಲ್ಲದೆ ಒಟಿಟಿಗೆ ಬಂದ ಮೇಲಂತೂ ದೇಶದಾದ್ಯಂತ ಸಿನಿಮಾ ಪ್ರೇಮಿಗಳು ಸಿನಿಮಾ ನೋಡಿ ಮೆಚ್ಚಿಕೊಂಡರು. ಬಾಕ್ಸ್ ಆಫೀಸ್​ನಲ್ಲಿ 100 ಕೋಟಿ ಹಣ ಗಳಿಸಿದ ಸಿನಿಮಾ, ಒಟಿಟಿಯಲ್ಲಿ ಅತಿ ಹೆಚ್ಚು ಸ್ಟ್ರೀಮ್ ಆದ ಸಿನಿಮಾ ಎಂದೆನಿಸಿಕೊಂಡಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ