ತೆಲುಗು ಚಿತ್ರರಂಗದಲ್ಲಿ ಇರೋ ಈ ಪದ್ಧತಿ ಸ್ಯಾಂಡಲ್​ವುಡ್​ನಲ್ಲಿ ಏಕಿಲ್ಲ?

| Updated By: ರಾಜೇಶ್ ದುಗ್ಗುಮನೆ

Updated on: Jul 09, 2024 | 8:57 AM

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರಕ್ಕೆ 800 ಕೋಟಿ ರೂಪಾಯಿ ಗಳಿಕೆ ಆಗಿದೆ. ಈ ಚಿತ್ರವನ್ನು ವೀಕ್ಷಿಸಿದ ಅನೇಕ ಟಾಲಿವುಡ್ ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. ಈ ಪದ್ಧತಿ ಕನ್ನಡದಲ್ಲಿ ಏಕಿಲ್ಲ ಎಂಬುದು ಅನೇಕರ ಪ್ರಶ್ನೆ.

ತೆಲುಗು ಚಿತ್ರರಂಗದಲ್ಲಿ ಇರೋ ಈ ಪದ್ಧತಿ ಸ್ಯಾಂಡಲ್​ವುಡ್​ನಲ್ಲಿ ಏಕಿಲ್ಲ?
ತೆಲುಗು ಚಿತ್ರರಂಗದಲ್ಲಿ ಇರೋ ಈ ಪದ್ಧತಿ ಸ್ಯಾಂಡಲ್​ವುಡ್​ನಲ್ಲಿ ಏಕಿಲ್ಲ?
Follow us on

ತೆಲುಗು ಚಿತ್ರರಂಗ ಹಾಗೂ ಕನ್ನಡ ಚಿತ್ರರಂಗ ಸಾಕಷ್ಟು ಎತ್ತರಕ್ಕೆ ಬೆಳೆದಿವೆ. ಕನ್ನಡದ ಅನೇಕ ಸಿನಿಮಾಗಳು ಸೂಪರ್ ಹಿಟ್ ಎನಿಸಿಕೊಂಡಿವೆ. ಅದೇ ರೀತಿ ತೆಲುಗು ಸಿನಿಮಾಗಳು ಕೂಡ ಗೆದ್ದು ಬೀಗಿವೆ. ಎರಡೂ ಇಂಡಸ್ಟ್ರಿಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ರಿಲೀಸ್ ಆಗುತ್ತಿವೆ. ಟಾಲಿವುಡ್ ಹಾಗೂ ಸ್ಯಾಂಡಲ್​ವುಡ್ ಎರಡರಲ್ಲೂ ಸೂಪರ್​ಸ್ಟಾರ್​ಗಳು ಇದ್ದಾರೆ. ಆದರೆ, ಕನ್ನಡ ಚಿತ್ರರಂಗದಲ್ಲಿ ಒಂದು ಕೊರತೆ ಬಹುವಾಗಿ ಕಾಡುತ್ತಿದೆ. ಈ ಬಗ್ಗೆ ಅನೇಕರಿಗೆ ಬೇಸರ ಇದೆ.

ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 ಎಡಿ’ ಸಿನಿಮಾ ಯಶಸ್ಸು ಕಂಡಿದೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಬರೋಬ್ಬರಿ 800 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್, ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾನ ನೋಡಿದ ಬಳಿಕ ಮಹೇಶ್ ಬಾಬು ಅವರು ಚಿತ್ರವನ್ನು ಹಾಗೂ ಚಿತ್ರತಂಡವನ್ನು ಹೊಗಳಿದ್ದಾರೆ.

‘ಕಲ್ಕಿ ಅದ್ಭುತ ಸಿನಿಮಾ. ನಾಗ್ ಅಶ್ವಿನ್ ಅವರೇ ನಿಮ್ಮ ವಿಷನ್​ಗೆ ಹ್ಯಾಟ್ಸ್​ ಆಫ್​. ಪ್ರತಿ ದೃಶ್ಯವೂ ಉತ್ತಮವಾಗಿದೆ. ಬಚ್ಚನ್ ಸರ್ ನಿಮ್ಮ ನಟನೆಗೆ ಮತ್ತೊಬ್ಬರು ಸಾಟಿಯಿಲ್ಲ! ಕಮಲ್ ಹಾಸನ್ ಸರ್ ನೀವು ಮಾಡುವ ಪ್ರತಿ ಪಾತ್ರವೂ ಅನನ್ಯವಾಗಿ ನಿಮ್ಮದೇ. ಪ್ರಭಾಸ್ ಅವರೇ ನೀವು ಮತ್ತೊಂದು ಅದ್ಭುತವಾದ ಸಿನಿಮಾ ಮಾಡಿದ್ದೀರಿ. ದೀಪಿಕಾ ಪಡುಕೋಣೆ ಎಂದಿನಂತೆ ಅದ್ಭುತವಾಗಿ ಕಾಣಿಸಿದ್ದೀರಿ. ಅದ್ಬುತ ಯಶಸ್ಸು ಪಡೆದ ವೈಜಯಂತಿ ಫಿಲ್ಮ್ಸ್​ಗೆ ಮತ್ತು ಇಡೀ ತಂಡಕ್ಕೆ ಅಭಿನಂದನೆಗಳು’ ಎಂದಿದ್ದಾರೆ ಮಹೇಶ್ ಬಾಬು.

ಇದನ್ನೂ ಓದಿ:  ರಾಜಮೌಳಿ-ಮಹೇಶ್ ಬಾಬು ಚಿತ್ರಕ್ಕೆ ಸಿಕ್ಕ ಖಡಕ್ ವಿಲನ್

ಕನ್ನಡದಲ್ಲೂ ಅನೇಕ ಸೂಪರ್ ಹಿಟ್ ಚಿತ್ರಗಳು ರಿಲೀಸ್ ಆಗಿವೆ. ಅನೇಕ ಸ್ಟಾರ್​ಗಳ ಚಿತ್ರಗಳು ಬಿಡುಗಡೆ ಕಾಣುತ್ತವೆ. ಆದರೆ, ಸೋಶಿಯಲ್ ಮೀಡಿಯಾ ಮೂಲಕ ಮೆಚ್ಚುಗೆ ಸೂಚಿಸೋದು ತುಂಬಾನೇ ಅಪರೂಪ. ಯುವ ಹೀರೋಗಳ ಚಿತ್ರಕ್ಕೆ ಸ್ಟಾರ್​ ಹೀರೋಗಳು ಮೆಚ್ಚುಗೆ ಸೂಚಿಸೋ ಪದ್ಧತಿ ಚಾಲ್ತಿಯಲ್ಲಿ ಇದೆ. ಆದರೆ, ಓರ್ವ ಸ್ಟಾರ್ ಹೀರೋ ಸಿನಿಮಾ ರಿಲೀಸ್ ಆದಾಗ ಮತ್ತೋರ್ವ ಸ್ಟಾರ್ ಹೀರೋ ಮುಂದೆ ಬಂದು ಮೆಚ್ಚುಗೆ ಸೂಚಿಸಿದ್ದು ತುಂಬಾನೇ ಕಡಿಮೆ ಎನ್ನಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.