ದಕ್ಷಿಣ ಚಿತ್ರರಂಗಲ್ಲಿ ಹೊಕ್ಕುಳದ ಗೀಳು ಜಾಸ್ತಿ ಎಂದು ಆರೋಪಿಸಿದ ಮಾಳವಿಕಾ ಮೋಹನನ್

Malavika Mohan: ಮಲಯಾಳಂ ಸಿನಿಮಾ ಮೂಲಕ ಮಾಳವಿಕಾ ಮೋಹನನ್ ಅವರು ಬಣ್ಣದ ಲೋಕಕ್ಕೆ ಬಂದರು. ಆ ಬಳಿಕ ಕನ್ನಡ, ತಮಿಳು ಸಿನಿಮಾಗಳಲ್ಲಿ ನಟಿಸಿದರು. ಇದರ ಜೊತೆಗೆ ಬಾಲಿವುಡ್​ನಲ್ಲೂ ಅವರು ಸಿನಿಮಾ ಮಾಡಿದ್ದಾರೆ. ಈ ಮೊದಲು ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರಂತೆ. ಈ ಬಗ್ಗೆ ಹೇಳಿಕೊಂಡಿದ್ದಾರೆ.

ದಕ್ಷಿಣ ಚಿತ್ರರಂಗಲ್ಲಿ ಹೊಕ್ಕುಳದ ಗೀಳು ಜಾಸ್ತಿ ಎಂದು ಆರೋಪಿಸಿದ ಮಾಳವಿಕಾ ಮೋಹನನ್
ಮಾಳವಿಕಾ
Edited By:

Updated on: Aug 07, 2025 | 7:59 AM

ಮಾಳವಿಕಾ ಮೋಹನನ್ (Malavika Mohan) ಅವರು ಕನ್ನಡದಲ್ಲೂ ನಟಿಸಿದ್ದಾರೆ. ‘ನಾನು ಮತ್ತು ವರಲಕ್ಷ್ಮೀ’ ಚಿತ್ರದ ಭಾಗವಾಗಿ ಅವರು ಕಾಣಿಸಿಕೊಂಡಿದ್ದರು. ಮಾಳವಿಕಾ ಮೋಹನನ್ ಅವರು ದಕ್ಷಿಣದಲ್ಲಿ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಮಲಯಾಳಂ ಸಿನಿಮಾಗಳಲ್ಲೂ ಅವರು ನಟಿಸಿದ್ದರು. ಅವರು ಈ ಮೊದಲು ಬಾಲಿವುಡ್​ಗೆ ಸಂದರ್ಶನ ನೀಡುವಾಗ ದಕ್ಷಿಣ ಭಾರತದವರ ಬಗ್ಗೆ ಅಪಸ್ವರ ತೆಗೆದಿದ್ದರು. ಇಲ್ಲಿ ಯಾವ ರೀತಿಯ ಸಮಸ್ಯೆ ಎದುರಿಸಿದೆ ಎಂದು ಹೇಳಿದ್ದರು. ಅಲ್ಲದೆ, ಹೊಕ್ಕಳದ ಬಗ್ಗೆ ವಿಶೇಷ ಗೀಳಿದೆ ಎಂದು ಹೇಳಿದ್ದರು.

ಮಾಳವಿಕಾ ಮೋಹನನ್ ಅವರು ಮಲಯಾಳಂ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದರು. ಆ ಬಳಿಕ ಕನ್ನಡ, ತಮಿಳು ಸಿನಿಮಾಗಳನ್ನು ಮಾಡಿದರು. ಇದರ ಜೊತೆಗೆ ಹಿಂದಿಯಲ್ಲೂ ಅವರು ಸಿನಿಮಾ ಮಾಡಿದ್ದಾರೆ. ಈ ಮೊದಲು ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರಂತೆ. ಈ ಬಗ್ಗೆ ಹೇಳಿಕೊಂಡಿದ್ದಾರೆ.

‘ಮಹಿಳೆಯರ ದೇಹದ ಮೇಲೆ ಒಬ್ಬೊಬ್ಬರದ್ದು ಒಂದೊಂದು ರೀತಿಯ ಅಭಿಪ್ರಾಯ ಇದೆ. ಮುಂಬೈನಲ್ಲಿ (ಹಿಂದಿ ಚಿತ್ರರಂಗ) ತೂಕ ಇಳಿಸಿಕೊಳ್ಳಬೇಕು ಎನ್ನುತ್ತಾರೆ. ಚೆನ್ನೈನಲ್ಲಿ (ತಮಿಳು ಚಿತ್ರರಂಗ) ತೂಕ ಹೆಚ್ಚಬೇಕು ಎನ್ನುತ್ತಾರೆ. ಈ ವಿಚಾರಗಳು ನನ್ನನ್ನು ಗೊಂದಲಕ್ಕೆ ತಳ್ಳಿದೆ. ನಾನು ನನ್ನ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿದ್ದೇನೆ’ ಎನ್ನುತ್ತಾರೆ ಅವರು.

ಇದನ್ನೂ ಓದಿ
50 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಸು ಫ್ರಮ್ ಸೋ’; ಎಲ್ಲಿಂದ ಎಷ್ಟು ಬಂತು?
ಪತಿಗೆ ಎಂದೂ ಮರೆಯಲಾರದ ಉಡುಗೊರೆ ಕೊಟ್ಟ ಸೋನಲ್; ಭಾವುಕರಾಗಿ ಕೈ ಮುಗಿದ ತರುಣ್
ರಾಜ್ ಬಿ. ಶೆಟ್ಟಿ ಬಳಿ ಇವೆ ಮೂರು ಅದ್ಭುತ ಪ್ರಾಜೆಕ್ಟ್​​ಗಳು; ಇಲ್ಲಿದೆ ವಿವರ
‘ನೀವು ಗ್ಯಾಂಗ್ ಮಾಡಿ ಬ್ರದರ್’; ‘ಶೆಟ್ಟಿ ಮಾಫಿಯಾ’ ಎಂದವರಿಗೆ ರಾಜ್ ಉತ್ತರ

‘ದಕ್ಷಿಣ ಭಾರತದವರಿಗೆ ಹೊಕ್ಕಳ ಬಗ್ಗೆ ಸಾಕಷ್ಟು ಘೀಳಿದೆ. ನಾನು ಮುಂಬೈನಲ್ಲಿ ಹುಟ್ಟಿ ಬೆಳೆದವಳಾದ್ದರಿಂದ ನನಗೆ ಅದು ಸರ್​ಪ್ರೈಸ್ ಎನಿಸಿತು. ಆ ಗೀಳು ನಿಜ. ಇಲ್ಲಿನ ಜನರು ನಟಿಯರ ಫೋಟೋದಲ್ಲಿ ಹುಕ್ಕಳನ್ನೇ ಜೂಮ್ ಮಾಡುತ್ತಾರೆ. ಅದು ನನಗೆ ಈಗ ರೂಢಿ ಆಗಿದೆ’ ಎಂದಿದ್ದರು ಮಾಳವಿಕಾ ಮೋಹನನ್.

ಇದನ್ನೂ ಓದಿ: ‘ಮುಸ್ಲಿಂ ಧರ್ಮಕ್ಕೆ ಬಂದರಷ್ಟೇ ಪ್ರೀತಿಸುತ್ತೇನೆ ಎನ್ನುವುದಾದರೆ ಅದು ಯಾವ ರೀತಿಯ ಪ್ರೀತಿ’; ಮಾಳವಿಕಾ ಅವಿನಾಶ್ ಪ್ರಶ್ನೆ  

ಮಾಳವಿಕಾ ಮೋಹನನ್ ಅವರು 21ನೇ ವರ್ಷಕ್ಕೆ ಚಿತ್ರರಂಗಕ್ಕೆ ಬಂದರು. ಈ ಸಂದರ್ಭದಲ್ಲಿ ಅವರು ಸಾಕಷ್ಟು ಟ್ರೋಲ್ ಆದರು. ತೆಳ್ಳಗೆ ಇರುವ ಕಾರಣಕ್ಕೆ ಅನೇಕರು ಅವರನ್ನು ಟೀಕೆ ಮಾಡಿದರು. ಇದು ಅವರಿಗೆ ಸಾಕಷ್ಟು ಬೇಸರ ಮೂಡಿಸಿತ್ತು. ಸದ್ಯ ಅವರು ತೆಲುಗು, ಮಲಯಾಳಂ ಹಾಗೂ ತಮಿಳಿನಲ್ಲಿ ತಲಾ ಒಂದು ಸಿನಿಮಾ ಮಾಡುತ್ತಿದ್ದಾರೆ. ಅವರಿಗೆ ಈಗ 31 ವರ್ಷ. ಅವರು ಈವರೆಗೆ ಮದುವೆಯ ಬಗ್ಗೆ ಆಲೋಚನೆ ಮಾಡಿಲ್ಲ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 7:57 am, Thu, 7 August 25