Bigg Boss Kannada 8: ಬಿಗ್​ ಬಾಸ್​ ಮನೆಯಲ್ಲಿ ಕೊನೆಗೂ ಮಂಜು ಕನಸು ನನಸಾಯಿತು..

ಬಿಗ್​ ಬಾಸ್​ ಮನಯೆಲ್ಲಿ ಎರಡು ಟೀಂಗಳನ್ನು ಮಾಡಲಾಗಿತ್ತು. ಎರಡೂ ಟೀಂಗಳಿಗೆ ಒಂದಷ್ಟು ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್​ಅನ್ನು ಗೆದ್ದವರು ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆಯಾಗುತ್ತಾರೆ.

Bigg Boss Kannada 8: ಬಿಗ್​ ಬಾಸ್​ ಮನೆಯಲ್ಲಿ ಕೊನೆಗೂ ಮಂಜು ಕನಸು ನನಸಾಯಿತು..
ಮಂಜು ಪಾವಗಡ
Follow us
ರಾಜೇಶ್ ದುಗ್ಗುಮನೆ
|

Updated on:Apr 02, 2021 | 10:35 PM

ಬಿಗ್​ ಬಾಸ್​ ಮನೆಯಲ್ಲಿ ಮಂಜು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕಳೆದ ಬಾರಿ ಬಿಗ್​ ಬಾಸ್​ ಮನೆಯಲ್ಲಿ ಎಲ್ಲರೂ ನಾಮಿನೇಟ್​ ಆಗಿದ್ದಾಗ ಮೊದಲು ಸೇವ್​ ಆಗಿದ್ದು ಮಂಜು. ಅಂದರೆ, ವೀಕ್ಷಕರು ಅತಿ ಹೆಚ್ಚು ಮತ ಹಾಕಿದ್ದು ಅವರಿಗೇ. ಈಗ ಬಿಗ್​ ಬಾಸ್​ ಮನೆಯ ಕ್ಯಾಪ್ಟನ್​ ಆಗಬೇಕು ಎಂದು ಕನಸು ಕಂಡಿದ್ದ ಮಂಜುಗೆ ಕೊನೆಗೂ ಅದೃಷ್ಟ ಕೈ ಹಿಡಿದಿದೆ. ಅವರು ಐದನೇ ವಾರ ಬಿಗ್​ ಬಾಸ್​ ಮನೆಯ ಕ್ಯಾಪ್ಟನ್​ ಆಗಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಎರಡು ಟೀಂಗಳನ್ನು ಮಾಡಲಾಗಿತ್ತು. ಎರಡೂ ಟೀಂಗಳಿಗೆ ಒಂದಷ್ಟು ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್​ಅನ್ನು ಗೆದ್ದವರು ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆಯಾಗುತ್ತಾರೆ. ಅಂತೆಯೇ ಜಾತ್ರೆ ಗ್ಯಾಂಗ್​ ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆಯಾಗಿತ್ತು.

ಒಂದು ಉದ್ದನೆಯ ರಾಡ್​ ರೀತಿಯ ವಸ್ತು ಇರುತ್ತದೆ. ಅದಕ್ಕೆ ಪಕ್ಕದಲ್ಲಿ ಒಂದಷ್ಟು ಪ್ಲೇಟ್​ ಹಾಗೂ ಕಪ್​ಗಳನ್ನು ಇಡಲಾಗಿತ್ತು. ಮೊದಲು ಪ್ಲೇಟ್​ ಇಟ್ಟು ಅದರ ಮೇಲೆ ಕಪ್​ ಇಡಬೇಕು. ಹೀಗೆ, ಮಾಡುವ ಟಾಸ್ಕ್​ನಲ್ಲಿ ಪ್ರಶಾಂತ್​ ಹಾಗೂ ಮಂಜು ಕೊನೆಯದಾಗಿ ಉಳಿದುಕೊಂಡಿದ್ದರು. ಆದರೆ, ಕೊನೆಯದಾಗಿ ಗೆದ್ದಿದ್ದು ಮಂಜು. ಈ ಮೂಲಕ ಐದನೇ ವಾರ ಅವರು ಬಿಗ್​ ಬಾಸ್​ಮನೆಯಲ್ಲಿ ಕ್ಯಾಪ್ಟನ್​ ಆಗಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್​ ಆಗುತ್ತಿದ್ದಂತೆ ಮಂಜು ತಂದೆಯ ಧ್ವನಿ ಬಂದಿದೆ. ಬಿಗ್​ ಬಾಸ್​ನಲ್ಲಿ ಕ್ಯಾಪ್ಟನ್​ ಆಗಿರುವುದರಿಂದ ಸಂತೋಷಪಟ್ಟೆ. ನನ್ನ ಬೆಂಬಲ ಯಾವಾಗೂ ಇರಲಿದೆ ಎಂದರು. ಬಿಗ್​ ಬಾಸ್​ ಮನೆಯಲ್ಲಿ ಪಾಲಕರ ಧ್ವನಿ ಬಂದ ಕೂಡಲೇ ಎಲ್ಲರೂ ಎಗ್ಸೈಟ್​ ಆಗುತ್ತಾರೆ, ಭಾವುಕರಾಗುತ್ತಾರೆ. ಆದರೆ, ಮಂಜು ಅಷ್ಟು ಭಾವುಕರಾಗೇ ಇಲ್ಲ. ನಾನು ಅಮ್ಮನ ಹತ್ತಿರ ನೇರವಾಗಿ ಮಾತನಾಡಿದ್ದೇನೆ. ಆದರೆ, ತಂದೆ ಜತೆ ಮಾತನಾಡಿಲ್ಲ. ಅವರ ಹೆಗಲ ಮೇಲೆ ಇನ್ನೂ ನೇರವಾಗಿ ಕೈ ಹಾಕಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಕಿತ್ತಾಟ; ರಾಜೀವ್​ ಕೊಟ್ಟ ಏಟಿಗೆ ಮಂಜು ಹಲ್ಲೇ ಉದುರೋಯ್ತು!

ಒಮ್ಮೊಮ್ಮೆ ಹುಟ್ಟಲೇ ಬಾರದಿತ್ತು ಅನಿಸುತ್ತೆ; ವೈಷ್ಣವಿಯಲ್ಲಿ ತಾಯಿಯನ್ನು ಕಂಡು ಅತ್ತ ರಘು!

Published On - 10:16 pm, Fri, 2 April 21

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್