ಬಿಗ್ ಬಾಸ್ ಮನೆಗೆ ಕಾಲಿಡಲು ರೆಡಿ ಆದ ಶಕೀಲಾ; ಸಿಗುತ್ತಿದೆ ಭರ್ಜರಿ ಸಂಭಾವನೆ
1994ರಲ್ಲಿ ಶಕೀಲಾ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ತಮಿಳಿನ ‘ಪ್ಲೇಗರ್ಲ್ಸ್’ ಅವರ ಮೊದಲ ಸಿನಿಮಾ. ಬಳಿಕ ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಬಿ-ಗ್ರೇಡ್ ಸಿನಿಮಾಗಳಲ್ಲಿ ನಟಿಸಿ ಅವರು ಜನಪ್ರಿಯತೆ ಪಡೆದರು. ಅವರು ಬಿಗ್ ಬಾಸ್ಗೆ ಬರುತ್ತಿದ್ದಾರೆ.

ಹಲವು ಭಾಷೆಗಳಲ್ಲಿ ‘ಬಿಗ್ ಬಾಸ್’ (Bigg Boss) ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಸೆಪ್ಟೆಂಬರ್ ತಿಂಗಳಿಂದ ‘ತೆಲುಗು ಬಿಗ್ ಬಾಸ್ ಸೀಸನ್ 7’ ಆರಂಭ ಆಗಲಿದೆ. ಪ್ರತಿ ಬಾರಿ ಬಿಗ್ ಬಾಸ್ ಆರಂಭ ಆಗುವಾಗಲೂ ಒಂದಷ್ಟು ಸ್ಪರ್ಧಿಗಳ ಹೆಸರು ಓಡಾಡುತ್ತದೆ. ಅದೇ ರೀತಿ ಈ ಬಾರಿಯೂ ಒಂದಷ್ಟು ಸೆಲೆಬ್ರಿಟಿಗಳ ಹೆಸರು ಹರಿದಾಡಿದೆ. ಆ ಪೈಕಿ ಮಲಯಾಳಂ ನಟಿ ಶಕೀಲಾ (Shakeela) ಹೆಸರು ಮುನ್ನೆಲೆಯಲ್ಲಿದೆ. ಮಲಯಾಳಂ, ಕನ್ನಡ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿರೋ ಇವರು ಬಿಗ್ ಬಾಸ್ಗೆ ಬಂದರೆ ದೊಡ್ಡ ಮಟ್ಟದಲ್ಲಿ ಟಿಆರ್ಪಿ ಸಿಗೋ ಸಾಧ್ಯತೆ ಇದೆ. ಇನ್ನು, ಇವರಿಗೆ ಭರ್ಜರಿ ಸಂಭಾವನೆ ಕೂಡ ನೀಡಲಾಗುತ್ತಿದೆ.
1994ರಲ್ಲಿ ಶಕೀಲಾ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ತಮಿಳಿನ ‘ಪ್ಲೇಗರ್ಲ್ಸ್’ ಅವರ ಮೊದಲ ಸಿನಿಮಾ. ಬಳಿಕ ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಬಿ-ಗ್ರೇಡ್ ಸಿನಿಮಾಗಳಲ್ಲಿ ನಟಿಸಿ ಅವರು ಜನಪ್ರಿಯತೆ ಪಡೆದರು. ಈ ಸಿನಿಮಾಗಳು ಡಬ್ ಆಗಿ ಪರಭಾಷೆಗಳಲ್ಲಿ ರಿಲೀಸ್ ಆಯಿತು. ಅವರು ನಟಿಸಿದ ಅಡಲ್ಟ್ ಚಿತ್ರಗಳು ನೇಪಾಳಿ, ಚೈನೀಸ್ ಮೊದಲಾದ ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆ ಕಂಡಿದೆ ಅನ್ನೋದು ವಿಶೇಷ. ‘ಶಕೀಲಾ: ಆತ್ಮಕಥಾ’ ಹೆಸರಿನ ಆಟೋಬಯೋಗ್ರಫಿಯನ್ನು 2013ರಲ್ಲಿ ಬಿಡಗಡೆ ಮಾಡಲಾಯಿತು. ಇದು ಮಲಯಾಳಂ ಭಾಷೆಯಲ್ಲಿದೆ. ಈ ಪುಸ್ತಕದಲ್ಲಿ ಅವರು ಕುಟುಂಬ, ಸಿನಿಮಾ ಜಗತ್ತು ಹಾಗೂ ರಾಜಕೀಯದ ಬಗ್ಗೆ ಹೇಳಿದ್ದಾರೆ. ಅವರು ಹೆಣ್ಣುಮಗಳನ್ನು ದತ್ತು ಪಡೆದಿದ್ದು ಅವರಿಗೆ ಮಿಲಾ ಎಂದು ಹೆಸರು ಇಟ್ಟಿದ್ದಾರೆ.
ಸದ್ಯ ಶಕೀಲಾ ಬಿಗ್ ಬಾಸ್ಗೆ ಕಾಲಿಡೋಕೆ ರೆಡಿ ಆಗಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಅವರ ಜೀವನದ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದುಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ. ಬಿಗ್ ಬಾಸ್ ಮೂಲಕ ಮತ್ತಷ್ಟು ವಿಚಾರ ಗೊತ್ತಾಗಲಿದೆ.
ತೆಲುಗು ನಟ ಶಿವಾಜಿ, ಅಮರ್ ದೀಪ್ ಚೌಧರಿ, ಯೂಟ್ಯೂಬರ್ ಅನಿಲ್ ಗೀಲಾ, ಡ್ಯಾನ್ಸರ್ ಸಂದೀಪ್, ನಟಿ ಪೂಜಾ ಮೂರ್ತಿ, ಕಾಮಿಡಿಯನ್ ರಿಯಾಜ್, ಮಾಡೆಲ್ ಪ್ರಿನ್ಸ್ ಯಾವರ್, ನಟ ಕ್ರಾಂತಿ, ಸಿಂಗರ್ ದಾಮಿನಿ ಬಾತ್ಲಾ ಮೊದಲಾದವರು ಈ ಶೋಗೆ ಎಂಟ್ರಿ ಕೊಡುತ್ತಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಆ ಹಾಸ್ಯ ನಟ ಎಂಥಹವನು, ನಟಿಯರಿಂದ ಏನೇನು ಕೇಳುತ್ತಾನೆ ಎಂದು ಗೊತ್ತು: ವಡಿವೇಲು ವರ್ತನೆ ಬಗ್ಗೆ ಶಕೀಲಾ ಆರೋಪ
ಶಕೀಲಾ ಅವರ ಬರುವಿಕೆಯನ್ನು ಸಂಪೂರ್ಣವಾಗಿ ಅಲ್ಲ ಗಳೆಯುವಂತಿಲ್ಲ. ಈ ಮೊದಲು ಅವರ ಮಗಳು ಮಿಲಾ ಅವರು ‘ಬಿಗ್ ಬಾಸ್ ತಮಿಳು ಸೀಸನ್ 5’ ಸ್ಪರ್ಧಿ ಆಗಿದ್ದರು. ಅಕ್ಕಿನೇನಿ ನಾಗಾರ್ಜುನ ಅವರು ಹೊಸ ಸೀಸನ್ ಹೋಸ್ಟ್ ಮಾಡಲಿದ್ದಾರೆ. ಸೆಪ್ಟೆಂಬರ್ 3ರಂದು ಈ ಶೋ ಆರಂಭ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:10 am, Mon, 28 August 23