ಇಂಗ್ಲಿಷ್​ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ಮಹೇಶ್​ ಬಾಬು ಮಗಳು? ನಟನ ಅಚ್ಚರಿಯ ಹೇಳಿಕೆ

ಮಹೇಶ್​ ಬಾಬು ಮಗಳು ಸಿತಾರಾ ತುಂಬಾನೆ ಚೂಟಿ. ಸಣ್ಣ ವಯಸ್ಸಿನಲ್ಲೇ ಅವಳು ಸ್ವಂತ ಯೂಟ್ಯೂಬ್​ ಚಾನೆಲ್​ ಹೊಂದಿದ್ದಾಳೆ. ಸ್ಟಾರ್​ ನಟರನ್ನು ಅದ್ಭುತವಾಗಿ ಸಂದರ್ಶನ ಮಾಡಿ ಎಲ್ಲರ ಮನ ಗೆದ್ದಿದ್ದಾಳೆ.

ಇಂಗ್ಲಿಷ್​ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ಮಹೇಶ್​ ಬಾಬು ಮಗಳು? ನಟನ ಅಚ್ಚರಿಯ ಹೇಳಿಕೆ
ಮಹೇಶ್​ ಬಾಬು-ಸಿತಾರಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 25, 2021 | 4:06 PM

ಮಹೇಶ್​ ಬಾಬು ತೆಲುಗು ಸಿನಿಮಾಗಳಲ್ಲಿ ನಟಿಸಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಅವರಿಗೆ ಟಾಲಿವುಡ್​ನಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಈ ಕಾರಣಕ್ಕೆ ಅವರು ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡೋಕೆ ಅಷ್ಟೊಂದು ಆಸಕ್ತಿ ತೋರುತ್ತಿಲ್ಲ. ವರ್ಷಕ್ಕೆ ಒಂದು ಎರಡು ಸಿನಿಮಾ ಮಾಡುತ್ತಾ ಟಾಲಿವುಡ್​ ಮಂದಿಯನ್ನು ಅವರು ಖುಷಿಪಡಿಸುತ್ತಿದ್ದಾರೆ. ಆದರೆ, ಅವರ ಮಗಳು ಇಂಗ್ಲಿಷ್​ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಡುವ ಆಲೋಚನೆ ಮಾಡಿದ್ದಾರೆ. ಈ ವಿಚಾರವನ್ನು ಮಹೇಶ್​ ಬಾಬು ಅವರೇ ಹೇಳಿಕೊಂಡಿದ್ದಾರೆ.

ಮಹೇಶ್​ ಬಾಬು ಮಗಳು ಸಿತಾರಾ ತುಂಬಾನೆ ಚೂಟಿ. ಸಣ್ಣ ವಯಸ್ಸಿನಲ್ಲೇ ಅವಳು ಸ್ವಂತ ಯೂಟ್ಯೂಬ್​ ಚಾನೆಲ್​ ಹೊಂದಿದ್ದಾಳೆ. ಸ್ಟಾರ್​ ನಟರನ್ನು ಅದ್ಭುತವಾಗಿ ಸಂದರ್ಶನ ಮಾಡಿ ಎಲ್ಲರ ಮನ ಗೆದ್ದಿದ್ದಾಳೆ. ಸಿತಾರಾ ದೇಹ ಭಾಷೆ ನೋಡಿದ ಅನೇಕರು ಅವಳು ಚಿತ್ರರಂಗಕ್ಕೆ ಬರೋದು ಪಕ್ಕಾ ಎನ್ನುತ್ತಿದ್ದಾರೆ. ಇದೇ ಪ್ರಶ್ನೆಯನ್ನು ಮಹೇಶ್​ ಬಾಬುಗೂ ಕೇಳಲಾಯಿತು. ಆದರೆ, ಅವರ ಕಡೆಯಿಂದ ಬಂದ ಉತ್ತರ ತುಂಬಾನೇ ಅಚ್ಚರಿದಾಯಕವಾಗಿತ್ತು.

ಸಿತಾರಾಗೆ ತೆಲುಗು ಸಿನಿಮಾಗಳೆಂದರೆ ಅಷ್ಟಕ್ಕಷ್ಟೆ. ಅವಳು ಇಷ್ಟಪಡೋದು ಇಂಗ್ಲಿಷ್​ ಸಿನಿಮಾಗಳನ್ನು. ಈ ಬಗ್ಗೆ ಮಾತನಾಡಿರುವ ಮಹೇಶ್​ ಬಾಬು, ‘ಸಿತಾರಾಗೆ ತೆಲುಗು ಸಿನಿಮಾ ಇಷ್ಟವಿಲ್ಲ. ಅವಳು ಇಂಗ್ಲಿಷ್​ ಚಿತ್ರಗಳನ್ನು ಹೆಚ್ಚು ಇಷ್ಟಪಡುತ್ತಾಳೆ. ಅದು ಅವಳ ಇಷ್ಟ. ಏನಾಗುತ್ತಾಳೆ ಎಂಬುದನ್ನು ಅವಳೇ ನಿರ್ಧರಿಸಲಿ’ ಎಂದು ಹೇಳುವ ಮೂಲಕ ಅದೆಲ್ಲವೂ ಮಗಳ ಆಯ್ಕೆ ಎಂದಿದ್ದಾರೆ ಮಹೇಶ್​.

ಜೆಮಿನಿ ಟಿವಿಯಲ್ಲಿ ‘ಎವರು ಮೀಲೊ ಕೋಟಿಶ್ವರುಲು’ ಶೋ ಪ್ರಸಾರವಾಗುತ್ತಿದೆ. ‘ಕೌನ್​ ಬನೇಗಾ ಕರೋಡ್​​ಪತಿಯ’ ತೆಲುಗು ವರ್ಷನ್​ ಇದು. ಇದನ್ನು ಖ್ಯಾತ ನಟ ಜ್ಯೂ.ಎನ್​ಟಿಆರ್​ ನಡೆಸಿಕೊಡುತ್ತಿದ್ದಾರೆ. ಈ ಶೋಗೆ ಮಹೇಶ್​ ಬಾಬು ಅವರು ಅತಿಥಿಯಾಗಿ ಆಗಮಿಸಿದ್ದರು. ಇತ್ತೀಚೆಗೆ ಇದರ ಶೂಟಿಂಗ್​ ಪೂರ್ಣಗೊಂಡಿದೆ. ಮಹೇಶ್​ ಬಾಬು ಈ ಸ್ಪರ್ಧೆಯಲ್ಲಿ 25 ಲಕ್ಷ ರೂಪಾಯಿ ಗೆದ್ದಿದ್ದಾರೆ. ಈ ಎಪಿಸೋಡ್​ ಟಿವಿಯಲ್ಲಿ ದಸರಾ ಹಬ್ಬದ ಸಮಯದಲ್ಲಿ ಪ್ರಸಾರವಾಗಲಿದೆ.

ಇದನ್ನೂ ಓದಿ: ಮಹೇಶ್​ ಬಾಬು ಮನೆಯಲ್ಲಿರುವ ಐಷಾರಾಮಿ ಹೋಮ್​ ಥಿಯೇಟರ್ ಹೇಗಿದೆ ಗೊತ್ತಾ?; ಇಲ್ಲಿದೆ ಫೋಟೋ

ಮಹೇಶ್​ ಬಾಬುಗೆ ಸಿಕ್ತು 25 ಲಕ್ಷ ಬಹುಮಾನ​ ಹಣ; ಅವರು ಪಾಲ್ಗೊಂಡ ಸ್ಪರ್ಧೆ ಯಾವುದು?

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್