AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹೇಶ್ ಬಾಬು ಹೊಸ ಸಿನಿಮಾದ ಹೆಸರು ಘೋಷಣೆ: ಹೆಸರಲ್ಲೇ ಇದೆ ಖಾರ

Mahesh Babu: ಮಹೇಶ್ ಬಾಬು ಹೊಸ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಜೊತೆಗೆ ಸಿನಿಮಾದ ಬಿಡುಗಡೆ ದಿನಾಂಕವೂ ಘೋಷಿಸಲಾಗಿದೆ.

ಮಹೇಶ್ ಬಾಬು ಹೊಸ ಸಿನಿಮಾದ ಹೆಸರು ಘೋಷಣೆ: ಹೆಸರಲ್ಲೇ ಇದೆ ಖಾರ
ಮಹೇಶ್ ಬಾಬು
ಮಂಜುನಾಥ ಸಿ.
|

Updated on: May 31, 2023 | 9:06 PM

Share

ಮಹೇಶ್ ಬಾಬು (Mahesh Babu) ಈಗ ನಟಿಸುತ್ತಿರುವ ಸಿನಿಮಾಕ್ಕಿಂತಲೂ ಅವರ ಮುಂದೆ ನಟಿಸಲಿರುವ ಸಿನಿಮಾದ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ. ಮಹೇಶ್ ಬಾಬು, ರಾಜಮೌಳಿ (Rajamouli) ನಿರ್ದೇಶನದ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರೆ. ಆದರೆ ಪ್ರಸ್ತುತ ತ್ರಿವಿಕ್ರಮ್ ಶ್ರೀನಿವಾಸ್ (Trivikram Srinivas) ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಅಂತಿಮ ಹಂತದಲ್ಲಿದೆ. ಇದೀಗ ಇಂದು (ಮೇ 31) ಸಿನಿಮಾದ ಹೆಸರು ಘೋಷಣೆ ಮಾಡಲಾಗಿದ್ದು, ಪಕ್ಕಾ ಕಮರ್ಶಿಯಲ್ ಹೆಸರನ್ನೇ ಸಿನಿಮಾಕ್ಕೆ ಇಡಲಾಗಿದೆ.

ಮಹೇಶ್ ಬಾಬು-ತ್ರಿವಿಕ್ರಮ್ ಶ್ರೀನಿವಾಸ್ ಜೋಡಿಯ ಹೊಸ ಸಿನಿಮಾದ ಹೆಸರು ‘ಗುಂಟೂರು ಖಾರಂ’ ಸಿನಿಮಾಕ್ಕೆ ಇಷ್ಟು ದಿನ ಎಸ್ಎಸ್​ಎಂಬಿ28 ಎಂದು ಕರೆಯಲಾಗುತ್ತಿದ್ದ ಈ ಸಿನಿಮಾಕ್ಕೆ ಇನ್ನು ಮುಂದೆ ಗುಂಟೂರು ಖಾರಂ ಎಂದು ಹೆಸರು. ಗುಂಟೂರು ಖಾರ ತನ್ನ ಅತಿಯಾದ ಖಾರ, ಗಾಟಿಗೆ ಬಹಳ ಜನಪ್ರಿಯ ಇದೀಗ ಅದೇ ಹೆಸರನ್ನು ಸಿನಿಮಾಕ್ಕೆ ಇಟ್ಟಿದ್ದಾರೆ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್.

ಗುಂಟೂರು ಖಾರ ಸಿನಿಮಾದ ಪೋಸ್ಟರ್ ಹಾಗೂ ಟೀಸರ್ ಸಹ ಇಂದು ಬಿಡುಗಡೆ ಆಗಿದ್ದು ಕೆಂಪು ಬಣ್ಣದ ಚೌಕಳಿಗಳುಳ್ಳ ಶರ್ಟ್ ಧರಿಸಿ ಹಣೆಗೆ ಕೆಂಪು ಪಟ್ಟಿ ಕಟ್ಟಿಕೊಂಡು ಬೀಡಿ ಸೇದುತ್ತಿರುವ ಮಹೇಶ್ ಬಾಬು ಚಿತ್ರವನ್ನು ಸಿನಿಮಾದ ಹೆಸರಿನ ಜೊತೆಗೆ ಬಿಡುಗಡೆ ಮಾಡಲಾಗಿದೆ. ಸಿನಿಮಾದ ಹೊಸ ಪೋಸ್ಟರ್ ಅನ್ನು ಮಹೇಶ್ ಬಾಬು, ಅವರ ಪತ್ನಿ ನಮ್ರತಾ ಶಿರೋಡ್ಕರ್ ಸೇರಿದಂತೆ ಹಲವರು ಹಂಚಿಕೊಂಡಿದ್ದಾರೆ. ಮಹೇಶ್ ಬಾಬು ಅಭಿಮಾನಿಗಳು ಸಹ ಸಿನಿಮಾದ ಬಗ್ಗೆ ಕುತೂಹಲ, ನಿರೀಕ್ಷೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದಾರೆ. ಟೀಸರ್​ನಲ್ಲಿ ಮಹೇಶ್ ಬಾಬು ಖಳರನ್ನು ಚಚ್ಚಿ ಚಿಂದಿ ಉಡಾಯಿಸುತ್ತಿರುವ ಕೆಲವು ದೃಶ್ಯಗಳನ್ನು ತೋರಿಸಲಾಗಿದೆ.

ಇದನ್ನೂ ಓದಿ:ರಾಜಮೌಳಿ-ಮಹೇಶ್ ಬಾಬು ಸಿನಿಮಾ ಸೆಟ್ಟೇರುವುದು ಯಾವಾಗ? ರಾಜಮೌಳಿ ತಂದೆ ಕೊಟ್ಟರು ಉತ್ತರ

ಮಹೇಶ್ ಬಾಬು ನಟಿಸುತ್ತಿರುವ ಗುಂಟೂರು ಖಾರಂ ಸಿನಿಮಾಕ್ಕೆ ಪೂಜಾ ಹೆಗ್ಡೆ ನಾಯಕಿ. ಇದೇ ಸಿನಿಮಾದಲ್ಲಿ ಕನ್ನಡತಿ ಶ್ರೀಲೀಲಾ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಬಾಲಿವುಡ್ ನಟರೊಬ್ಬರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸಿನಿಮಾಕ್ಕೆ ತಮನ್ ಸಂಗೀತ ನೀಡಿದ್ದು, ಸಿನಿಮಾ ನಿರ್ಮಾಣ ಮಾಡಿರುವುದು ರಾಧಾ ಕೃಷ್ಣ. ಗುಂಟೂರು ಖಾರಂ ಸಿನಿಮಾವು ಮುಂದಿನ ವರ್ಷ ಜನವರಿ 13ಕ್ಕೆ ಬಿಡುಗಡೆ ಆಗಲಿದೆ.

ತ್ರಿವಿಕ್ರಮ್ ಶ್ರೀನಿವಾಸ್ ಜೊತೆಗೆ ಮಹೇಶ್ ಬಾಬುಗಿದು ಮೂರನೇ ಸಿನಿಮಾ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶಕತೆಯಲ್ಲಿ ಮಹೇಶ್ ಬಾಬು ಮೊದಲು ನಟಿಸಿದ್ದ ಅತಿಥಿ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು ಅದಾದ ಬಳಿಕ ಖಲೇಜ ಹೆಸರಿನ ಸಿನಿಮಾದಲ್ಲಿ ನಟಿಸಿದರು ಆ ಸಿನಿಮಾ ಸಹ ಸೂಪರ್ ಹಿಟ್ ಆಯಿತು. ಇದೀಗ ಮೂರನೇ ಬಾರಿ ಈ ಯಶಸ್ವಿ ಜೋಡಿ ಒಂದಾಗುತ್ತಿದೆ.

ಗುಂಟೂರು ಖಾರಂ ಸಿನಿಮಾದ ಬಳಿಕ ಮಹೇಶ್ ಬಾಬು ರಾಜಮೌಳಿ ಜೊತೆಗೆ ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿವೆ. ಆರ್​ಆರ್​ಆರ್ ಸಿನಿಮಾ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜಮೌಳಿ ಹೆಸರು ಮಾಡಿದ್ದು, ಮಹೇಶ್ ಬಾಬು ಜೊತೆಗಿನ ಸಿನಿಮಾವನ್ನು ಅಂತರಾಷ್ಟ್ರೀಯ ಗುಣಮಟ್ಟದಲ್ಲಿಯೇ ರಾಜಮೌಳಿ ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ಕೃಷಿ ಅಧಿಕಾರಿ ಬಳಿ 2.50 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ!
ಕೃಷಿ ಅಧಿಕಾರಿ ಬಳಿ 2.50 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ!