ತ್ರಿಷಾ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ ಮನ್ಸೂರ್ಗೆ 1 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್
ಮನ್ಸೂರ್ ಅಲಿ ಖಾನ್ ಹಾಗೂ ತ್ರಿಷಾ ‘ಲಿಯೋ’ ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ, ಒಟ್ಟಿಗೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿಲ್ಲ. ಈ ವಿಚಾರದ ಬಗ್ಗೆ ಸಂದರ್ಶನದಲ್ಲಿ ಮಾತನಾಡುವಾಗ ಬಾಯಿಗೆ ಬಂದಂತೆ ಮನ್ಸೂರ್ ಹೇಳಿಕೆ ನೀಡಿದ್ದರು.

ರೇಪ್ ಕಮೆಂಟ್ ಮಾಡಿದ್ದಲ್ಲದೆ ಕಲಾವಿದರಾದ ತ್ರಿಷಾ (Trisha), ಚಿರಂಜೀವಿ ಹಾಗೂ ಖುಷ್ಬು ಸುಂದರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದ ಮನ್ಸೂರ್ ಅಲಿ ಖಾನ್ಗೆ ತೀವ್ರ ಹಿನ್ನಡೆ ಆಗಿದೆ. ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಮನ್ಸೂರ್ ಅಲಿ ಖಾನ್ಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಮನ್ಸೂರ್ ಅಲಿ ಖಾನ್ ಅವರು ಸಲ್ಲಿಸಿರುವ ಅರ್ಜಿ ಪಬ್ಲಿಸಿಟಿ ಸ್ಟಂಟ್ ರೀತಿ ಕಾಣುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಕೋರ್ಟ್ ಕ್ರಮಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮನ್ಸೂರ್ ಅವರು ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ‘ತ್ರಿಷಾ, ಚಿರಂಜೀವಿ ಹಾಗೂ ಖುಷ್ಬೂ ಅವರು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ತಮ್ಮ ಮಾನಹರಣ ಮಾಡಿದ್ದಾರೆ. ಅವರ ವಿರುದ್ಧ ಮಾನನಷ್ಟ ಕೇಸ್ ದಾಖಲಿಸಲು ಒಪ್ಪಿಗೆ ನೀಡಬೇಕು’ ಎಂದು ಮನ್ಸೂರ್ ಅಲಿ ಖಾನ್ ಕೇಳಿದ್ದರು. ಡಿಸೆಂಬರ್ 11ರಂದು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸತೀಶ್ ಕುಮಾರ್ ಅವರು, ‘ಮನ್ಸೂರ್ ಅಲಿ ಖಾನ್ ನಟಿಯ ವಿರುದ್ಧ ಕೆಟ್ಟ ಪದ ಬಳಕೆ ಮಾಡಿದ್ದಾರೆ. ನಿಜವಾಗಿ ಹೇಳಬೇಕು ಎಂದರೆ ನಟಿ ತ್ರಿಷಾ ನ್ಯಾಯಾಲಯದ ಮೆಟ್ಟಿಲೇರಬೇಕಿತ್ತು’ ಎಂದಿದ್ದರು.
ಈಗ ಕೋರ್ಟ್ ಮನ್ಸೂರ್ ಅಲಿ ಖಾನ್ಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಚೆನ್ನೈನ ಕ್ಯಾನ್ಸರ್ ಸಂಸ್ಥೆಗೆ ಈ ಹಣವನ್ನು ಡಿಪೋಸಿಟ್ ಮಾಡುವಂತೆ ಸೂಚನೆ ನೀಡಿದೆ. ತ್ರಿಷಾ ಅವರನ್ನು ಬೆಂಬಲಿಸಿರುವ ಕೋರ್ಟ್, ‘ಈ ಹೇಳಿಕೆಗೆ ಎಲ್ಲರೂ ಹೇಗೆ ಪ್ರತಿಕ್ರಿಯಿಸುತ್ತಿದ್ದರೋ ತ್ರಿಷಾ ಕೂಡ ಹಾಗೆಯೇ ಪ್ರತಿಕ್ರಿಯಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಚಿರಂಜೀವಿ, ತ್ರಿಷಾ ವಿರುದ್ಧ ಮಾನನಷ್ಟ ಮೊಕದ್ದಮೆ: ನಟನಿಗೆ ಕೋರ್ಟ್ ತಪರಾಕಿ
ಮನ್ಸೂರ್ ಅಲಿ ಖಾನ್ ಹಾಗೂ ತ್ರಿಷಾ ‘ಲಿಯೋ’ ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ, ಒಟ್ಟಿಗೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿಲ್ಲ. ಈ ವಿಚಾರದ ಬಗ್ಗೆ ಸಂದರ್ಶನದಲ್ಲಿ ಮಾತನಾಡುವಾಗ ಬಾಯಿಗೆ ಬಂದಂತೆ ಮನ್ಸೂರ್ ಹೇಳಿಕೆ ನೀಡಿದ್ದರು. ‘ನಾನು ಈ ಮೊದಲು ಸಾಕಷ್ಟು ರೇಪ್ ದೃಶ್ಯಗಳಲ್ಲಿ ನಟಿಸಿದ್ದೇನೆ. ತ್ರಿಷಾ ಕೂಡ ಲಿಯೋ ಚಿತ್ರದಲ್ಲಿ ಇರುತ್ತಾರೆ ಎಂದಾಗ ಖುಷಿ ಆಯಿತು. ಅವರ ಜೊತೆ ಬೆಡ್ರೂಂ ದೃಶ್ಯ ಇರುತ್ತದೆ ಎಂದು ಭಾವಿಸಿದ್ದೆ. ಆದರೆ, ಅವರನ್ನು ನೋಡುವ ಅವಕಾಶವೂ ಸಿಗಲಿಲ್ಲ’ ಎಂದಿದ್ದರು ಮನ್ಸೂರ್ ಅಲಿ ಖಾನ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ




