ನಮ್ಮಣ್ಣನ ಕೂದಲ ಸುದ್ದಿಗೆ ಬಂದ್ರೆ ಸರಿ ಇರಲ್ಲ; ಬಿಗ್​ ಬಾಸ್​ಗೆ ಮಂಜು ಎಚ್ಚರಿಕೆ

ಬಿಗ್​ ಬಾಸ್​ ಮನೆಯಲ್ಲಿ ಗುರುವಾರ (ಮಾ.18) ಮನೆ ಮಂದಿಯೆಲ್ಲ ಕೂತು ಮಾತನಾಡುತ್ತಿದ್ದರು. ಈ ವೇಳೆ ರಾಜೀವ್​ ತಮ್ಮ ಉದ್ದ ಕೂದಲನ್ನು ಬಿಚ್ಚಿದ್ದಾರೆ. ಅವರ ನೀಳ ಕೂದಲನ್ನು ಕಂಡು ಮನೆ ಮಂದಿಯೆಲ್ಲ ಅಚ್ಚರಿಗೊಂಡಿದ್ದಾರೆ.

ನಮ್ಮಣ್ಣನ ಕೂದಲ ಸುದ್ದಿಗೆ ಬಂದ್ರೆ ಸರಿ ಇರಲ್ಲ; ಬಿಗ್​ ಬಾಸ್​ಗೆ ಮಂಜು ಎಚ್ಚರಿಕೆ
ಮಂಜು ಪಾವಗಡ
Edited By:

Updated on: Mar 19, 2021 | 8:22 AM

ಕಳೆದ ಬಾರಿಯ ಸೀಸನ್​ನಲ್ಲಿ ಶೈನ್​ ಶೆಟ್ಟಿ ಕೂದಲು-ಗಡ್ಡ ಬಿಟ್ಟಿದ್ದರು. ಇದರ ಮೇಲೆ ಬಿಗ್​ ಬಾಸ್​ ಕಣ್ಣು ಬಿದ್ದಿತ್ತು. ಅಷ್ಟೇ ಅಲ್ಲ, ಒಂದು ಸೀಕ್ರೆಟ್​ ಟಾಸ್ಕ್​ ನೀಡಿ ಅದನ್ನು ಕತ್ತರಿಸಿಬಿಟ್ಟಿದ್ದರು. ಈ ಬಾರಿ ಬಿಗ್​​ ಬಾಸ್​ ಮನೆ ಒಳಗೆ ಉದ್ದ ಕೂದಲ ಬಿಟ್ಟೋರು ರಾಜೀವ್​. ಇವರ ಕೂದಲ ಮೇಲೆ ಮನೆಯವರ ಕಣ್ಣು ಬಿದ್ದಿದೆ. ಅಷ್ಟೇ ಅಲ್ಲ, ಈ ವಿಚಾರದಲ್ಲಿ ಮಂಜು ಪಾವಗಡ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.

ಬಿಗ್​ ಬಾಸ್​ಮನೆಯಲ್ಲಿ ಗುರುವಾರ (ಮಾ.18) ಮನೆ ಮಂದಿಯೆಲ್ಲ ಕೂತು ಮಾತನಾಡುತ್ತಿದ್ದರು. ಈ ವೇಳೆ ರಾಜೀವ್​ ತಮ್ಮ ಉದ್ದ ಕೂದಲನ್ನು ಬಿಚ್ಚಿದ್ದಾರೆ. ಅವರ ನೀಳ ಕೂದಲನ್ನು ನೋಡಿ ಮನೆ ಮಂದಿಯೆಲ್ಲ ಅಚ್ಚರಿಗೊಂಡಿದ್ದಾರೆ.

ಈ ವೇಳೆ ಮಾತನಾಡಿದ್ದ ಮಂಜು, ರಾಜೀವ್​ ಬೇಸಿಗೆಯಲ್ಲಿ ಇಷ್ಟೊಂದು ಉದ್ದ ಕೂದಲ ಬಿಡಬಾರದು. ಬಿಗ್​ ಬಾಸ್​ ಮನೆಯಲ್ಲಿ ನಮಗೆ ಬೇಕಷ್ಟು ಆಹಾರ ಸಿಗಲ್ಲ. ಹೀಗಾಗಿ, ಈ ಆಹಾರವನ್ನೆಲ್ಲ ನಿಮ್ಮ ಕೂದಲೇ ತಿಂದು ಬಿಡುತ್ತದೆ. ಹೀಗಾಗಿ ಕೂದಲನ್ನು ಕತ್ತರಿಸಿ ಬಿಡಿ ಎಂದರು.

ಆಗ ರಾಜೀವ್​, ನನ್ನ ಕೂದಲ ಮೇಲೇಕೆ ಕಣ್ಣು ಎಂದು ಪ್ರಶ್ನೆ ಮಾಡಿದರು. ಆಗ ಮಂಜು, ನಾನು ಕೂದಲ ಮೇಲೆ ಕಣ್ಣನ್ನು ಹಾಕಿಲ್ಲ. ದಯವಿಟ್ಟು ಹಾಗೆ ತಿಳಿಬೇಡಿ ಎಂದು ಕೇಳಿದರು. ಈ ವೇಳೆ ಮಂಜು, ಅಯ್ಯೋ ಆಯ್ತಣ್ಣ ಇನ್ನು ಹಾಗೆ ಹೇಳುವುದಿಲ್ಲ ಎಂದರು. ಅಷ್ಟೇ ಅಲ್ಲ ಬಿಗ್​ ಬಾಸ್​ಗೆ ಒಂದು ಎಚ್ಚರಿಕೆಯನ್ನೂ ನೀಡಿದರು. ‘ರಾಜೀವ್​ ಅವರ ಕೂದಲಿಗೆ ಏನೂ ಆಗಬಾರದು. ಬಿಗ್​ ಬಾಸ್​… ನಮ್ಮಣ್ಣನ ಕೂದಲ ಸುದ್ದಿಗೆ ಬಂದ್ರೆ ಸರಿ ಇರಲ್ಲ’ ಎಂದು ಹೇಳಿದರು. ಇದನ್ನು ಕೇಳಿದ ರಾಜೀವ್​, ನೀವೆಲ್ಲರೂ ಸೇರಿ ನನ್ನ ಕೂದಲಿಗೆ ಒಂದು ಗತಿ ಕಾಣಿಸೋದು ಖಚಿತ ಎಂದು ನಕ್ಕರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ-ಮಂಜು ರೊಮ್ಯಾನ್ಸ್​ ಕಂಡು ನಾಚಿ ನೀರಾದ ಪುಟಾಣಿ ವಿಶ್ವ

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us