ಮಹೇಶ್ ಬಾಬು ಬರ್ತ್ಡೇ ದಿನ ಅರ್ಧ ಪೋಸ್ಟರ್ ಬಿಟ್ಟು ಅಭಿಮಾನಿಗಳಿಗೆ ಪತ್ರ ಬರೆದ ರಾಜಮೌಳಿ
ಮಹೇಶ್ ಬಾಬು ಅವರ ಜನ್ಮದಿನದಂದು, ನಿರೀಕ್ಷೆಯಂತೆ 'SSMB29' ಚಿತ್ರದ ಬಗ್ಗೆ ಮಾಹಿತಿ ಬಹಿರಂಗಗೊಳ್ಳಲಿಲ್ಲ. ಆದರೆ, ನಿರ್ದೇಶಕ ರಾಜಮೌಳಿ ಅವರು ನವೆಂಬರ್ 2025ರಲ್ಲಿ ಚಿತ್ರದ ಕುರಿತು ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ಘೋಷಿಸಿದ್ದಾರೆ. ಒಂದು ಪೋಸ್ಟರ್ ಬಿಡುಗಡೆ ಮಾಡಿ, ಚಿತ್ರದ ಬಗ್ಗೆ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದ್ದಾರೆ.

ಟಾಲಿವುಡ್ನ ಸ್ಟಾರ್ ನಟ ಮಹೇಶ್ ಬಾಬು (Mahesh Babu) ಅವರಿಗೆ ಇಂದು (ಆಗಸ್ಟ್ 9) ಜನ್ಮದಿನ. ಈ ವಿಶೇಷ ದಿನದಂದು ಮಹೇಶ್ ಬಾಬು ಮುಂದಿನ ಸಿನಿಮಾ ‘ಎಸ್ಎಸ್ಎಂಬಿ 29’ ಬಗ್ಗೆ ಅಪ್ಡೇಟ್ ಸಿಗಲಿದೆ ಎಂದು ಹೇಳಲಾಗಿತ್ತು. ಆದರೆ, ಹಾಗಾಗಿಲ್ಲ. ಬದಲಿಗೆ ರಾಜಮೌಳಿ ಕಡೆಯಿಂದ ಅದ್ಭುತ ಅಪ್ಡೇಟ್ ಒಂದು ಸಿಕ್ಕಿದೆ. ನವೆಂಬರ್ನಲ್ಲಿ ಚಿತ್ರದ ಬಗ್ಗೆ ಮಾಹಿತಿ ರಿವೀಲ್ ಮಾಡೋದಾಗಿ ಅವರು ಹೇಳಿದ್ದಾರೆ. ಇಷ್ಟಕ್ಕೆ ಫ್ಯಾನ್ಸ್ ತೃಪ್ತಿ ಪಟ್ಟುಕೊಂಡಿದ್ದಾರೆ.
ಮಹೇಶ್ ಬಾಬು ಬರ್ತ್ಡೇ ದಿನ ‘ಎಸ್ಎಸ್ಎಂಬಿ 29’ ಚಿತ್ರದ ಟೈಟಲ್ ರಿವೀಲ್ ಆಗಬಹುದು ಎಂದು ಕಾಯಲಾಗಿತ್ತು. ಆದರೆ, ಹಾಗಾಗಿಲ್ಲ. ಆದರೆ, ರಾಜಮೌಳಿ ಕಡೆಯಿಂದ ಅಪ್ಡೇಟ್ ಸಿಕ್ಕಿದೆ. ಮುಖವನ್ನು ರಿವೀಲ್ ಮಾಡದೇ ಒಂದು ಪೋಸ್ಟರ್ ರಿವೀಲ್ ಮಾಡಲಾಗಿದೆ. ಈ ಪೋಸ್ಟರ್ನಲ್ಲಿ ಈ ಚಿತ್ರದ ಬಗ್ಗೆ ನವೆಂಬರ್ನಲ್ಲಿ ಮಾಹಿತಿ ನೀಡೋದಾಗಿ ಅವರು ಹೇಳಿದ್ದಾರೆ.
ಸದ್ಯ ರಿವೀಲ್ ಆಗಿರೋ ಪೋಸ್ಟರ್ನಲ್ಲಿ ಮಹೇಶ್ ಬಾಬು ಕತ್ತಿನಲ್ಲಿ ಲಾಕೆಟ್ ಇದೆ. ಇದರಲ್ಲಿ ತ್ರಿಶೂಲ ಹಾಗೂ ಬಸವನ ಇದೆ. ಕುತ್ತಿಗೆಯಿಂದ ರಕ್ತ ಸೋರುತ್ತಿದೆ. ಈ ಫೋಟೋ ನೋಡಿದ ಫ್ಯಾನ್ಸ್ ಸಂತೋಷಗೊಂಡಿದ್ದಾರೆ. ಸಂಪೂರ್ಣ ಪೋಸ್ಟರ್ ಬಹಿರಂಗಗೊಳ್ಳದಿದ್ದರೂ, ಇಷ್ಟಾದರೂ ಅಪ್ಡೇಟ್ ಸಿಕ್ಕಿತಲ್ಲ ಎಂದು ಫ್ಯಾನ್ಸ್ ತೃಪ್ತಿ ಪಟ್ಟುಕೊಂಡಿದ್ದಾರೆ.
The First Reveal in November 2025… #GlobeTrotter pic.twitter.com/MEtGBNeqfi
— rajamouli ss (@ssrajamouli) August 9, 2025
For all the admirers of my #GlobeTrotter… pic.twitter.com/c4vNXYKrL9
— rajamouli ss (@ssrajamouli) August 9, 2025
ಮತ್ತೊಂದು ಪೋಸ್ಟ್ನಲ್ಲಿ ರಾಜಮೌಳಿ ಅವರು ಅಭಿಮಾನಿಗಳಿಗಾಗಿ ಪತ್ರ ಬರೆದಿದ್ದಾರೆ. ‘ಪ್ರಪಂಚದಾದ್ಯಂತ ಇರುವ ಚಲನಚಿತ್ರ ಪ್ರಿಯರಿಗೆ ಮತ್ತು ಮಹೇಶ್ ಅಭಿಮಾನಿಗಳಿಗೆ ಈ ಪತ್ರ. ನಾವು ಕೆಲವು ದಿನಗಳ ಹಿಂದಷ್ಟೇ ಚಿತ್ರೀಕರಣ ಪ್ರಾರಂಭಿಸಿದ್ದೇವೆ. ಚಿತ್ರದ ಬಗ್ಗೆ ತಿಳಿದುಕೊಳ್ಳುವ ನಿಮ್ಮ ಬಯಕೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ’ ಎಂದು ಪತ್ರ ಆರಂಭಿಸಿದ್ದಾರೆ.
ಇದನ್ನೂ ಓದಿ: ಮಹೇಶ್ ಬಾಬು ತಲೆಯಲ್ಲಿರೋದು ನಿಜವಾದ ಕೂದಲಲ್ಲ; ಇಲ್ಲಿದೆ ಅಚ್ಚರಿ ವಿವರ
‘ಚಿತ್ರದ ಕಥೆ ಮತ್ತು ವ್ಯಾಪ್ತಿ ತುಂಬಾ ದೊಡ್ಡದಾಗಿದೆ. ಹೀಗಾಗಿ ಕೆಲವು ಫೋಟೋಗಳು ಮತ್ತು ಪತ್ರಿಕಾಗೋಷ್ಠಿ ಅದಕ್ಕೆ ನ್ಯಾಯ ಒದಗಿಸುವುದಿಲ್ಲ. ಸದ್ಯ ಸಿನಿಮಾ ಕೆಲಸ ನಡೆಯುತ್ತಿದೆ. ನವೆಂಬರ್ 2025ರಲ್ಲಿ ಅಪ್ಡೇಟ್ ನೀಡುತ್ತೇವೆ. ನೀವು ಹಿಂದೆಂದೂ ನೋಡಿರದೇ ಇರುವುದನ್ನು ನಾವು ತೋರಿಸಲಿದ್ದೇವೆ. ನಿಮ್ಮ ತಾಳ್ಮೆಗೆ ಧನ್ಯವಾದ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








