Bigg Boss: ಕೊವಿಡ್​ ನಿಯಮ ಉಲ್ಲಂಘನೆ; ಬಿಗ್​ ಬಾಸ್​ ಮನೆ ಸೀಜ್​, 1 ಲಕ್ಷ ರೂಪಾಯಿ ದಂಡ

Bigg Boss Malayalam: ಕನ್ನಡದಲ್ಲಿ 7 ಸೀಸನ್​ಗಳು ಯಶಸ್ವಿಯಾಗಿ ನಡೆದುಕೊಂಡು ಬಂದ ಬಿಗ್​ ಬಾಸ್​ ಕಾರ್ಯಕ್ರಮಕ್ಕೆ 8ನೇ ಸೀಸನ್​ನಲ್ಲಿ ವಿಘ್ನ ಎದುರಾಗಿತ್ತು. ಕೊರೊನಾ ವೈರಸ್​ ಕಾರಣದಿಂದ ಈ ಶೋ ನಿಲ್ಲಿಸಬೇಕಾಗಿರುವುದು ಅನಿವಾರ್ಯ ಆಗಿತ್ತು

Bigg Boss: ಕೊವಿಡ್​ ನಿಯಮ ಉಲ್ಲಂಘನೆ; ಬಿಗ್​ ಬಾಸ್​ ಮನೆ ಸೀಜ್​, 1 ಲಕ್ಷ ರೂಪಾಯಿ ದಂಡ
ಬಿಗ್ ಬಾಸ್
Edited By:

Updated on: May 20, 2021 | 5:54 PM

ಕೊವಿಡ್​ ಹೆಚ್ಚುತ್ತಿರುವ ಮಧ್ಯೆಯೂ ತಮಿಳುನಾಡಿನ ಚೆನ್ನೈನಲ್ಲಿರುವ ಇವಿಪಿ ಫಿಲ್ಮ್​ ಸಿಟಿಯಲ್ಲಿ ಮಲಯಾಳಂ ಬಿಗ್​ ಬಾಸ್​ ಸೀಸನ್​-3 ನಡೆಸಲಾಗುತ್ತಿತ್ತು. ಆದರೆ, ಈಗ ಶೋಗೆ ವಿಘ್ನ ಒಂದು ಎದುರಾಗಿದ್ದು, ಅರ್ಧಕ್ಕೆ ನಿಂತಿದೆ. ಅಲ್ಲದೆ, 1 ಲಕ್ಷ ರೂಪಾಯಿ ದಂಡ ಕೂಡ ವಿಧಿಸಲಾಗಿದೆ.

ತಮಿಳುನಾಡಿನಲ್ಲಿ ಕೊವಿಡ್​ ಸಂಖ್ಯೆ ಮಿತಿಮೀರಿ ಹರಡುತ್ತಿದೆ. ಹೀಗಾಗಿ, ಅಲ್ಲಿನ ಸರ್ಕಾರ ಲಾಕ್​ಡೌನ್​ ಘೋಷಣೆ ಮಾಡಿದೆ. ಸಿನಿಮಾ, ಧಾರಾವಾಹಿ ಶೂಟಿಂಗ್​ ಸೇರಿ ಸಾಕಷ್ಟು ಚಟುವಟಿಕೆಗಳು ಸಂಪೂರ್ಣವಾಗಿ ನಿಂತಿದೆ. ಆದಾಗ್ಯೂ, ಮಲಯಾಳಂ ಬಿಗ್​ ಬಾಸ್​ ಸೀಸನ್​ 3 ಶೂಟಿಂಗ್​ ನಡೆಸಲಾಗುತ್ತಿತ್ತು. ಹೀಗಾಗಿ, ಅಧಿಕಾರಿಗಳು ಬುಧವಾರ ಸಂಜೆ ಬಿಗ್​ ಬಾಸ್​ ಮನೆಗೆ ತೆರಳಿ ಅದನ್ನು ಸೀಜ್​ ಮಾಡಿದ್ದಾರೆ.

‘ಬಿಗ್​ ಬಾಸ್​ ಮನೆಯನ್ನು ನಾವು ಸೀಜ್​ ಮಾಡಿದ್ದೇವೆ. ಅವರು ಸರ್ಕಾರದ ನಿಯಮಾವಳಿಯನ್ನು ಉಲ್ಲಂಘನೆ ಮಾಡಿದ್ದಾರೆ. ಶೂಟಿಂಗ್​ ಮಾಡಬಾರದು ಎನ್ನುವ ಆದೇಶವನ್ನು ಗಾಳಿಗೆ ತೂರಲಾಗಿದೆ. ನಾವು ಮನೆಗೆ ಹೋದಾಗ 7 ಸ್ಪರ್ಧಿಗಳಿದ್ದರು. ಅನೇಕ ತಂತ್ರಜ್ಞರು ಕೂಡ ಇದ್ದರು. ಈಗಾಗಲೇ 95 ದಿನ ಪೂರ್ಣಗೊಂಡಿದೆ. 100 ದಿನ ಪೂರ್ಣಗೊಳಿಸಲು ಇನ್ನು ಐದು ದಿನ ಮಾತ್ರ ಬಾಕಿ ಇದೆ. ದಯವಿಟ್ಟು ಅವಕಾಶ ನೀಡಿ ಎಂದು ಕೋರಿದ್ದರು. ಆದರೆ, ನಾವು ಸಾಧ್ಯವಿಲ್ಲ ಎಂದೆವು. ನಂತರ ಎಲ್ಲಾ ಸ್ಪರ್ಧಿಗಳಿಗೆ ಪಿಪಿಇ ಕಿಟ್​ ನೀಡಿ ಸೆಟ್​ನಿಂದ ಹೊರ ಹೋಗುವಂತೆ ಹೇಳಿದೆವು. ನಂತರ ಬಿಗ್​ ಬಾಸ್​ ಮನೆ ಸೀಜ್​ ಮಾಡಿ 1 ಲಕ್ಷ ದಂಡ ವಿಧಿಸಿದ್ದೇವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಪರ್ಧಿಗಳಿಗೆ ಕೇರಳಕ್ಕೆ ತೆರಳೋಕೆ ಪಾಸ್​ ನೀಡುವಂತೆ ಆದೇಶಿಸಲಾಗಿದೆ. ಸದ್ಯ ಅವರನ್ನು ಹೋಟೆಲ್​ನಲ್ಲಿ ಕ್ವಾರಂಟೈನ್​ ಮಾಡಲಾಗಿದೆ. ಮೂಲಗಳ ಪ್ರಕಾರ ಬಿಗ್​ ಬಾಸ್​ ಮನೆಯ 6 ತಂತ್ರಜ್ಞರಿಗೆ ಕೊವಿಡ್​ ಸೋಂಕು ದೃಢಪಟ್ಟಿತ್ತು ಎನ್ನಲಾಗಿದೆ.

ಕನ್ನಡದಲ್ಲಿ 7 ಸೀಸನ್​ಗಳು ಯಶಸ್ವಿಯಾಗಿ ನಡೆದುಕೊಂಡು ಬಂದ ಬಿಗ್​ ಬಾಸ್​ ಕಾರ್ಯಕ್ರಮಕ್ಕೆ 8ನೇ ಸೀಸನ್​ನಲ್ಲಿ ವಿಘ್ನ ಎದುರಾಗಿತ್ತು. ಕೊರೊನಾ ವೈರಸ್​ ಕಾರಣದಿಂದ ಈ ಶೋ ನಿಲ್ಲಿಸಬೇಕಾಗಿರುವುದು ಅನಿವಾರ್ಯ ಆಗಿತ್ತು. ಹಾಗಾಗಿ ಕಿರುತೆರೆ ಪ್ರೇಕ್ಷಕರಿಗೆ ಬೇಸರ ಆಗಿತ್ತು. ಅಂತಿಮವಾಗಿ ಮನೆಯೊಳಗಿದ್ದ 11 ಮಂದಿ ಸ್ಪರ್ಧಿಗಳು ಹೊರಬರಬೇಕಾಗಿತ್ತು.

ಇದನ್ನೂ ಓದಿ: ಬಿಗ್ ಬಾಸ್​ ಸ್ಪರ್ಧಿಗೆ ಖ್ಯಾತ ತೆಲುಗು ನಟ ಪ್ರಭಾಸ್​ ಜತೆ ನಟಿಸೋ ಅವಕಾಶ

Bigg Boss: ಇನ್ನೂ ನಡೆಯುತ್ತಿದೆ ಬಿಗ್​ ಬಾಸ್ ಕಾರ್ಯಕ್ರಮ; ಮನೆಯೊಳಗೆ ಇದ್ದಾರೆ 9 ಸ್ಪರ್ಧಿಗಳು

Published On - 5:42 pm, Thu, 20 May 21