ಮಹೇಶ್ ಬಾಬು ಧರಿಸಿದ ಈ ಶರ್ಟ್ನ ಬೆಲೆಯಲ್ಲಿ ಬರುತ್ತೆ ದುಬಾರಿ ಬೈಕ್
ಮಹೇಶ್ ಬಾಬು ಅವರು ಧರಿಸಿದ ದುಬಾರಿ ಬೆಲೆಯ ಹರ್ಮೆಸ್ ಟಿ-ಶರ್ಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಖಿಲ್ ಅಕ್ಕಿನೇನಿ ಅವರ ಆರತಕ್ಷತೆಯಲ್ಲಿ ಈ ಟಿ-ಶರ್ಟ್ ಧರಿಸಿದ್ದರು. ಅಭಿಮಾನಿಗಳು ಈ ಬೆಲೆಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆದರೆ ಮಹೇಶ್ ಬಾಬು ಅವರ ದುಬಾರಿ ಸಿನಿಮಾ ಸಂಭಾವನೆಯನ್ನು ಪರಿಗಣಿಸಿದರೆ ಇದು ಅಚ್ಚರಿಯಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ನಟರು ಧರಿಸುವ ಶರ್ಟ್, ಪ್ಯಾಂಟ್, ನಟಿಯರು ಹಾಕುವ ಬ್ಯಾಗ್ ಹಾಗೂ ಚಪ್ಪಲಿ ಬೆಲೆಗಳ ಬಗ್ಗೆ ಆಗಾಗ ಚರ್ಚೆ ಆಗುತ್ತದೆ. ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಸೆಲೆಬ್ರಿಟಿಗಳು ಹಾಕುವ ಬಟ್ಟೆಗಳ ಬೆಲೆಯನ್ನು ಅಭಿಮಾನಿಗಳು ತೆಗೆಯುತ್ತಾರೆ. ಬಹುತೇಕ ಸೆಲೆಬ್ರಿಟಿಗಳು ದುಬಾರಿ ಬೆಲೆಯ ಬಟ್ಟೆಯನ್ನೇ ಧರಿಸಿರುತ್ತಾರೆ. ಈಗ ಮಹೇಶ್ ಬಾಬು ಅವರು ಧರಿಸಿದ ಟಿ-ಶರ್ಟ್ ಬೆಲೆಯು ಚರ್ಚೆಯನ್ನು ಹುಟ್ಟುಹಾಕಿದೆ ಮತ್ತು ಅದರ ಬೆಲೆ ಕೇಳಿದ ಬಳಿಕ ಫ್ಯಾನ್ಸ್ ಕಣ್ಣರಳಿಸಿದ್ದಾರೆ.
ಅಖಿಲ್ ಅಕ್ಕಿನೇನಿ ಮತ್ತು ಝೈನಾಬ್ ರಾವ್ಜಿ ಅವರು ಇತ್ತೀಚೆಗೆ ವಿವಾಹ ಆದರು ಮತ್ತು ಜೂನ್ 8ರಂದು ಹೈದರಾಬಾದ್ನ ಅಕ್ಕಿನೇನಿ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ಆರತಕ್ಷತೆ ನಡೆಯಿತು. ಇದಕ್ಕೆ ಅಖಿಲ್ ತಂದೆ ನಾಗಾರ್ಜುನ ಅವರು ಹಲವು ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಿದ್ದರು. ಮದುವೆ ಆಪ್ತರ ಸಮ್ಮುಖದಲ್ಲಿ ನಡೆದಿದ್ದರಿಂದ ಆರತಕ್ಷತೆಗೆ ಸೆಲೆಬ್ರಿಟಿಗಳ ದಂಡು ಬಂತು. ಈ ವೇಳೆ ಮಹೇಶ್ ಬಾಬು ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದನ್ನು ನೀವು ಕಾಣಬಹುದು.
ಮಹೇಶ್ ಬಾಬು, ಅವರ ಪತ್ನಿ ನಮ್ರತಾ ಶಿರೋಡ್ಕರ್, ಮಗಳು ಸಿತಾರಾ ಆರತಕ್ಷತೆಗೆ ಬಂದರು ಮತ್ತು ವಧು-ವರರನ್ನು ಹಾರೈಸಿದರು. ಈ ವೇಳೆ ಮಹೇಶ್ ಬಾಬು ಧರಿಸಿದ್ದ ಸಿಂಪಲ್ ಉಡುಗೆ ಗಮನ ಸೆಳೆದಿದೆ. ಇದು ವಿಶ್ವದ ದುಬಾರಿ ಬಟ್ಟೆ ಬ್ರ್ಯಾಂಡ್ ಆದ ‘ಹೆರ್ಮ್ಸ್’ ಕಂಪನಿಯ ಟಿ-ಶರ್ಟ್ ಇದಾಗಿದೆ ಆಗಿದೆ. ಇದರ ಬೆಲೆ 1.51 ಲಕ್ಷ ರೂಪಾಯಿ. ಪೂರ್ತಿಯಾಗಿ ಹೇಳಬೇಕು ಎಂದರೆ 1,51,678 ರೂಪಾಯಿ.
ಸದ್ಯ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಈ ಶರ್ಟ್ ಬೆಲೆಯಲ್ಲಿ ಒಂದು ಬೈಕ್ ಬರುತ್ತದೆ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ. ಅನೇಕರಿಗೆ ಅವರ ಶರ್ಟ್ ಬೆಲೆ ಅಚ್ಚರಿಯನ್ನು ತಂದಿಲ್ಲ ಎನ್ನಿ.
ಇದನ್ನೂ ಓದಿ: ಅಖಿಲ್- ಝೈನಾಬ್ ಆರತಕ್ಷತೆಗೆ ಸೆಲೆಬ್ರಿಟಿಗಳ ದಂಡು; ಇಲ್ಲಿವೆ ಫೋಟೋಸ್
ಮಹೇಶ್ ಬಾಬು ಅವರು ಸದ್ಯ ರಾಜಮೌಳಿ ಅವರ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ನಾಯಕಿ. ಈ ಸಿನಿಮಾ ಗಮನ ಸೆಳೆಯುವ ನಿರೀಕ್ಷೆ ಇದೆ. ಈ ಚಿತ್ರಕ್ಕೆ ಭರದ ಶೂಟಿಂಗ್ ನಡೆಯುತ್ತಿದೆ. ಮುಂದಿನ ವರ್ಷ ಸಿನಿಮಾ ರಿಲೀಸ್ ಆಗುವ ನಿರೀಕ್ಷೆ ಇದೆ. ಇದಕ್ಕಾಗಿ ಅವರು ದುಬಾರಿ ಸಂಭಾವನೆ ಪಡೆದಿದ್ದಾರೆ. ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆದುಕೊಳ್ಳುವ ಅವರು ಇಷ್ಟು ದುಬಾರಿ ಶರ್ಟ್ ಧರಿಸುವುದು ದೊಡ್ಡ ವಿಚಾರ ಏನಲ್ಲ ಎಂದು ಅನೇಕರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







