50 ಪಟ್ಟು ಹೆಚ್ಚಾಯ್ತು ಸಂಭಾವನೆ: ಮಮಿತಾ ಬೈಜು ಈಗ ಪಡೆಯುತ್ತಿರುವುದೆಷ್ಟು?

ಕಳೆದ 10 ವರ್ಷಗಳಿಂದಲೂ ಚಿತ್ರರಂಗದಲ್ಲಿದ್ದರೂ ಸಹ ಮಮಿತಾ ಬೈಜು ಹೆಸರು ಮಲಯಾಳಂ ಚಿತ್ರರಂಗದ ಹೊರಗೆ ಕೇಳಿ ಬಂದಿದ್ದ ಎರಡು ವರ್ಷಗಳ ಹಿಂದೆ ಬಿಡುಗಡೆ ಆದ ‘ಪ್ರೇಮಲು’ ಸಿನಿಮಾ ಮೂಲಕ. ಕೇವಲ ಎರಡೇ ವರ್ಷದಲ್ಲಿ ಮಮಿತಾ, ದಕ್ಷಿಣ ಭಾರತದ ಸ್ಟಾರ್ ನಟಿ ಎನಿಸಿಕೊಂಡಿದ್ದಾರೆ. ಅವರ ಸಂಭಾವನೆ ಸಹ ಕೇವಲ ಎರಡೇ ವರ್ಷದಲ್ಲಿ ಸುಮಾರು 50 ಪಟ್ಟು ಹೆಚ್ಚಾಗಿದೆ.

50 ಪಟ್ಟು ಹೆಚ್ಚಾಯ್ತು ಸಂಭಾವನೆ: ಮಮಿತಾ ಬೈಜು ಈಗ ಪಡೆಯುತ್ತಿರುವುದೆಷ್ಟು?
Mamitha Baiju

Updated on: Oct 07, 2026 | 6:40 PM

ಮಲಯಾಳಂನ ಯುವ ನಟಿ ಮಮಿತಾ ಬೈಜು ಇಂದು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪ್ರಸ್ತುತ ಬಲು ಯಶಸ್ವಿ ನಟಿ. ಒಂದರ ಹಿಂದೊಂದು ಸೂಪರ್ ಹಿಟ್, ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಅವರು ನೀಡುತ್ತಿದ್ದಾರೆ. ಮಮಿತಾ ಬೈಜು ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತಿದೆ. ಕಳೆದ 10 ವರ್ಷಗಳಿಂದಲೂ ಚಿತ್ರರಂಗದಲ್ಲಿದ್ದರೂ ಸಹ ಮಮಿತಾ ಬೈಜು ಹೆಸರು ಮಲಯಾಳಂ ಚಿತ್ರರಂಗದ ಹೊರಗೆ ಕೇಳಿ ಬಂದಿದ್ದ ಎರಡು ವರ್ಷಗಳ ಹಿಂದೆ ಬಿಡುಗಡೆ ಆದ ‘ಪ್ರೇಮಲು’ ಸಿನಿಮಾ ಮೂಲಕ. ಕೇವಲ ಎರಡೇ ವರ್ಷದಲ್ಲಿ ಮಮಿತಾ, ದಕ್ಷಿಣ ಭಾರತದ ಸ್ಟಾರ್ ನಟಿ ಎನಿಸಿಕೊಂಡಿದ್ದಾರೆ. ಅವರ ಸಂಭಾವನೆ ಸಹ ಕೇವಲ ಎರಡೇ ವರ್ಷದಲ್ಲಿ ಸುಮಾರು 50 ಪಟ್ಟು ಹೆಚ್ಚಾಗಿದೆ.

2024ರಲ್ಲಿ ಬಿಡುಗಡೆ ಆಗಿದ್ದ ಮಮಿತಾ ನಟನೆಯ ‘ಪ್ರೇಮಲು’ ಸಿನಿಮಾಕ್ಕೆ ಕೇವಲ 8 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದ ಮಮಿತಾ ಈಗ ಪ್ರತಿ ಸಿನಿಮಾಕ್ಕೆ ಮೂರರಿಂದ ನಾಲ್ಕು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಕೇವಲ ಎರಡು ವರ್ಷದಲ್ಲಿ ಅವರ ಸಂಭಾವನೆ ದೊಡ್ಡ ಮಟ್ಟದಲ್ಲಿ ಏರಿಕೆ ಆಗಿದ್ದು. ಈಗಲೂ ಸಹ ಅವರ ಕೈಯಲ್ಲಿ ಹಲವಾರು ಸಿನಿಮಾಗಳಿವೆ. ಮಲಯಾಳಂನ ಬಲು ದುಬಾರಿ ನಟಿಯೂ ಆಗಿದ್ದಾರೆ ಮಮಿತಾ ಬೈಜು.

ಕೇರಳದ ಕೋಟ್ಯಾಗ ಮೂಲದ ಮಮಿತಾ, 2017ರಲ್ಲಿ ತೆರೆಕಂಡ ‘ಸರ್ವೋಪರಿ ಪಾಲಕ್ಕಾರನ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆರಂಭಿಕ ಹಂತದಲ್ಲಿ ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಹಾಗೂ ಸಹಾಯಕ ಪಾತ್ರಗಳಲ್ಲಿ ನಟಿಸಿ ಸಾಕಷ್ಟು ಶ್ರಮಪಟ್ಟರು. ‘ಕೋ-ಕೋ’ ಮತ್ತು ‘ದಕ್ಷಿಣ’ ಚಿತ್ರಗಳಲ್ಲಿ ಗುರುತಿಸಿಕೊಂಡರೂ, ಇವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿರಲಿಲ್ಲ. ಸೂಕ್ತ ಅವಕಾಶಗಳಿಗಾಗಿ ಹಾಗೂ ತಮ್ಮ ನಟನಾ ಪ್ರತಿಭೆಯನ್ನು ಸಾಬೀತುಪಡಿಸಲು ಅವರು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು.

ಇದನ್ನೂ ಓದಿ:ಮಮಿತಾ ಬೈಜು ಕೈ ಹಿಡಿದ ಮಲಯಾಳಂ ಚಿತ್ರರಂಗ

ಮಮಿತಾ ಬೈಜು ಅವರ ವೃತ್ತಿಜೀವನಕ್ಕೆ ದೊಡ್ಡ ಟರ್ನಿಂಗ್ ಪಾಯಿಂಟ್ ಸಿಕ್ಕಿದ್ದು 2024ರಲ್ಲಿ ಬಿಡುಗಡೆಯಾದ ‘ಪ್ರೇಮಲು’ ರೋಮ್ಯಾಂಟಿಕ್ ಸಿನಿಮಾ ಮೂಲಕ. ಈ ಸಿನಿಮಾದಲ್ಲಿ ‘ರೇಣು’ ಪಾತ್ರದಲ್ಲಿ ನಟಿಸಿ ಯುವಜನತೆಯ ಮನಗೆದ್ದರು. ಅತಿ ಕಡಿಮೆ ಬಜೆಟ್‌ನಲ್ಲಿ ತಯಾರಾಗಿ ಜಾಗತಿಕ ಮಟ್ಟದಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆದ ಈ ಚಿತ್ರದ ಬಳಿಕ ಇವರ ಭವಿಷ್ಯವೇ ಬದಲಾಯಿತು. ‘ಪ್ರೇಮಲು’ ಸಿನಿಮಾದ ಬಳಿಕ ಮಮಿತಾ ಅವರಿಗೆ ಒಂದರ ಹಿಂದೊಂದು ದೊಡ್ಡ ಸಿನಿಮಾ ಅವಕಾಶಗಳು ಅರಸಿಕೊಂಡು ಬಂದವು. ವಿಶೇಷವಾಗಿ ತಮಿಳಿನಲ್ಲಿ ಸತತವಾಗಿ ನಾಲ್ಕು ಸೂಪರ್ ಹಿಟ್ ಸಿನಿಮಾಗಳನ್ನು ಮಮಿತಾ ನೀಡಿದರು.

ಮಮಿತಾ, ತಮಿಳಿನಲ್ಲಿ ದಳಪತಿ ವಿಜಯ್ ಜೊತೆ ‘ಜನ ನಾಯಗನ್’, ಧನುಷ್ ಅಭಿನಯದ ‘ಕಾರಾ’, ಸೂರ್ಯ ನಟನೆಯ ‘ವಿಶ್ವನಾಥ್ ಅಂಡ್ ಸನ್ಸ್’, ‘ಡ್ಯೂಡ್’ ಸಿನಿಮಾಗಳು ದೊಡ್ಡ ಹಿಟ್ ಆದವು. ಇತ್ತೀಚೆಗಷ್ಟೆ ಬಿಡುಗಡೆ ಆದ ಅವರ ಮಲಯಾಳಂ ಸಿನಿಮಾ ‘ಬೆತ್‌ಹೆಲೆಮ್ ಕುಡುಂಬ ಯೂನಿಟ್’ ಸಿನಿಮಾ ಸಹ ಭಾರಿ ದೊಡ್ಡ ಹಿಟ್ ಆಯ್ತು. ಪ್ರಸ್ತುತ ಅವರು ಹಲವು ಪ್ರಾಜೆಕ್ಟ್​​ಗಳಲ್ಲಿ ಬ್ಯುಸಿ ಆಗಿದ್ದು, ಮಲಯಾಳಂನ ಸಿನಿಮಾ ‘ಹಲೊ ಡಿಯರ್’, ತಮಿಳಿನ ‘ಇರಂದು ವಾನಮ್’, ಪ್ರದೀಪ್ ರಂಗನಾಥನ್ ನಿರ್ಮಾಣದ ಹೊಸ ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us