AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ಸೆಟ್​ನಲ್ಲಿ ಗಾಯ, 5 ಕೋಟಿ ಪರಿಹಾರ ಕೇಳಿ ನೊಟೀಸ್ ಕಳಿಸಿದ ಮಲಯಾಳಂ ನಟಿ

Malayalam Actress: ಮಲಯಾಳಂ ನಟಿಯೊಬ್ಬರು ತಮಗೆ ಸಿನಿಮಾ ಚಿತ್ರೀಕರಣದ ವೇಳೆ ಆದ ಗಾಯಕ್ಕೆ ಬರೋಬ್ಬರಿ ಐದು ಕೋಟಿ ರೂಪಾಯಿ ಪರಿಹಾರ ಕೇಳಿದ್ದಾರೆ. ಮಲಯಾಳಂ ಖ್ಯಾತ ನಟಿ ಮಂಜು ವಾರಿಯರ್​ಗೆ ಸಹ ನೊಟೀಸ್ ಕಳಿಸಿದ್ದಾರೆ.

ಸಿನಿಮಾ ಸೆಟ್​ನಲ್ಲಿ ಗಾಯ, 5 ಕೋಟಿ ಪರಿಹಾರ ಕೇಳಿ ನೊಟೀಸ್ ಕಳಿಸಿದ ಮಲಯಾಳಂ ನಟಿ
ಮಂಜುನಾಥ ಸಿ.
|

Updated on: Aug 24, 2024 | 6:19 PM

Share

ಸಿನಿಮಾ ಸೆಟ್​ಗಳಲ್ಲಿ ಅವಘಡಗಳು, ಅಪಘಾತಗಳು ತೀರಾ ಸಾಮಾನ್ಯ. ಕೆಲವರ ಜೀವವೇ ಹೋಗಿಬಿಟ್ಟಿದೆ. ಸ್ಟಂಟ್, ರೋಪ್, ಡ್ಯಾನ್ಸ್, ಆಕ್ಷನ್, ದೊಡ್ಡ ದೊಡ್ಡ ಸೆಟ್ಟು, ಬೆಂಕಿ ಇನ್ನೂ ಹಲವು ಅಪಾಯಕಾರಿ ವಿಭಾಗಗಳ ಕೆಲಸ ಸೆಟ್​ನಲ್ಲಿ ನಡೆಯುತ್ತಿರುತ್ತದೆ. ಹಾಗಾಗಿ ಸಿನಿಮಾ ಸೆಟ್​ನಲ್ಲಿ ಗಾಯಗೊಳ್ಳುವ ಅಪಾಯ ಹೆಚ್ಚು. ವಿಶೇಷವಾಗಿ ಸಿನಿಮಾದ ಆಕ್ಷನ್ ದೃಶ್ಯಗಳಲ್ಲಿ ನಟರು ಗಾಯಗೊಳ್ಳುವ ಅವಕಾಶ ಬಹಳ ಹೆಚ್ಚಿರುತ್ತದೆ. ನಟ-ನಟಿಯರು ಗಾಯಗೊಂಡಾಗ ಕೆಲ ದಿನ ವಿಶ್ರಾಂತಿ ತೆಗೆದುಕೊಂಡು ಶೂಟಿಂಗ್​ಗೆ ಮರಳುತ್ತಾರೆ. ಆದರೆ ಮಲಯಾಳಂ ನಟಿಯೊಬ್ಬರು ಮಾತ್ರ, ಸೆಟ್​ನಲ್ಲಿ ಗಾಯವಾಗಿದ್ದಕ್ಕೆ ಪ್ರತಿಯಾಗಿ ತಮಗೆ ಐದು ಕೋಟಿ ರೂಪಾಯಿ ಹಣವನ್ನು ಪರಿಹಾರವನ್ನಾಗಿ ಕೊಡಬೇಕೆಂದು ಪ್ರಕರಣ ದಾಖಲಿಸಿದ್ದಾರೆ.

ಮಲಯಾಳಂ ನಟಿ ಶೀಥಲ್ ತಂಬಿ ಎಂಬುವರು ಮಲಯಾಳಂನ ಜನಪ್ರಿಯ ನಟಿ ಮಂಜು ವಾರಿಯವರ್ ವಿರುದ್ಧ ದೂರು ದಾಖಲಿಸಿದ್ದು, ತಮ್ಮ ಗಾಯಕ್ಕೆ ಪರಿಹಾರವಾಗಿ ಐದು ಕೋಟಿ ರೂಪಾಯಿಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಶೀಥಲ್ ತಂಬಿ, ‘ಫುಟೇಜ್’ ಹೆಸರಿನ ಮಲಯಾಳಂ ಕ್ರೈಂ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸುತ್ತಿದ್ದರು. ಸಿನಿಮಾದ ಆಕ್ಷನ್ ದೃಶ್ಯದ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಅವಘಡದಲ್ಲಿ ಶೀಥಲ್​ಗೆ ಗಾಯವಾಗಿದೆ. ಚಿತ್ರೀಕರಣದ ಸಮಯದಲ್ಲಿ ಸೂಕ್ತ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿರಲಿಲ್ಲದ ಕಾರಣವೇ ತಮಗೆ ಗಾಯವಾಗಿದೆ ಎಂದಿರುವ ಶೀಥಲ್, ಗಾಯಗೊಂಡ ದಿನ ತಮಗೆ ಆಂಬುಲೆನ್ಸ್ ಸೇವೆ ಸಹ ನೀಡಲಾಗಿರಲಿಲ್ಲ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:Nirmal Benny Death: ಹೃದಯಾಘಾತದಿಂದ ಮಲಯಾಳಂ ಕಲಾವಿದ ನಿರ್ಮಲ್ ಬೆನ್ನಿ ನಿಧನ

ಗಾಯಗಿಂದ ತಮ್ಮ ವೃತ್ತಿ ಜೀವನಕ್ಕೆ ಸಮಸ್ಯೆ ಆಗಿದ್ದು, ಇನ್ನು ಮುಂದೆ ನಟಿಸಲು ನನಗೆ ಸಾಧ್ಯ ಆಗದೇ ಹೋಗಬಹುದು ಹಾಗಾಗಿ ಪರಿಹಾರವಾಗಿ ನನಗೆ ಐದು ಕೋಟಿ ರೂಪಾಯಿ ಹಣ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ನಟಿ ಮಂಜು ವಾರಿಯರ್, ‘ಫುಟೇಜ್’ ಸಿನಿಮಾದ ಸಹ ನಿರ್ಮಾಪಕಿ ಆಗಿರುವ ಕಾರಣ, ದೂರಿನಲ್ಲಿ ಅವರ ಹೆಸರನ್ನೂ ಸಹ ಉಲ್ಲೇಖಿಸಲಾಗಿದ್ದು, ತಮಗೆ ಐದು ಕೋಟಿ ನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮಂಜು ವಾರಿಯರ್, ಮಲಯಾಳಂ ಚಿತ್ರರಂಗದ ಜನಪ್ರಿಯ ನಟಿ. ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ಮಂಜು ವಾರಿಯರ್. 1995 ರಿಂದಲೂ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಮಂಜು ವಾರಿಯರ್ ಮಲಯಾಳಂ ಮಾತ್ರವೇ ಅಲ್ಲದೆ ತಮಿಳಿನ ಕೆಲವು ಸಿನಿಮಾಗಳಲ್ಲಿಯೂ ನಟಸಿದ್ದಾರೆ. ಧನುಶ್ ನಟಿಸಿರುವ ‘ಅಸುರನ್’ ಸಿನಿಮಾದಲ್ಲಿ ಧನುಶ್ ಪತ್ನಿಯ ಪಾತ್ರದಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಬಿಡುಗಡೆ ಆದ ಅಜಿತ್ ನಟನೆಯ ‘ತುಣಿವು’ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಸ್ತುತ ಹಲವು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಮಿಸ್ಟರ್ ಎಕ್ಸ್’, ‘ವಿಡುದಲೈ ಪಾರ್ಟ್ 2’, ರಜನೀಕಾಂತ್ ನಟನೆಯ ‘ವೇಟ್ಟಿಯನ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಮೋಹನ್​ಲಾಲ್ ನಟನೆಯ ‘ಲುಸಿಫರ್ 2’ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕರ್ನಾಟಕದ ಹಲವು ಜೈಲುಗಳಲ್ಲಿ ಬರೋಬ್ಬರಿ 410 ಮೊಬೈಲ್‌ ಸೀಜ್
ಕರ್ನಾಟಕದ ಹಲವು ಜೈಲುಗಳಲ್ಲಿ ಬರೋಬ್ಬರಿ 410 ಮೊಬೈಲ್‌ ಸೀಜ್
ತಡರಾತ್ರಿ ಮಳೆಗೆ ತತ್ತರಿಸಿದ ಬೆಂಗಳೂರು!
ತಡರಾತ್ರಿ ಮಳೆಗೆ ತತ್ತರಿಸಿದ ಬೆಂಗಳೂರು!
ವಾರ ಭವಿಷ್ಯ: ಗ್ರಹಗಳ ಸ್ಥಾನಪಲ್ಲಟ, ದ್ವಾದಶ ರಾಶಿಗಳ ಮೇಲೆ ಪ್ರಭಾವ
ವಾರ ಭವಿಷ್ಯ: ಗ್ರಹಗಳ ಸ್ಥಾನಪಲ್ಲಟ, ದ್ವಾದಶ ರಾಶಿಗಳ ಮೇಲೆ ಪ್ರಭಾವ
ರವಿ ಕನ್ಯಾ ರಾಶಿಯಲ್ಲಿ, ಚಂದ್ರ ಧನು ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದ
ರವಿ ಕನ್ಯಾ ರಾಶಿಯಲ್ಲಿ, ಚಂದ್ರ ಧನು ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದ
ಮನೆ ಕಟ್ಟುವವರಿಗೆ ಗುಡ್​ನ್ಯೂಸ್: ನಿಮಿಷಗಳಲ್ಲಿ ಸಿಗಲಿದೆ ಪ್ಲಾನ್ ಅಪ್ರೂವಲ್
ಮನೆ ಕಟ್ಟುವವರಿಗೆ ಗುಡ್​ನ್ಯೂಸ್: ನಿಮಿಷಗಳಲ್ಲಿ ಸಿಗಲಿದೆ ಪ್ಲಾನ್ ಅಪ್ರೂವಲ್
7ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ವರ್ಣಮಾಲೆ ಗೊತ್ತಿಲ್ಲ:ಶಿಕ್ಷಕರಿಗೆ ನೊಟೀಸ್
7ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ವರ್ಣಮಾಲೆ ಗೊತ್ತಿಲ್ಲ:ಶಿಕ್ಷಕರಿಗೆ ನೊಟೀಸ್
ಪ್ರಚೋದನಕಾರಿ ಭಾಷಣ: ಪ್ರತಾಪ್ ಸಿಂಹ ಸೇರಿ ಹಲವರ ವಿರುದ್ಧ ಕೈ ದೂರು
ಪ್ರಚೋದನಕಾರಿ ಭಾಷಣ: ಪ್ರತಾಪ್ ಸಿಂಹ ಸೇರಿ ಹಲವರ ವಿರುದ್ಧ ಕೈ ದೂರು
ಸಿದ್ದರಾಮಯ್ಯ ಪ್ರತಿಮೆ ತೆರವು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ
ಸಿದ್ದರಾಮಯ್ಯ ಪ್ರತಿಮೆ ತೆರವು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ
ಕಲಬುರಗಿ ಯುವತಿಯನ್ನ ಬಾಂಗ್ಲಾದೇಶಕ್ಕೆ ಕರೆದೊಯ್ದು ಟಾರ್ಚರ್
ಕಲಬುರಗಿ ಯುವತಿಯನ್ನ ಬಾಂಗ್ಲಾದೇಶಕ್ಕೆ ಕರೆದೊಯ್ದು ಟಾರ್ಚರ್
ಗರ್ಭಿಣಿ ಹಸುವನ್ನು ಅರ್ಧ ತಿಂದು ರೈತನನ್ನು ಬೆನ್ನಟ್ಟಿದ ಹುಲಿ
ಗರ್ಭಿಣಿ ಹಸುವನ್ನು ಅರ್ಧ ತಿಂದು ರೈತನನ್ನು ಬೆನ್ನಟ್ಟಿದ ಹುಲಿ