AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಹಾಸ್ಯ ನಟ ಎಂಥಹವನು, ನಟಿಯರಿಂದ ಏನೇನು ಕೇಳುತ್ತಾನೆ ಎಂದು ಗೊತ್ತು: ವಡಿವೇಲು ವರ್ತನೆ ಬಗ್ಗೆ ಶಕೀಲಾ ಆರೋಪ

Shakeela: ತಮಿಳಿನ ಜನಪ್ರಿಯ, ಹಿರಿಯ ಹಾಸ್ಯನಟ ವಡಿವೇಲು ಬಗ್ಗೆ ನಟಿ ಶಕೀಲ ಮಾತನಾಡಿದ್ದು, ವಡಿವೇಲು ಶೂಟಿಂಗ್​ ಸೆಟ್​ನಲ್ಲಿ ನಟಿಯರೊಟ್ಟಿಗೆ ಕೆಟ್ಟದಾಗಿ ವರ್ತಿಸುತ್ತಿದ್ದರು ಎಂದಿದ್ದಾರೆ.

ಆ ಹಾಸ್ಯ ನಟ ಎಂಥಹವನು, ನಟಿಯರಿಂದ ಏನೇನು ಕೇಳುತ್ತಾನೆ ಎಂದು ಗೊತ್ತು: ವಡಿವೇಲು ವರ್ತನೆ ಬಗ್ಗೆ ಶಕೀಲಾ ಆರೋಪ
ವಡಿವೇಲು-ಶಕೀಲಾ
ಮಂಜುನಾಥ ಸಿ.
|

Updated on: Aug 01, 2023 | 3:22 PM

Share

ವಡಿವೇಲು (Vadivelu), ತಮಿಳಿನ ಅತ್ಯಂತ ಜನಪ್ರಿಯ, ಹಿರಿಯ ಹಾಸ್ಯ ನಟ. ಇತ್ತೀಚೆಗೆ ‘ಮಾಮನ್ನನ್’ (Maamannan) ಸಿನಿಮಾದಲ್ಲಿ ಗಂಭೀರ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಆದರೆ ವಡಿವೇಲು ಬಗ್ಗೆ ಆಗಾಗ್ಗೆ, ಅಲ್ಲಲ್ಲಿ ಕೆಲವು ನಟಿಯರು ಅಸಮಾಧಾನ ವ್ಯಕ್ತಪಡಿಸಿದ್ದಿದೆ. ಇದೀಗ 90ರ ದಶಕದ ಟಾಪ್ ನೀಲಿ ಚಿತ್ರತಾರೆ, ನಟಿ ಶಕೀಲಾ (Shakeela), ಶೂಟಿಂಗ್​ ಸೆಟ್​ನಲ್ಲಿ ವಡಿವೇಲು ವರ್ತನೆ ಅವರ ವ್ಯಕ್ತಿತ್ವದ ಬಗ್ಗೆ ಋಣಾತ್ಮಕವಾಗಿ ಮಾತನಾಡಿದ್ದಾರೆ.

ಶಕೀಲಾ, ‘ಗಲಾಟಾ ವಾಯ್ಸ್’ ಹೆಸರಿನ ಯೂಟ್ಯೂಬ್ ಚಾನೆಲ್ ತೆರೆದು ಹಾಸ್ಯ ನಟಿಯರ, ಪೋಷಕ ನಟಿಯರ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಇದೇ ಚಾನೆಲ್​ನಲ್ಲಿ ತಮಿಳಿನ ಹಾಸ್ಯ ನಟಿ ಪ್ರೇಮ ಪ್ರಿಯಾ ಅವರ ಸಂದರ್ಶನವನ್ನು ಇತ್ತೀಚೆಗೆ ನಟಿ ಶಕೀಲಾ ಮಾಡಿದ್ದರು. ಈ ಸಂದರ್ಶನದಲ್ಲಿ ತಮಿಳಿನ ಹಿರಿಯ, ಜನಪ್ರಿಯ ಹಾಸ್ಯ ನಟ ವಡಿವೇಲು ಕುರಿತು ಇಬ್ಬರೂ ನಟಿಯರು ಮಾತನಾಡಿದ್ದಾರೆ.

ಪ್ರೇಮ ಪ್ರಿಯ ತಮಿಳಿನ ಹಲವು ಸಿನಿಮಾಗಳಲ್ಲಿ ಹಾಸ್ಯ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ತಮಗೆ ಹಲವು ಅವಕಾಶಗಳನ್ನು ತಪ್ಪಿಸಲಾಯ್ತು ಎಂದು ಶಕೀಲ ಜೊತೆಗಿನ ಸಂದರ್ಶನದಲ್ಲಿ ಪ್ರೇಮ ಪ್ರಿಯಾ ಹೇಳಿಕೊಂಡಿದ್ದಾರೆ. ಶೂಟಿಂಗ್ ಸೆಟ್​ಗೆ ಹೋದಾಗ ಅಲ್ಲಿ ನಾನು ಕಂಡರೆ ಸಾಕು ವಡಿವೇಲು ನನ್ನನ್ನು ವಾಪಸ್ ಕಳಿಸಿಬಿಡುತ್ತಿದ್ದರು. ನಾನು ಸಿನಿಮಾದಲ್ಲಿದ್ದೀನಿ ಎಂದರೆ ನನ್ನನ್ನು ಆ ಸಿನಿಮಾದಿಂದ ಹೊರಗಿಡುವಂತೆ ನಿರ್ದೇಶಕರಿಗೆ ಹೇಳುತ್ತಿದ್ದರು ಎಂದಿದ್ದಾರೆ ಪ್ರೇಮ ಪ್ರಿಯಾ.

ಇದನ್ನೂ ಓದಿ:ಶೀಘ್ರವೇ ಬರಲಿದೆ ಶಕೀಲಾ ಓಟಿಟಿ; ಇಲ್ಲಿರುವ ಸಿನಿಮಾ ಎಂಥವು? ಯಾರಿಗೆಲ್ಲ ಸಿಗಲಿದೆ ಚಾನ್ಸ್​?

”ವಡಿವೇಲು ಜೊತೆಗೆ ನಿಮಗೆ ಮೀಟೂ ಅನುಭವ ಏನಾದರೂ ಆಗಿದೆಯೇ?’ ಎಂದು ಶಕೀಲಾ, ಪ್ರೇಮ ಪ್ರಿಯಾರನ್ನು ಕೇಳಿದಾಗ, ‘ಇಲ್ಲ ಆ ರೀತಿಯ ಸಮಸ್ಯೆ ಆಗಿಲ್ಲ, ನನ್ನದು ಬೇರೆ ರೀತಿಯ ಸಮಸ್ಯೆ’ ಎಂದಿದ್ದಾರೆ. ಆಗ ಶಕೀಲಾ, ”ನೀನೇನು ಹೇಳುವದು ಬೇಕಾಗಿಲ್ಲ, ವಡಿವೇಲು ಎಂಥಹಾ ಮನುಷ್ಯ, ಸೆಟ್​ನಲ್ಲಿ ನಟಿಯರೊಟ್ಟಿಗೆ ಅವನ ವರ್ತನೆ ಹೇಗಿರುತ್ತದೆ, ನಟಿಯರ ಬಳಿ ಏನೇನಲ್ಲ ಅವನು ಕೇಳುತ್ತಾನೆ ಎಂಬುದು ನನಗೆ ಗೊತ್ತು” ಎಂದಿದ್ದಾರೆ.

”ವಡಿವೇಲುಗೆ ಕ್ಷಮೆ ಕೇಳಿ ವಿಡಿಯೋ ಅಪ್​ಲೋಡ್ ಮಾಡಿ ಎಂದು ಒಬ್ಬ ನಿರ್ದೇಶಕರು ಹೇಳಿದರು ಆದರೆ ನಾನು ಮಾಡಲಿಲ್ಲ ಏಕೆಂದರೆ ಈ ಹಿಂದೆ ನಾನು ವಡಿವೇಲು ಬಗ್ಗೆ ಮಾತನಾಡಿದ್ದೆಲ್ಲ ಸತ್ಯ. ವಡಿವೇಲುಗೆ ನನ್ನನ್ನು ಕಂಡರೆ ಅವರಿಗೆ ಆಗುತ್ತಿರಲಿಲ್ಲ. ಒಂದು ಸಿನಿಮಾದಲ್ಲಿ ಅವರು ನಾನು ಒಟ್ಟಿಗೆ ನಟಿಸಿದೆವು, ಆಗ ನಾನು ಕೇಳಿದೆ, ನನ್ನನ್ನು ಕಂಡರೆ ಯಾಕೆ ನಿಮಗೆ ದ್ವೇಷ ಎಂದು ಆಗ ವಡಿವೇಲು, ಅಯ್ಯೋ ಹಾಗೇನೂ ಇಲ್ಲ, ಮುಂದೆ ನಾವಿಬ್ಬರು ಒಟ್ಟಿಗೆ ಸಿನಿಮಾ ಮಾಡೋಣ ಎಂದರು ಆದರೆ ಅದು ಆಗಲಿಲ್ಲ” ಎಂದಿದ್ದಾರೆ ಪ್ರೇಮ ಪ್ರಿಯಾ.

ಆದರೆ ಶಕೀಲಾ, ”ವಡಿವೇಲು ಅವರೆ, ನೀವು ನನಗೆ ಬಹಳ ವರ್ಷಗಳಿಂದಲೂ ಗೊತ್ತು. ನಿಮಗೆ ಸೆಟ್​ಗೆ ಬರಲು ಕಾರು ಸಹ ಕೊಡುತ್ತಿರಲಿಲ್ಲ ಅಂಥಹಾ ಸಮಯದಿಂದಲೂ ನಾನು ನಿಮ್ಮನ್ನು ನೋಡಿದ್ದೇನೆ. ಬಹಳ ಜನ ಸಣ್ಣ ಸಣ್ಣ ಕಲಾವಿದರು ನಿಮ್ಮ ಬಗ್ಗೆ ಹೀಗೆ ಮಾತನಾಡುತ್ತಾರೆ ನನಗೆ ಬಹಳ ಬೇಸರವಾಗುತ್ತದೆ. ನೀವು ದೊಡ್ಡ ನಟರು ಹೀಗೆಲ್ಲ ಮಾಡಬೇಡಿ” ಎಂದು ಶಕೀಲ ಮನವಿ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!