Dookudu: ‘ದೂಕುಡು’ ಚಿತ್ರಕ್ಕೆ 10 ವರ್ಷದ ಸಂಭ್ರಮ; ಫ್ಯಾನ್ಸ್ಗೆ ವಿಶೇಷ ಗಿಫ್ಟ್ ನೀಡಿದ ಚಿತ್ರತಂಡ
Mahesh Babu and Samantha: ತೆಲುಗಿನ ಸೂಪರ್ ಹಿಟ್ ಚಿತ್ರ ‘ದೂಕುಡು’ಗೆ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಚಿತ್ರತಂಡ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ.
ಟಾಲಿವುಡ್ನ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾದ ‘ದೂಕುಡು’ ಚಿತ್ರ ಬಿಡುಗಡೆಯಾಗಿ ಇಂದಿಗೆ ಸರಿಯಾಗಿ 10 ವರ್ಷಗಳು ತುಂಬಿವೆ. ಮಹೇಶ್ ಬಾಬು- ಸಮಂತಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ಈ ಚಿತ್ರ, ಎಲ್ಲೆಡೆ ಜನಪ್ರಿಯವಾಗಿತ್ತು. ಅಲ್ಲದೇ, ಕನ್ನಡದಲ್ಲೂ ಇದು ರಿಮೇಕ್ ಆಗಿದ್ದು, ಪುನೀತ್ ರಾಜ್ಕುಮಾರ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸೆಪ್ಟೆಂಬರ್ 11, 20011ರಂದು ‘ದೂಕುಡು’ ಚಿತ್ರ ಬಿಡುಗಡೆಯಾಗಿತ್ತು. ಇದು ಸಮಂತಾ ಸೇರಿದಂತೆ ಅನೇಕ ಕಲಾವಿದರು, ತಂತ್ರಜ್ಞರಿಗೆ ವೃತ್ತಿ ಬದುಕಿನಲ್ಲಿ ಬಹುದೊಡ್ಡ ತಿರುವನ್ನು ನೀಡಿತ್ತು. ಆದ್ದರಿಂದಲೇ ನಿರ್ಮಾಪಕರು ಮತ್ತು ವಿತರಕರು ಈ ಸಂಭ್ರಮವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದ್ದಾರೆ. ನಟ ಮಹೇಶ್ ಬಾಬು ‘ದೂಕುಡು’ವಿನಲ್ಲಿ ಪೋಲಿಸ್ ಪಾತ್ರದಲ್ಲಿ ಮಿಂಚಿದ್ದರು. ಅವರ ತಂದೆಯ ಪಾತ್ರದಲ್ಲಿ ಪ್ರಕಾಶ್ ರಾಜ್ ಕಾಣಿಸಿಕೊಂಡಿದ್ದರು. ಬಿಡುಗಡೆಯಾದ ಹತ್ತು ವರ್ಷಗಳ ಸವಿನೆನಪಿಗೆ ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ ಇಂದು ಚಿತ್ರಮಂದಿರಗಳಲ್ಲಿ ಈ ಚಿತ್ರದ ವಿಶೇಷ ಪ್ರದರ್ಶನಗಳನ್ನು ಚಿತ್ರತಂಡ ಆಯೋಜಿಸಿದೆ. ಈ ಮೂಲಕ ಅಭಿಮಾನಿಗಳಿಗೆ ಹತ್ತು ವರ್ಷಗಳ ನಂತರ ಮತ್ತೆ ತಮ್ಮ ನೆಚ್ಚಿನ ನಾಯಕ ನಟನನ್ನು ಹಾಗೂ ಚಿತ್ರವನ್ನು ದೊಡ್ಡ ತೆರೆಯ ಮೇಲೆ ಪೊಲೀಸ್ ಪಾತ್ರದಲ್ಲಿ ವೀಕ್ಷಿಸುವ ಅವಕಾಶ ಲಭಿಸಿದೆ.
ದೂಕುಡು ಚಿತ್ರದಲ್ಲಿ ಬೃಹತ್ ತಾರಾಗಣವೇ ಇತ್ತು. ಫ್ಯಾಮಿಲಿ- ಕಾಮಿಡಿ ಮಾದರಿಯ ಈ ಚಿತ್ರ ವೀಕ್ಷಕರನ್ನು ಕೊನೆಯವರೆಗೂ ಹಿಡಿದು ಕೂರಿಸುವಲ್ಲಿ ಯಶಸ್ವಿಯಾಗಿಇತ್ತು. ಸೋನು ಸೂದ್, ಬ್ರಹ್ಮಾನಂದಂ, ಕೋಟ ಶ್ರೀನಿವಾಸ ರಾವ್, ಎಂಎಸ್ ನಾರಾಯಣ ಮತ್ತು ನಾಸರ್ ಮೊದಲಾದ ಖ್ಯಾತ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಶ್ರೀನು ವೈಟ್ಲ ನಿರ್ದೇಶನದ ದೂಕುಡುವನ್ನು 14 ರೀಲ್ಸ್ ಎಂಟರ್ಟೈನ್ಮೆಂಟ್ ನಿರ್ಮಿಸಿತ್ತು. ಚಿತ್ರಕ್ಕೆ ಎಸ್.ಎಸ್.ತಮನ್ ಸಂಗೀಈತ ಸಂಯೋಜಿಸಿದ್ದರು. ‘ದೂಕುಡು’ಗೆ ವಿಮರ್ಷಕರಿಂದ, ವೀಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಲ್ಲದೇ ಹಲವಾರು ಪ್ರಶಸ್ತಿಗಳನ್ನೂ ಚಿತ್ರ ಬಾಚಿಕೊಂಡಿತ್ತು.
For the first time in TFI 10th year movie[#Dookudu] anniversary to be celebrated by screening in all 8 territories of AP/TS.
Superstar for a reason!#DookuduSpecialShows #MaheshBabu
— Manobala Vijayabalan (@ManobalaV) September 22, 2021
ಕನ್ನಡದಲ್ಲಿ ಈ ಚಿತ್ರ ‘ಪವರ್’ ಹೆಸರಿನಲ್ಲಿ ತೆರೆಕಂಡಿತ್ತು. ಕಾಲಿವುಡ್ ಹಾಗೂ ಟಾಲಿವುಡ್ ಬೆಡಗಿ ತ್ರಿಷಾ ಈ ಚಿತ್ರದ ಮುಖಾಂತರ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದರು. ಕನ್ನಡದಲ್ಲೂ ಈ ಚಿತ್ರ ಭರ್ಜರಿ ಯಶಸ್ಸು ಗಳಿಸಿತ್ತು. ಇದೀಗ ತ್ರಿಷಾ ಮತ್ತು ಪುನೀತ್ ಜೋಡಿ ‘ದ್ವಿತ್ವ’ ಚಿತ್ರಕ್ಕೆ ಒಂದಾಗುತ್ತಿದ್ದು, ಲೂಸಿಯಾ ಪವನ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿದೆ.
ಇದನ್ನೂ ಓದಿ:
ಕಿಯಾರಾ ಅಡ್ವಾಣಿ ಫ್ಯಾಷನ್ ಅಭಿರುಚಿಗೆ ಸಾಟಿ ಯಾರು? ಶೇರ್ಷಾ ಸುಂದರಿ ಈಗ ಸಖತ್ ಮಿಂಚಿಂಗ್
‘ನೆನಪಿರಲಿ’ ಪ್ರೇಮ್ ಮುಂದಿನ ಚಿತ್ರಕ್ಕೆ 400 ಕೋಟಿ ರೂ. ಬಜೆಟ್; ಹಾಲಿವುಡ್ ಹಾದಿಯತ್ತ ‘ಲವ್ಲಿ ಸ್ಟಾರ್’
(Mahesh Babu and Samantha starring Dookudu completes 10 years and special screenings across Andhra Pradesh and Telangana)
Published On - 9:59 am, Thu, 23 September 21