Joseph Manu: ನಿರ್ದೇಶಿಸಿದ ಮೊದಲ ಸಿನಿಮಾ ರಿಲೀಸ್ ಸಂದರ್ಭದಲ್ಲೇ ನಿಧನ ಹೊಂದಿದ ಡೈರೆಕ್ಟರ್
ಜೊಸೆಫ್ ಮನು ಅವರಿಗೆ ನಿರ್ದೇಶಕನಾಗಬೇಕು ಎನ್ನುವ ಆಸೆ ಇತ್ತು. ಅವರ ಆಸೆ ಈಡೇರುವುದರಲ್ಲಿತ್ತು. ‘ನಾನ್ಸಿ ರಾಣಿ’ ಚಿತ್ರವನ್ನು ಅವರು ನಿರ್ದೇಶನ ಮಾಡಿದ್ದರು.

ಮಲಯಾಳಂ ನಿರ್ದೇಶಕ ಜೊಸೆಫ್ ಮನು ಜೇಮ್ಸ್ (Joseph Manu James) ಅವರು ಸಣ್ಣ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ ಕೇವಲ 31 ವರ್ಷ ವಯಸ್ಸಾಗಿತ್ತು. ಹೆಪಟೈಟಿಸ್ನಿಂದ ಬಳಲುತ್ತಿದ್ದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ನಿರ್ದೇಶನದ ಮೊದಲ ಸಿನಿಮಾ ‘ನಾನ್ಸಿ ರಾಣಿ’ ಸಿನಿಮಾ (Nancy Rani) ಇನ್ನೇನು ರಿಲೀಸ್ ಆಗುವುದರಲ್ಲಿತ್ತು. ಅವರ ನಿಧನಕ್ಕೆ ಕುಟುಂಬದವರು, ಆಪ್ತರು ಹಾಗೂ ಸಿನಿಮಾ ತಂಡದವರು ಸಂತಾಪ ಸೂಚಿಸಿದ್ದಾರೆ.
ಜೊಸೆಫ್ ಮನು ಅವರಿಗೆ ನಿರ್ದೇಶಕನಾಗಬೇಕು ಎನ್ನುವ ಆಸೆ ಇತ್ತು. ಅವರ ಆಸೆ ಈಡೇರುವುದರಲ್ಲಿತ್ತು. ‘ನಾನ್ಸಿ ರಾಣಿ’ ಚಿತ್ರವನ್ನು ಅವರು ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಅರ್ಜುನ್ ಅಶೋಕನ್, ಶ್ರೀನಿವಾಸನ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರದ ರಿಲೀಸ್ ದಿನಾಂಕಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಅವರು ಮೃತಪಟ್ಟಿರುವುದು ಬೇಸರದ ವಿಚಾರ. ‘ನಾನ್ಸಿ ರಾಣಿ’ ಚಿತ್ರದಲ್ಲಿ ನಟಿಸಿರುವ ಅಜು ವರ್ಗೀಶ್ ಮೊದಲಾದವರು ಜೊಸೆಫ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ‘ಬೇಗ ತೆರಳಿದೆ ಸಹೋದರ. ಪ್ರಾರ್ಥನೆ’ ಎಂದು ವರ್ಗೀಶ್ ಬರೆದುಕೊಂಡಿದ್ದಾರೆ.
ಜೊಸೆಫ್ ಮನು ಜೇಮ್ಸ್ ಅವರು ಚಿತ್ರರಂಗಕ್ಕೆ ಬಾಲ ಕಲಾವಿದನಾಗಿ ಕಾಲಿಟ್ಟರು. ‘ಐ ಆ್ಯಮ್ ಕ್ಯೂರಿಯಸ್’ ಚಿತ್ರದಲ್ಲಿ ಅವರು ನಟಿಸಿದರು. ಸಬು ಜೇಮ್ಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಮಲಯಾಳಂ, ಕನ್ನಡ ಹಾಗೂ ಹಿಂದಿ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಅವರು ಕೆಲಸ ಮಾಡಿದರು. ಭಾನುವಾರ (ಫೆ.27) ಜೊಸೆಫ್ ಅಂತ್ಯಕ್ರಿಯೆ ನಡೆದಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮಲಯಾಳಂ ಕೋಲ್ಡ್ ಕೇಸ್ ಸಿನಿಮಾ ಮಾದರಿಯಲ್ಲಿ ಶವ ಪತ್ತೆ: ಮರದ ಮೇಲೆ ಮಹಿಳೆಯ ತಲೆ ಬುರುಡೆ
ಇತ್ತೀಚೆಗೆ ಚಿತ್ರರಂಗಕ್ಕೆ ಒಂದಾದಮೇಲೆ ಒಂದರಂತೆ ಶಾಕಿಂಗ್ ಸುದ್ದಿಗಳು ಎದುರಾಗುತ್ತಲೇ ಇವೆ. ಅನೇಕರನ್ನು ಚಿತ್ರರಂಗ ಕಳೆದುಕೊಳ್ಳುತ್ತಿದೆ. ಚಿತ್ರರಂಗದಲ್ಲಿ ಒಳ್ಳೆಯ ಸಿನಿಮಾಗಳನ್ನು ನೀಡಬೇಕು ಎಂದು ಕನಸು ಇಟ್ಟುಕೊಂಡಿದ್ದ ಜೊಸೆಫ್ ಅವರು ಸಣ್ಣ ವಯಸ್ಸಿಗೆ ನಿಧನ ಹೊಂದಿದ್ದು ನಿಜಕ್ಕೂ ದುಃಖದ ವಿಚಾರ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:44 am, Mon, 27 February 23