‘ಮಂಜು ವಿನ್ನರ್​, ವೈಷ್ಣವಿ ರನ್ನರ್​ ಅಪ್​’; ಬಿಗ್​ ಬಾಸ್​ ಸ್ಪರ್ಧಿ ನುಡಿದ್ರು ಭವಿಷ್ಯ

ಬಿಗ್​ ಬಾಸ್​ನಲ್ಲಿ ಅರವಿಂದ್​ ಜತೆಗೆ ನಿಧಿ ಕಿತ್ತಾಡಿಕೊಂಡಿದ್ದರು. ಅರವಿಂದ್​ ಮಾಡಿದ ಸಾಧನೆಗೆ ಅವಮಾನ ಮಾಡುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಮನೆಯಿಂದ ಹೊರ ಹೋಗೋಕೆ ಇದು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

‘ಮಂಜು ವಿನ್ನರ್​, ವೈಷ್ಣವಿ ರನ್ನರ್​ ಅಪ್​’; ಬಿಗ್​ ಬಾಸ್​ ಸ್ಪರ್ಧಿ ನುಡಿದ್ರು ಭವಿಷ್ಯ
ವೈಷ್ಣವಿ -ಮಂಜು
Edited By:

Updated on: Jul 05, 2021 | 11:00 AM

‘ಕನ್ನಡ ಬಿಗ್​​ ಬಾಸ್ ಸೀಸನ್​ 8’ 83 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಮನೆಯಲ್ಲಿ 11 ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದು, ಯಾರು ಗೆಲ್ಲಲಿದ್ದಾರೆ ಎನ್ನುವ ಬಗ್ಗೆ ಚರ್ಚೆ ಜೋರಾಗಿದೆ. ಈ ಮಧ್ಯೆ ಕಳೆದ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್​ ಆದ ನಿಧಿ ಸುಬ್ಬಯ್ಯ ಈ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸೀಸನ್​ 8 ಯಾರು ಗೆಲ್ಲಬಹುದು ಎಂದು ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಬಿಗ್​ ಬಾಸ್​ನಲ್ಲಿ ಅರವಿಂದ್​ ಜತೆಗೆ ನಿಧಿ ಕಿತ್ತಾಡಿಕೊಂಡಿದ್ದರು. ಅರವಿಂದ್​ ಮಾಡಿದ ಸಾಧನೆಗೆ ಅವಮಾನ ಮಾಡುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಮನೆಯಿಂದ ಹೊರ ಹೋಗೋಕೆ ಇದು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ನಿಧಿ ಮನೆಯಿಂದ ಹೊರ ಬರುತ್ತಿದ್ದಂತೆ, ಶುಭಾ ಪೂಂಜಾ ತುಂಬಾನೇ ಕಣ್ಣೀರು ಹಾಕಿದ್ದಾರೆ. ನಂತರ ನಿಧಿ ಅವರು ವೇದಿಕೆ ಮೇಲೆ ಕಿಚ್ಚ ಸುದೀಪ್​ ಅವರ ಜತೆ ಮಾತುಕತೆ ನಡೆಸಿದ್ದಾರೆ.

‘ನಿಮ್ಮ ಪ್ರಕಾರ ಫೈನಲ್​ನಲ್ಲಿ ಯಾರಿರಬಹುದು ಎಂದು ನಿಮಗನ್ನಿಸುತ್ತದೆ’ ಎನ್ನುವ ಪ್ರಶ್ನೆಯನ್ನು ಸುದೀಪ್​ ಕೇಳಿದರು. ‘ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ,​ ಮಂಜು, ಶುಭಾ, ವೈಷ್ಣವಿ’ ಎನ್ನುವ ಉತ್ತರ ನಿಧಿ ಕಡೆಯಿಂದ ಬಂತು. ಕೊನೆಯದಾಗಿ ಉಳಿಯೋ ಇಬ್ಬರು ಸ್ಪರ್ಧಿಗಳ ಹೆಸರನ್ನು ಹೇಳಿ ಎಂದು ಸುದೀಪ್​ ಕೇಳಿದರು. ‘ಮಂಜು ಮತ್ತು ವೈಷ್ಣವಿ ಕೊನೆಯಲ್ಲಿ ಉಳಿಯುತ್ತಾರೆ. ಇದರಲ್ಲಿ ಗೆಲ್ಲೋದು ಮಂಜು’ ಎಂದು ನಿಧಿ ಹೇಳಿದರು.

‘ಬಿಗ್​ ಬಾಸ್​ ಮನೆಯಿಂದ ಈ ವಾರ ಯಾರು ಹೊರ ಹೋಗಬೇಕು’ ಎಂದು ಕೇಳಿದ ಪ್ರಶ್ನೆಗೆ ಚಕ್ರವರ್ತಿ ಅವರ ಹೆಸರನ್ನು ನಿಧಿ ತೆಗೆದುಕೊಂಡರು. ಮನೆಯಲ್ಲಿ ಚಕ್ರವರ್ತಿ ನಡೆದುಕೊಳ್ಳುತ್ತಿರುವ ರೀತಿ ಅನೇಕರಿಗೆ ಇಷ್ಟವಾಗುತ್ತಿಲ್ಲ. ಈ ಕಾರಣಕ್ಕೆ ನಿಧಿ ಈ ರೀತಿ ಹೇಳಿದ್ದಾರೆ. ಯಾರು ಬಿಗ್​ ಬಾಸ್​ ಮನೆಯಿಂದ ಹೊರ ಹೋಗುತ್ತಾರೆ ಎಂದು ನಿಮಗನಿಸುತ್ತದೆ ಎನ್ನುವ ಪ್ರಶ್ನೆಯನ್ನೂ ನಿಧಿ ಮುಂದೆ ಇಡಲಾಯಿತು. ಇದಕ್ಕೆ ಅವರು ಪ್ರಿಯಾಂಕಾ ತಿಮ್ಮೇಶ್​ ಹೆಸರನ್ನು ಸೂಚಿಸಿದರು. ಅವರಿಗೆ ಕಡಿಮೆ ಸಮಯ ಸಿಕ್ಕಿದೆ. ಹೀಗಾಗಿ, ಅವರು ಮುಂದಿನ ವಾರ ಹೊರ ಹೋಗುತ್ತಾರೆ ಎಂದು ನನಗನ್ನಿಸುತ್ತದೆ ಎಂದರು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ನಿಧಿ ಸುಬ್ಬಯ್ಯ ಎಲಿಮಿನೇಟ್ ಆಗೋಕೆ ಆ ಒಂದು ಮಾತು ಕಾರಣವಾಯ್ತು

TV9 Web

TV9 Kannada

Read More
Loading...
Unable to load recommendations.
Follow Us