AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prakash Raj: ಸ್ಟಾರ್ ನಟರೇ ಮತದಾನ ಮಾಡಲಿಲ್ಲ; ಚುನಾವಣೆಯಲ್ಲಿ ಪ್ರಕಾಶ್ ರಾಜ್ ಪಡೆದ ಮತಗಳೆಷ್ಟು?

MAA Elections 2021: ತೆಲುಗು ಚಿತ್ರರಂಗದ ಮೂವೀ ಆರ್ಟಿಸ್ಟ್ ಅಸೋಸಿಯೇಷನ್​ನ 925 ಸದಸ್ಯರಲ್ಲಿ 883 ಸದಸ್ಯರಿಗೆ ಮತದಾನ ಹಕ್ಕು ಲಭ್ಯವಿತ್ತು. ಈ ಪೈಕಿ 655 ಮತಗಳಷ್ಟೇ ಚಲಾವಣೆಗೊಂಡಿದ್ದವು.

Prakash Raj: ಸ್ಟಾರ್ ನಟರೇ ಮತದಾನ ಮಾಡಲಿಲ್ಲ; ಚುನಾವಣೆಯಲ್ಲಿ ಪ್ರಕಾಶ್ ರಾಜ್ ಪಡೆದ ಮತಗಳೆಷ್ಟು?
ಪ್ರಕಾಶ್​-ವಿಷ್ಣು ಮಂಚು
TV9 Web
| Updated By: guruganesh bhat|

Updated on: Oct 11, 2021 | 10:40 AM

Share

ಹೈದರಾಬಾದ್: ತೆಲುಗು ಚಿತ್ರರಂಗದ ಮೂವೀ ಆರ್ಟಿಸ್ಟ್ ಅಸೋಸಿಯೇಷನ್ (MAA) ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ತೆಲುಗು ನಟ ವಿಷ್ಣು ಮಂಚು ಮತ್ತು ಪ್ರಕಾಶ್ ರಾಜ್ ನಡುವೆ ಭಾರಿ ಹಣಾಹಣಿಯೇ ನಡೆದಿತ್ತು. ಆದರೆ ಅಂತಿಮವಾಗಿ ವಿಷ್ಣು ಮಂಚು 381 ಮತ ಗಳಿದಸಿದರೆ ಪ್ರಕಾಶ್ ರಾಜ್ 274 ಮತ ಗಳಿಸಲಷ್ಟೇ ಶಕ್ಯರಾದರು. ತೆಲುಗು ಚಿತ್ರರಂಗದ ಮೂವೀ ಆರ್ಟಿಸ್ಟ್ ಅಸೋಸಿಯೇಷನ್​ನ (MAA) ಇನ್ನುಳಿದ ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಸೋಮವಾರವಷ್ಟೇ ಘೋಷಣೆಯಾಗಬೇಕಿದೆ.

ಅಧ್ಯಕ್ಷ ಸ್ಥಾನದ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರಾಜ್, ‘ಫಲಿತಾಂಶವನ್ನು ಗೌರವಿಸುತ್ತೇನೆ. ವಿಷ್ಣು ಮಂಚು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ತಿಳಿಸಿದ್ದಾರೆ. ಅಲ್ಲದೇ ಸೋಲು ಗೆಲುವನ್ನೂ ಮೀರಿ ಚಿತ್ರರಂಗದ ಹಿತಕ್ಕಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸಹ ಪ್ರಕಾಶ್ ರಾಜ್ ಕರೆ ಕೊಟ್ಟಿದ್ದಾರೆ.

ತೆಲುಗು ಚಿತ್ರರಂಗದ ಮೂವೀ ಆರ್ಟಿಸ್ಟ್ ಅಸೋಸಿಯೇಷನ್​ನ 925 ಸದಸ್ಯರಲ್ಲಿ 883 ಸದಸ್ಯರಿಗೆ ಮತದಾನ ಹಕ್ಕು ಲಭ್ಯವಿತ್ತು. ಈ ಪೈಕಿ 655 ಮತಗಳಷ್ಟೇ ಚಲಾವಣೆಗೊಂಡಿದ್ದವು. ಮತ ಚಲಾಯಿಸದವರ ಪೈಕಿ ಖ್ಯಾತನಾಮರಾದ ಮಹೇಶ್ ಬಾಬು, ವೆಂಕಟೇಶ್, ಅಲ್ಲು ಅರ್ಜುನ್, ಎನ್​ಟಿಆರ್ ಮತ್ತು ನಾಗ ಚೈತನ್ಯ ಸಹ ಸೇರಿದ್ದಾರೆ.

ಪ್ರಕಾಶ್ ರೈ ಅವರು ಮೂಲತಃ ತೆಲುಗು ನಟ ಅಲ್ಲ. ಹಾಗಾಗಿ ಅವರು ಈ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ವಿರೋಧ ವ್ಯಕ್ತಪಡಿಸಲಾಗಿತ್ತು. ಆದರೆ ಹಲವು ಸ್ಟಾರ್ ಕಲಾವಿದರು ಪ್ರಕಾಶ್ ರಾಜ್ ಪರ ನಿಂತಿದ್ದರೂ. ಆದರೂ ಅವರು ಚುನಾವಣೆಯಲ್ಲಿ ಸೋಲನುಭವಿಸಬೇಕಾಯಿತು.

ಇದನ್ನೂ ಓದಿ: 

MAA Election Result: ಕನ್ನಡದ ಪ್ರಕಾಶ್​ ರಾಜ್​ಗೆ ಮುಖಭಂಗ; ತೆಲುಗು ನಟ ವಿಷ್ಣು ಮಂಚುಗೆ ಜಯ

‘ತಾಯಿ ಆಗಲು ಬಯಸಿದ್ರು ಸಮಂತಾ, ಆದರೆ..’; ನಾಗ ಚೈತನ್ಯ ಜತೆಗಿನ ಡಿವೋರ್ಸ್​ ಬಳಿಕ ನಿರ್ಮಾಪಕಿ ಅಚ್ಚರಿ ಹೇಳಿಕೆ

ಈ ದಿನದಂದು ಗುಟ್ಕಾ, ಸಿಗರೇಟ್ ಸಿಗಲ್ಲ: ಎಲ್ಲವೂ ಬಂದ್​ ಬಂದ್
ಈ ದಿನದಂದು ಗುಟ್ಕಾ, ಸಿಗರೇಟ್ ಸಿಗಲ್ಲ: ಎಲ್ಲವೂ ಬಂದ್​ ಬಂದ್
ಬಿ ಸರೋಜಾ ದೇವಿ ಅವರ ಯಾವ ಸಿನಿಮಾ ಸಿಎಂಗೆ ಇಷ್ಟ?
ಬಿ ಸರೋಜಾ ದೇವಿ ಅವರ ಯಾವ ಸಿನಿಮಾ ಸಿಎಂಗೆ ಇಷ್ಟ?
ಸರೋಜಾ ದೇವಿಯವರನ್ನು ನಮ್ಮೂರ ಮಗಳು ಎಂದು ಕರೆದ ಶಿವಕುಮಾರ್
ಸರೋಜಾ ದೇವಿಯವರನ್ನು ನಮ್ಮೂರ ಮಗಳು ಎಂದು ಕರೆದ ಶಿವಕುಮಾರ್
ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ‘ಅಭಿನಯ ಸರಸ್ವತಿ’
ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ‘ಅಭಿನಯ ಸರಸ್ವತಿ’
ಭೂಮಿಗೆ ಮರಳುತ್ತಿದ್ದಂತೆ ನಗುತ್ತಾ ಕೈ ಬೀಸಿದ ಶುಭಾಂಶು ಶುಕ್ಲಾ
ಭೂಮಿಗೆ ಮರಳುತ್ತಿದ್ದಂತೆ ನಗುತ್ತಾ ಕೈ ಬೀಸಿದ ಶುಭಾಂಶು ಶುಕ್ಲಾ
ಪರಸ್ಪರ ಸಮ್ಮತಿಯಿಂದ ಡಿವೋರ್ಸ್ ಪಡೆದುಕೊಳ್ಳಲು ಮುಂದಾಗಿರುವ ಪತಿ-ಪತ್ನಿ
ಪರಸ್ಪರ ಸಮ್ಮತಿಯಿಂದ ಡಿವೋರ್ಸ್ ಪಡೆದುಕೊಳ್ಳಲು ಮುಂದಾಗಿರುವ ಪತಿ-ಪತ್ನಿ
ಬಾಹ್ಯಾಕಾಶದಿಂದ ಪೆಸಿಫಿಕ್ ಮಹಾಸಾಗರಕ್ಕೆ ಇಳಿದ ಡ್ರ್ಯಾಗನ್ ಕ್ಯಾಪ್ಸುಲ್
ಬಾಹ್ಯಾಕಾಶದಿಂದ ಪೆಸಿಫಿಕ್ ಮಹಾಸಾಗರಕ್ಕೆ ಇಳಿದ ಡ್ರ್ಯಾಗನ್ ಕ್ಯಾಪ್ಸುಲ್
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
ಸರೋಜಾದೇವಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು: ಸಿದ್ದರಾಮಯ್ಯ
ಸರೋಜಾದೇವಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು: ಸಿದ್ದರಾಮಯ್ಯ