Revathy Sampath: ಲೈಂಗಿಕ ಕಿರುಕುಳ ನೀಡಿದ 14 ಜನರ ಹೆಸರು ಬಹಿರಂಗ ಮಾಡಿ ಸಂಚಲನ ಸೃಷ್ಟಿಸಿದ ನಟಿ ರೇವತಿ

| Updated By: Digi Tech Desk

Updated on: Jun 17, 2021 | 9:18 AM

ನಟಿ ರೇವತಿ ಸಂಪತ್​ ಅವರಿಗೆ ಈಗ 27 ವರ್ಷ ವಯಸ್ಸು. 2019ರಲ್ಲಿ ಅವರು ಸಿನಿಮಾರಂಗಕ್ಕೆ ಕಾಲಿಟ್ಟರು. ಚಿತ್ರರಂಗಕ್ಕೆ ಎಂಟ್ರಿ ನೀಡಿ 2 ವರ್ಷ ಕಳೆಯುವುದರೊಳಗೆ ಕಾಮಕಾಂಡವನ್ನು ಬಯಲಿಗೆ ಎಳೆದಿದ್ದಾರೆ.

Revathy Sampath: ಲೈಂಗಿಕ ಕಿರುಕುಳ ನೀಡಿದ 14 ಜನರ ಹೆಸರು ಬಹಿರಂಗ ಮಾಡಿ ಸಂಚಲನ ಸೃಷ್ಟಿಸಿದ ನಟಿ ರೇವತಿ
ರೇವತಿ ಸಂಪತ್​
Follow us on

ಭಾರತದಲ್ಲಿ ಮೀಟೂ ಅಭಿಯಾನದ ಕಿಡಿ ಆಗಾಗ ಹೊತ್ತಿಕೊಳ್ಳುತ್ತಲೇ ಇರುತ್ತದೆ. ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಳ್ಳುತ್ತಲೇ ಬಂದಿದ್ದಾರೆ. ಅದರಲ್ಲೂ ಪ್ರಮುಖವಾಗಿ ಚಿತ್ರರಂಗದಲ್ಲಿನ ಕಾಮುಕರ ಬಗ್ಗೆ ಅನೇಕ ನಟಿಯರು ಬಾಯಿ ಬಿಟ್ಟಿದ್ದುಂಟು. ಆದರೆ ನೇರವಾಗಿ ಹೆಸರು ಬಹಿರಂಗಪಡಿಸಿದವರು ಕಡಿಮೆ. ಈಗ ಮಲಯಾಳಂ ನಟಿ ರೇವತಿ ಸಂಪತ್​ ಅವರು ಮೀಟೂ ಅಭಿಯಾನದಲ್ಲಿ ದೊಡ್ಡ ಕಿಚ್ಚು ಹಚ್ಚಿದ್ದಾರೆ. ತಮಗೆ ಕಿರುಕುಳ ನೀಡಿದ 14 ಜನರ ಹೆಸರನ್ನು ಸೋಷಿಯಲ್​ ಮೀಡಿಯಾ ಮೂಲಕ ಜಗಜ್ಜಾಹೀರುಗೊಳಿಸಿದ್ದಾರೆ.

ಜನಪ್ರಿಯ ನಟ ಸಿದ್ಧಿಖಿ ಅವರನ್ನೂ ಒಳಗೊಂಡಂತೆ ತಮಗೆ ಅನೇಕರಿಂದ ಲೈಂಗಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಮೌಕಿಕವಾಗಿ ಕಿರುಕುಳ ಆಗಿದೆ ಎಂದು ರೇವತಿ ಸಂಪತ್​ ಆರೋಪಿಸಿದ್ದಾರೆ. ಕೇವಲ ಕಿರುಕುಳ ಆಗಿದೆ ಅಂತ ಹೇಳಿ ಅವರು ಸುಮ್ಮನಾಗಿಲ್ಲ. ಕಿರುಕುಳ ನೀಡಿದ ಎಲ್ಲ ವ್ಯಕ್ತಿಗಳ ಹೆಸರನ್ನು ಅವರು ಬಯಲಿಗೆ ಎಳೆದಿದ್ದಾರೆ. ರೇವತಿ ನೀಡಿರುವ ಪಟ್ಟಿ ಹೀಗಿದೆ:

  1. ರಾಜೇಶ್​ (ನಿರ್ದೇಶಕ)
  2. ಸಿದ್ಧಿಖಿ (ನಟ)
  3. ಶಿಜು (ನಟ)
  4. ಆಶಿಖಿ ಮಾಹಿ (ಫೋಟೋಗ್ರಾಫರ್​)
  5. ಅಭಿಲ್​ ದೇವ್​ (ಕೇರಳ ಫ್ಯಾಷನ್​ ಲೀಗ್​ ಸ್ಥಾಪಕ)
  6. ಅಜಯ್​ ಪ್ರಭಾಕರ್​ (ನಿರ್ದೇಶಕ)
  7. ಎಂ.ಎಸ್​. ಪದುಷ್
  8. ಸೌರಭ್​ ಕೃಷ್ಣನ್​ (ಸೈಬರ್​ ಕಿರುಕುಳ ನೀಡಿದವ)
  9. ನಂದು ಅಶೋಕನ್​ (ಡಿವೈಎಫ್​ಐ ಯುನಿಟ್​ ಕಮಿಟಿ ಸದಸ್ಯ)
  10. ಮ್ಯಾಕ್ಸ್​ವೆಲ್​ ಜೋಷ್​ (ಕಿರುಚಿತ್ರ ನಿರ್ದೇಶಕ)
  11. ಶನೂಬ್​ ಕರುವತ್​ (ಜಾಹೀರಾತು ನಿರ್ದೇಶಕ)
  12. ರಗೆಂಧ್​ ಪೈ (ಕಾಸ್ಟಿಂಗ್​ ಡೈರೆಕ್ಟರ್​)
  13. ಸರುನ್​​ ಲಿಯೋ (ಬ್ಯಾಂಕ್​ ಏಜೆಂಟ್​)
  14. ಬಿನು (ಪೊಲೀಸ್​ ಅಧಿಕಾರಿ)

ನಟಿ ರೇವತಿ ಸಂಪತ್​ ಅವರಿಗೆ ಈಗ 27 ವರ್ಷ ವಯಸ್ಸು. ಪಟ್ನಾಗರ್​ ಸಿನಿಮಾ ಮೂಲಕ ಅವರು 2019ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಸಿನಿಮಾರಂಗಕ್ಕೆ ಎಂಟ್ರಿ ನೀಡಿ 2 ವರ್ಷ ಕಳೆಯುವುದರೊಳಗೆ ಕಾಮಕಾಂಡವನ್ನು ಬಯಲಿಗೆ ಎಳೆದಿದ್ದಾರೆ. ಸೈಕಾಲಜಿಯಲ್ಲಿ ಅವರು ಪದವಿ ಶಿಕ್ಷಣ ಪಡೆದುಕೊಂಡಿದ್ದಾರೆ. ತಮಗೆ ಕಿರುಕುಳ ನೀಡಿದವರ ಹೆಸರನ್ನು ಬಯಲು ಮಾಡುವಲ್ಲಿ ತಮಗೆ ಯಾವುದೇ ಭಯ ಇಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

ಸುಶಾಂತ್​ ಪ್ರೇಯಸಿಯನ್ನು 2 ಬಾರಿ ಮಂಚಕ್ಕೆ ಕರೆದಿದ್ದ ಚಿತ್ರರಂಗದ ಕಾಮುಕರು! ಅಂಕಿತಾ ಬಾಯ್ಬಿಟ್ಟ ಕಹಿ ಸತ್ಯ

ನಟಿಯ ದೇಹದ ಖಾಸಗಿ ಅಂಗಗಳ ಬಗ್ಗೆ ಹೀಗೆಲ್ಲ ಮಾತಾಡ್ತಾರಾ ನಿರ್ದೇಶಕರು? ರಿಚಾ ಹೇಳಿದ ಕಹಿ ಸತ್ಯಗಳು

Published On - 8:26 am, Thu, 17 June 21